twitter
    For Quick Alerts
    ALLOW NOTIFICATIONS  
    For Daily Alerts

    ಖತರ್ನಾಕ್, ಕಾಫಿ ವಿತ್ ಮೈ ವೈಫ್ ಬಿಗ್ ಫೈಟ್

    By Mahesh
    |

    'ಖತರ್ನಾಕ್' ಚಿತ್ರ ಸೆಟ್ಟೇರಿದ ಸಮಯದಿಂದಲೂ ಸುದ್ದಿ ಮಾಡುತ್ತಲೇ ಇದೆ. ಈ ಚಿತ್ರಕ್ಕೆ ಮೊದಲು ಉಮೇಶ್ ರೆಡ್ಡಿ ಎಂದು ಹೆಸರಿಡಲಾಗಿತ್ತು. ಶೀರ್ಷಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ ಖತರ್ನಾಕ್ ಎಂದು ಬದಲಾಯಿಸಲಾಯಿತು. ಇತ್ತೀಚೆಗೆ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಅರ್ಹತಾಪತ್ರವನ್ನು ನೀಡಲು ಮುಂದಾಗಿತ್ತು. ಆದರೆ ನಮ್ಮ ಸಿನಿಮಾಗೆ ಎ ಅರ್ಹತಾ ಪತ್ರ ಬೇಡವೆಂದಿರುವ ನಿರ್ಮಾಪಕ ಆದಿತ್ಯ ರಮೇಶ್ ಅವರು ರಿವೈಸಿಂಗ್ ಕಮಿಟಿ ಮೆಟ್ಟಿಲೇದ್ದರು. ಅಂತೂ ಇಂತೂ ಚಿತ್ರ ಈ ವಾರ ಬಿಡುಗಡೆಗೆ ಸಿದ್ಧವಾಗಿದೆ.

    ಆದಿತ್ಯ ರಮೇಶ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಖತರ್ನಾಕ್' ಚಿತ್ರಕ್ಕೆ ಯು ಅಥವಾ ಯು/ಎ ಸರ್ಟಿಫಿಕೇಟ್ ಸಿಗಬೇಕು ಎಂಬುದು ನಿರ್ಮಾಪಕರ ಅಭಿಪ್ರಾಯ. ರೂಪಿಕಾ ಅವರ ಖತರ್ನಾಕ್ ಚಿತ್ರಗಳು ಈಗಾಗಲೆ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಜತೆಗೆ ಸರಣಿ ರೇಪಿಸ್ಟ್, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ ಕಥೆ ಹೊಂದಿರುವ ಚಿತ್ರವಾದ್ದರಿಂದ ಸರ್ಟಿಫಿಕೇಟ್ ಏನೇ ಇದ್ದರೂ ಚಿತ್ರದ ಬಗ್ಗೆ ಜನಕ್ಕೆ ನಿರೀಕ್ಷೆಯಂತೂ ಇದ್ದೇ ಇದೆ

    ಖತರ್ನಾಕ್ ಚಿತ್ರದ ಜತೆಗೆ ಹೊಸಬರ 'ಕಲರ್ಸ್ ಇನ್ ಬೆಂಗಳೂರು', ಅನೀಶ್ ತೇಜೇಶ್ವರ್ ಹಾಗೂ ಸಿಂಧು ಲೋಕನಾಥ್ ಯಶಸ್ವಿ ಜೋಡಿಯ 'ಕಾಫಿ ವಿಥ್ ಮೈ ವೈಫ್' ಚಿತ್ರಗಳು ತೆರೆ ಕಾಣುತ್ತಿವೆ. ದಕ್ಷಿಣ ಭಾರತದ ಬಹು ನಿರೀಕ್ಷೆಯ ಚಿತ್ರ ತಮಿಳಿನ 'ಈರಾಂಡಾಂ ಉಳಗಂ' ಕೂಡಾ ಈ ವಾರ ಬೆಳ್ಳಿತೆರೆಗೆ ಬರಲಿದೆ. ಬಹುದಿನಗಳ ನಂತರ ಸೆಲ್ವರಾಘವನ್ ನಿರ್ದೇಶನ (ಧನುಷ್ ಸೋದರ) ಹ್ಯಾರೀಸ್ ಜಯರಾಜ್ ಸಂಗೀತ ಜೋಡಿಯ ಚಿತ್ರ ಬರುತ್ತಿದೆ. ಅನುಷಾ ಶೆಟ್ಟಿ ಹಾಗೂ ಆರ್ಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಲಾಗಿದೆ.

    ಖತರ್ನಾಕ್

    ಖತರ್ನಾಕ್

    ಆದಿತ್ಯ ರಮೇಶ್ ಮೂವೀಸ್ ಲಾಂಛನದಲ್ಲಿ ಆದಿತ್ಯ ರಮೇಶ್ ಅವರು ನಿರ್ಮಿಸಿರುವ 'ಖತರ್ನಾಕ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಮಳವಳ್ಳಿ ಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿಕುಮಾರ್ ಕಲಾನಿರ್ದೇಶನವಿರುವ 'ಉಮೇಶ್ ರೆಡ್ಡಿ' ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಸಹ ನಿರ್ದೇಶನವಿದೆ.ರವಿಕಾಳೆ, ರವಿವರ್ಮ, ರೂಪಿಕಾ, ಶೋಭಿನ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮುರಳಿಮೋಹನ್, ತುಳಸಿಶಿವಮಣಿ, ರವೀಂದ್ರನಾಥ್, ತುಮಕೂರು ಮೋಹನ್, ಶೋಭಾರಾಘವೇಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ಕಲರ್ಸ್ ಇನ್ ಬೆಂಗಳೂರು

    ಕಲರ್ಸ್ ಇನ್ ಬೆಂಗಳೂರು

    ಮೆಟ್ರೋ ಲೈಫ್ ಸ್ಟೈಲ್ ಎನ್ನುವ ಅಡಿಬರಹವಿರುವ ಕಲರ್ಸ್ ಇನ್ ಬೆಂಗಳೂರು ಚಿತ್ರ ಸೈಬರ್ ಕ್ರೈಂ, ವಯಸ್ಕರ ಗೆಳಯ ಗೆಳತಿ ಹುಡುಕಾಟ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಜಿ ಶ್ರೀನಿವಾಸ್ ಅಭಿನಯದ ಈ ಚಿತ್ರಕ್ಕೆ ಸಪ್ನ ಮುಖ್ಯ ಚಿತ್ರಮಂದಿರವಾಗಿದೆ.

    ಕಾಫಿ ವಿಥ್ ಮೈ ವೈಫ್

    ಕಾಫಿ ವಿಥ್ ಮೈ ವೈಫ್

    ಹಾಲು, ಸಕ್ಕರೆ, ಕಾಫಿ ಪುಡಿ, ಸ್ವಲ್ಪ ಕಾಮಿಡಿ, ಸ್ವಲ್ಪ ರೋಮ್ಯಾನ್ಸ್, ಜೊತೆಗೆ ಹೆಂಡತಿ ಇದ್ದರೆ ಕಾಫಿ ರುಚಿ ಚೆನ್ನ ಎನ್ನುತ್ತಿರುವ ಅನೀಶ್ ತೇಜೇಶ್ವರ್ ಅವರು ನನ್ ಲೈಫಲ್ಲಿ ಚಿತ್ರದ ನಂತರ ಮತ್ತೊಮ್ಮೆ ಸಿಂಧು ಲೋಕನಾಥ್ ಜತೆ ಕಾಣಿಸಿಕೊಂಡಿದ್ದಾರೆ.

    ಈರಾಂಡಾಂ ಉಳಗಂ (ತಮಿಳು)

    ಈರಾಂಡಾಂ ಉಳಗಂ (ತಮಿಳು)

    'ಈರಾಂಡಾಂ ಉಳಗಂ' ಕೂಡಾ ಈ ವಾರ ಬೆಳ್ಳಿತೆರೆಗೆ ಬರಲಿದೆ. ಬಹುದಿನಗಳ ನಂತರ ಸೆಲ್ವರಾಘವನ್ ನಿರ್ದೇಶನ (ಧನುಷ್ ಸೋದರ) ಹ್ಯಾರೀಸ್ ಜಯರಾಜ್ ಸಂಗೀತ ಜೋಡಿಯ ಚಿತ್ರ ಬರುತ್ತಿದೆ. ಅನುಷಾ ಶೆಟ್ಟಿ ಹಾಗೂ ಆರ್ಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಲಾಗಿದೆ.

    ಖತರ್ನಾಕ್ ಟ್ರೇಲರ್

    ಮಳವಳ್ಳಿ ಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ರವಿಕಾಳೆ, ರೂಪಿಕಾ ಅಭಿನಯದ ಸಿರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿ ಕಥೆಯುಳ್ಳ ಖತರ್ನಾಕ್ ಚಿತ್ರದ ಟ್ರೇಲರ್ ನೋಡಿ

    ಕಾಫಿ ವಿಥ್ ಮೈ ವೈಫ್ ಟ್ರೇಲರ್

    ಅನೀಶ್ ತೇಜೇಶ್ವರ್ - ಸಿಂಧು ಲೋಕನಾಥ್ ಜೋಡಿಯ ಕಾಫಿ ವಿಥ್ ಮೈ ವೈಫ್ ಚಿತ್ರದ ಟ್ರೇಲರ್ ನೋಡಿ

    ಈರಾಂಡಂ ಉಳಗಂ ಟ್ರೇಲರ್ ಸೆಲ್ವ

    ರಾಘವನ್ ನಿರ್ದೇಶನದ ಆರ್ಯ, ಅನುಷಾ ಶೆಟ್ಟಿ ನಟಿಸಿರುವ ಈರಾಂಡಂ ಉಳಗಂ ಚಿತ್ರದ ಟ್ರೇಲರ್ ನೋಡಿ

    English summary
    It is well known that Khatarnak movie was awarded 'A' Certificate from the censor board in October. Questioning the decision of censor board, the crew had taken the movie to revising committee. Movie is releasing along with Coffee with My Wife and Colours in Bangalore this week
    Tuesday, November 19, 2013, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X