twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಟಿಟಿಈ ವೈಭವೀಕರಣ ಯೋಧರ ಚಾರಿತ್ರ ಪತನ

    By Super
    |

    ನವದೆಹಲಿ : ಕಾಟ್ರುಕ್ಕೆನ್ನ ವೇಲಿ ಎಂಬ ಖುಶ್ಬೂ ಅಭಿನಯದ ತಮಿಳು ಚಿತ್ರ ಸಿದ್ಧವಾಗಿ 6 ತಿಂಗಳಾಯಿತು. ಸಿನಿಮಾ ಪ್ರಮಾಣ ಪತ್ರ ಮೇಲ್ಮನವಿ ನ್ಯಾಯಮಂಡಲಿ ಚಿತ್ರವನ್ನು ತೆರೆಗಂಟಿಸಲು ಸುತಾರಾಂ ಒಪ್ಪುತ್ತಿಲ್ಲ.

    ಎಲ್ಟಿಟಿಈ ಹಾಗೂ ಗೆರಿಲ್ಲಾದಂಥ ಸಂಘಟನೆಗಳನ್ನು ವೈಭವೀಕರಿಸಿರುವುದಲ್ಲದೆ ನೆರೆಯ ಮಿತ್ರ ರಾಷ್ಟ್ರದ ಮಿಲಿಟರಿ ಪಡೆಯನ್ನು ಮಂದ ಬೆಳಕಲ್ಲಿ ತೋರಿಸುವ ಈ ಚಿತ್ರ ಪ್ರದರ್ಶನಕ್ಕೆ ಅರ್ಹವಾದುದಲ್ಲ ಎಂಬುದು ನ್ಯಾಯಮಂಡಲಿ ಹೇಳಿಕೆ. ಮದ್ರಾಸು ಪ್ರಾದೇಶಿಕ ಸೆನ್ಸಾರ್‌ ಮಂಡಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಒಪ್ಪದ ಕಾರಣ ಚಿತ್ರದ ನಿರ್ದೇಶಕ ಪುಗಳೆಂದಿ ತಂಗರಾಜ್‌ ಕಳೆದೊಂದು ತಿಂಗಳಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ಪತ್ರಿಕೆಯಾಂದು ಇಡೀ ಪ್ರಕರಣವನ್ನು ತೆರೆದಿಟ್ಟಿದೆ.

    ಚಿತ್ರದ ಶೀರ್ಷಿಕೆ 'ಗಾಳಿಗೆ ಬೇಲಿ ಅಸಾಧ್ಯ" ಎಂಬರ್ಥದ್ದು. ಸೈನಿಕರ ಧಾಳಿಗೆ ತುತ್ತಾಗುವ ಹೆಣ್ಣು ಯೋಧಳೊಬ್ಬಳು ಗೆಳೆಯರ ನೆರವಿನಿಂದ ಪಾಕ್‌ ಗಡಿ ದಾಟಿ ಹೋಗುವುದು ಚಿತ್ರದ ಕಥೆಯ ತಿರುಳು. ಆಕೆಗೆ ಚಿಕಿತ್ಸೆ ನೀಡುವಂತೆ ಒಬ್ಬ ಡಾಕ್ಟರನ್ನು ಮಿಲಿಟರಿ ಗೆಳೆಯರು ಬಂದೂಕು ತೋರಿಸಿ ಕರೆ ತರುತ್ತಾರೆ. ಸದಾ ಬಂದೂಕಿನ ನಳಿಕೆ ತನ್ನ ಮೇಲೆ ನೆಟ್ಟಿದ್ದರೂ, ಮಹಿಳಾ ಯೋಧೆಯ ಕಣ್ಣಿನ ಪ್ರೇಮಾಮೃತ ಆತನನ್ನು ಸೆಳೆಯುತ್ತದೆ. ಹೀಗೆ ತೀರಾ ಗಂಭೀರ ಕಥೆಯಲ್ಲೊಂದು ವಿಚಿತ್ರ ಪ್ರೇಮ ಹುಟ್ಟುತ್ತದೆ.

    ಚಿತ್ರವನ್ನು ತೆರೆಗೆ ತರಲು ಒಪ್ಪಿಗೆ ಕೊಡದಿರಲು ಕಾರಣ- ಮೊದಲೇ ರಾಜ್‌ಕುಮಾರ್‌ ಅಪಹರಣದ ನಂತರ ಗರಿ ಬಿಚ್ಚಿ, ಗಾಳಿಯಲ್ಲೆಲ್ಲಾ ತೇಲಾಡುತ್ತಿರುವ ಎಲ್ಟಿಟಿಈ ವೈಭವೀಕರಣ. ಅವರ ನಡೆ- ನುಡಿ, ಕಾರ್ಯತಂತ್ರ, ಕೊಲ್ಲಲು- ಸಾಯಲು ಹೇಸದ ಗಂಡೆದೆಗಾರಿಕೆಯನ್ನು ಬಿಂಬಿಸುವುದಲ್ಲದೆ, ಶ್ರೀಲಂಕಾದ ಯೋಧರನ್ನು ಕೊಲೆಗಡುಕರು, ಮಾನಭಂಗ ಮಾಡೋ ದೊರೆಗಳನ್ನಾಗಿ ತೋರಿಸಿದೆ. ರಾಜೀವ್‌ ಗಾಂಧಿ ಹತ್ಯೆಯ ಆ ದಿನಗಳಲ್ಲಿ ಕೇಳಿ ಬರುತ್ತಿದ್ದ ಸುದ್ದಿಗಳೇ ಚಿತ್ರದ ಜೀವಾಳ ಎನ್ನಬಹುದು. ಜೊತೆಗೆ ಎಲ್ಟಿಟಿಈ ಪಡೆಯ ಯೋಗಿ ಎಂಬ ಪಾತ್ರ ಸಯನೈಡ್‌ ನುಂಗುವ ದೃಶ್ಯವೂ ಚಿತ್ರದಲ್ಲಿದೆ.

    ತಮ್ಮ ಚಿತ್ರಕ್ಕೆ ಒಪ್ಪಿಗೆ ಕೊಡದ ಮದ್ರಾಸು ಸೆನ್ಸಾರ್‌ ಮಂಡಲಿ ನಿರ್ಣಯದಿಂದ ರೊಚ್ಚಿಗೆದ್ದ ಪುಗಳೆಂದಿ ಆಮರಣಾಂತ ಉಪವಾಸ ಕೂತರು. ಆರು ದಿನ ಅನ್ನ ನೀರಿಲ್ಲದೆ ಕಳೆದರು. ಆಗ ಖ್ಯಾತ ಚಿತ್ರ ನಿರ್ಮಾಪಕ ಮತ್ತು ರಾಜ್ಯಸಭಾ ಸದಸ್ಯ ದಾಸರಿ ನಾರಾಯಣ ರಾವ್‌ ಉಪವಾಸ ಬಿಡುವಂತೆ ಮನವೊಲಿಸಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮದ್ರಾಸ್‌ ಸೆನ್ಸಾರ್‌ ಮಂಡಲಿಯ ನಿರ್ಣಯದ ವಿರುದ್ಧ ಒಂದು ಪತ್ರ ಬರೆದರು.

    ಪುಗಳೆಂದಿ ಸುಮ್ಮನಾಗದೆ, ದೆಹಲಿ ನ್ಯಾಯಮಂಡಲಿಯ ಮೊರೆ ಹೋದರು. ವಿಚಾರಣೆ ನಡೆಸಿದ ನಂತರವೂ ಈವರೆಗೆ ಅದು ಏನೂ ತೀರ್ಪು ಕೊಟ್ಟಿಲ್ಲ. ಖುಶ್ಬೂ ಹಾಗೂ ಸುಜಿತ ಅಭಿನಯದ ಈ ಚಿತ್ರವನ್ನು ತಮಿಳುನಾಡು ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ.ವೆಲ್ಲೈನ್‌ ನಿರ್ಮಿಸಿದ್ದಾರೆ. ಈ ಹಿಂದೆ ಮಣಿರತ್ನಂರ ಬಾಂಬೆ ಚಿತ್ರ ಇಂಥ ತೊಂದರೆಗೆ ಸಿಲುಕಿದ್ದನ್ನು ಸ್ಮರಿಸಬಹುದು. (ಯುಎನ್‌ಐ)

    English summary
    Security beefed up for Hrithik Roshan and Exaggeration of LTTE : tamil movie banned
    Sunday, July 7, 2013, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X