ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನ ಮರ್ಯಾದೆ ಬೀದಿಗೆ ತಂದ ಕನ್ನಡದ ನಟಿ
Recommended Video

ಲೈಂಗಿಕ ಕಿರುಕುಳ, ಲೈಂಗಿಕ ಕಿರುಕುಳ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಿನಿಮಾರಂಗದಲ್ಲಿ ಅಂಗಳದಲ್ಲಿ ಕೇಳಿ ಬರುತ್ತಿರುವ ಒಂದೇ ಶಬ್ದವಿದು. ಸಿನಿಮಾ ಆಫರ್ ಗಾಗಿ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಇಂಥದೊಂದು ಪದ್ಧತಿ ಕನ್ನಡದಲ್ಲೂ ಇದೆ ಎಂದು ಚಿತ್ರದ ನಾಯಕಿಯರು ಒಬ್ಬೊಬ್ಬರಾಗಿಯೇ ಬಾಯಿ ಬಿಡುತ್ತಿದ್ದಾರೆ.
ಇತ್ತೀಚಿಗಷ್ಟೆ ನಟಿ ಕೃಷಿ ತಾಪಂಡ ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ ಇದೆ. ಅದರಿಂದ ಅದೆಷ್ಟೋ ಅವಕಾಶಗಳನ್ನ ಕಳೆದುಕೊಂಡಿದ್ದೇನೆ ಎನ್ನುವ ಸತ್ಯವನ್ನ ಜನರ ಮುಂದೆ ಬಿಚ್ಚಿಟ್ಟಿದ್ದರು. ಈಗ ಅದೇ ಸಾಲಿನಲ್ಲಿ ಮತ್ತೊಬ್ಬ ನಟಿ ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನ ಜನ್ಮ ಜಾಲಾಡಿದ್ದಾಳೆ.
ಅಷ್ಟಕ್ಕೂ ಅಷ್ಟು ಧೈರ್ಯವಾಗಿ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದವರು ಯಾರು? ಯಾವ ನಟಿಗೆ ಎದುರಾಯ್ತು ಕಾಸ್ಟಿಂಗ್ ಕೌಚ್ ನ ಗುಮ್ಮ, ಅಡ್ಜೆಸ್ಟ್ ಅಂದ ತಕ್ಷಣ ನಾಯಕಿ ಮಾಡಿದ ಮೊದಲ ಕೆಲಸವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ
ಸ್ಯಾಂಡಲ್ ವುಡ್ ಅಂಗಳದಲ್ಲಿರುವ ನಟಿಯರು ಒಬ್ಬೊಬ್ಬರಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ಬಿಡುತ್ತಿದ್ದಾರೆ. ನಟಿ ಖುಷಿ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ತಮಗಾದ ಅನುಭವವನ್ನ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಕಾಲಿವುಡ್ ನಲ್ಲಿ ಆಫರ್ ಗಾಗಿ ಕಾಸ್ಟಿಂಗ್ ಕೌಚ್
ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕಂತೆ. ನಟಿ ಖುಷಿ ಶೆಟ್ಟಿಗೆ ನಾಯಕಿ ಆಗುವ ಅವಕಾಶ ನೀಡುತ್ತೇವೆ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಎಂದು ಕಾಲಿವುಡ್ ಸಿನಿಮಾ ಮಂದಿ ಕೇಳಿದ್ದಾರೆ. ಈ ಬಗ್ಗೆ ಬಂದಿರುವ ಸಂದೇಶ ಮತ್ತು ಆಡಿಯೋವನ್ನು ಖುಷಿ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.

ತಮಿಳು ನಾಡಿನ ವ್ಯಕ್ತಿಯಿಂದ ಕರೆ
ನಟಿ ಖುಷಿ ಶೆಟ್ಟಿ ಅವರಿಗೆ ತಮಿಳುನಾಡಿನ ಸಿನಿಮಾರಂಗದ ವ್ಯಕ್ತಿ ಕರೆ ಮಾಡಿ ತಮಿಳು ಚಿತ್ರದಲ್ಲಿ ಅಭಿನಯ ಮಾಡುತ್ತೀರ ಎಂದು ಕೇಳಿದ್ದಾರೆ. ಹೌದು ಅಭಿನಯಿಸುತ್ತೇನೆ ಎಂದಾಗ ನಿಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಫೋಟೋ ಗಳನ್ನ ಕಳುಹಿಸಿ ಎಂದಿದ್ದಾರೆ. ಫೋಟೋ ಡಿಟೇಲ್ಸ್ ತೆಗೆದುಕೊಂಡ ನಂತರ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಸಂಭಾವನೆ ಇನ್ನೂ ಹೆಚ್ಚಾಗುತ್ತೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಖುಷಿ ಶೆಟ್ಟಿ ಶಶಿ ಎನ್ನುವ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.

ಯಾರು ಈ ಖುಷಿ ಶೆಟ್ಟಿ
ಖುಷಿ ಶೆಟ್ಟಿ ಮಂಗಳೂರು ಮೂಲಕ ನಟಿ. ಸದ್ಯ 'ಇದೀಗ ಬಂದ ಸುದ್ದಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು 'ಚಂದ್ರಮುಖಿ', 'ಮಹಾನದಿ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ 'ಲೇರಿಯಾ' ಎನ್ನುವ ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ 'ರಾಂಗ್ ಟರ್ನ್' ಚಿತ್ರದಲ್ಲಿ ನಾಯಕಿಯಾಗಿ ಆಕ್ಟ್ ಮಾಡುತ್ತಿದ್ದಾರೆ.


Click it and Unblock the Notifications











