Kiccha 47: ಕಿಚ್ಚ 47 ಟೀಸರ್ ಮೇಕಿಂಗ್ ವಿಡಿಯೋ ವೈರಲ್: ಡಮ್ಮಿ ಕುದುರೆ ಮೇಲೆ ಸುದೀಪ್ ಸವಾರಿ!

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಬಳಿಕ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಹೀಗಾಗಿ ಕಿಚ್ಚನ ಅಭಿಮಾಣಿಗಳು ಹೊಸ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಇದರ ಜೊತೆಗೆ ಕಿಚ್ಚ 47 ಸಿನಿಮಾ ಬಗ್ಗೆ ಹೊಸ ಹೊಸ ಅಪ್‌ಡೇಟ್‌ಗಳು ಹೊರ ಬರುತ್ತಿವೆ.

ಇತ್ತೀಚೆಗಷ್ಟೇ ಕಿಚ್ಚ47 ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸೌಂಡ್ ಮಾಡಿತ್ತು. ಕಿಚ್ಚ ಸುದೀಪ್ ಅವರನ್ನು ಹೊಸ ರೀತಿಯ ಅವತಾರದಲ್ಲಿ ಕಂಡ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದರು. ಜೊತೆಗೆ ಇದು ಐತಿಹಾಸಿಕ ಸಿನಿಮಾನಾ..? ಎಂದು ಹುಬ್ಬೇರಿಸಿದ್ದರು. .ಟೀಸರ್‌ಗಾಗಿ ಬೇಡಿಕೆ ಕೂಡ ಇಟ್ಟಿದ್ದರು. ಈಗ ಕಿಚ್ಚ 47 ಟೀಸರ್ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದೆ.

Kiccha 47- Battle Of Breaths Teaser Making Video Viral, Kiccha Sudeep riding a dummy horse!

ದೀಪಾವಳಿಗೆ ಕಿಚ್ಚು ಹಚ್ಚೋಕೆ ಬಂದ ಕಿಚ್ಚ47 ಮೇಕಿಂಗ್ ವಿಡಿಯೋ!

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಿಚ್ಚ 47 ಸಿನಿಮಾ ಅಪ್‌ಡೇಟ್ ಸಿಗುವ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಸಿನಿಮಾದ ಹೊಸ ಪೋಸ್ಟರ್ ಅಥವಾ ಚಿಕ್ಕ ವಿಡಿಯೋ ಬರಬಹುದು ಎಂದು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದರು. ಇದರ ಬೆನ್ನಲ್ಲೇ ಟೀಸರ್ ಮೇಕಿಂಗ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ಈ ಮೇಕಿಂಗ್ ವಿಡಿಯೋದಲ್ಲಿ ಸುದೀಪ್ ಐತಿಹಾಸಿಕ ಸಿನಿಮಾದ ನಾಯಕನ ರೀತಿ ಕಾಣಿಸಿಕೊಂಡಿದ್ದಾರೆ. ತಮ್ಮ ಕ್ಯಾರವಾನ್‌ನಿಂದ ಬರುವ ನಟ ಸುದೀಪ್ ಲುಕ್ ಸಕತ್ ಆಗಿದೆ. ಜೊತೆಗ ಕಣ್ಣಿನ ಕೆಳಭಾಗದಲ್ಲಿ, ಹಣೆಗೆ ಕೆಂಪು ತಿಲಕವಿಟ್ಟ ಅವರ ನೋಟ ಯುದ್ಧ ಮಾಡುವವರ ರೀತಿ ಕಾಣುತ್ತಿದೆ. ಜೊತೆಗೆ ಕುದುರೆ ಸವಾರಿ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಇನ್ನು, ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ.

ವಿಡಿಯೋವನ್ನು ಹಂಚಿಕೊಂಡಿರುವ ಟೀಂ ಕಿಚ್ಚ ಸುದೀಪ್ ಅಧಿಕೃತ ಖಾತೆ, "ನಮ್ಮ ಕಿಚ್ಚ ತೆರೆ ಹಿಂದೆ ಎಬ್ಬಿಸುವ ಹಾವಳಿ! ಕಿಚ್ಚ ಸುದೀಪ್ ಅಣ್ಣನ ಬ್ಯಾಟಲ್ ಆಫ್ ಬ್ರೀತ್ಸ್ ಪೋಸ್ಟರ್ ಬಂದು ಜಾಸ್ತಿ ದಿನಾ ಆಗಿಲ್ಲ. ಇವಾಗ್ ನೋಡಿದ್ರೆ ಒಳ್ಳೆ ಜಬರ್ದಸ್ತ್ ಆಕ್ಷನ್ ಸಿನಿಮಾ ತಾರಾ ಕಾಣ್ತಿದ್ಯಲ್ಲಾ ಗುರು!" ಎಂದು ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದೆ.

Kiccha 47- Battle Of Breaths Teaser Making Video Viral, Kiccha Sudeep riding a dummy horse!

ಡಮ್ಮಿ ಕುದುರೆ ಮೇಲೆ ಕಿಚ್ಚನ ಸವಾರಿ!

ಮೇಕಿಂಗ್ ವಿಡಿಯೋದಲ್ಲಿ ಗಮನ ಸೆಳೆಯುತ್ತಿರುವುದು ಡಮ್ಮಿ ಕುದುರೆ. ಹೌದು... ಕಿಚ್ಚ ಸುದೀಪ್ ಈ ವಿಡಿಯೋದಲ್ಲಿ ಡಮ್ಮಿ ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ಹಿಂದೆ ನಟಿ ಕಂಗನಾ ರನೌತ್ ತಮ್ಮ 'ಮಣಿಕರ್ಣಿಕಾ' ಸಿನಿಮಾ ಚಿತ್ರೀಕರ'ಣದಲ್ಲಿಯೂ ಹೀಗೆ ಡಮ್ಮಿ ಕುದುರೆ ಸವಾರಿ ಮಾಡಿ ಟ್ರೋಲ್‌ಗೆ ಒಳಗಾಗಿದ್ದರು.

ಆದರೆ, ಈ ಟೀಸರ್ ಮೇಕಿಂಗ್ ಗ್ರೀನ್ ಮ್ಯಾಟ್ ಅಲ್ಲಿ ಶೂಟ್ ಮಾಡುತ್ತಿರುವ ಕಾರಣ ಡಮ್ಮಿ ಕುದುರೆ ಬಳಸಲಾಗುತ್ತಿದೆ. ಇದಲ್ಲದೆ, ಎಲ್ಲಾ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಿಗೆ ಜೀವಂತ ಕುದುರೆ ಬಳಸುವುದಿಲ್ಲ, ಅದಕ್ಕೆ ಸಾಕಷ್ಟು ಕಾರಣ ಇರುತ್ತೆ. ಪ್ರಾಣಿಗಳನ್ನು ಚಿತ್ರೀಕರಣಕ್ಕೆ ಬಳಸುವುದಕ್ಕೆ ಅನುಮತಿ ಬೇಕಾಗುತ್ತದೆ. ಸಿನಿಮಾದಲ್ಲಿ ಪ್ರಾಣಿಗಳಿಗೆ ಯಾವುದೇ ತೊಂದರೆ ಆಗುವಂತಿಲ್ಲ. ಇನ್ನು, ಇದು ಟೀಸರ್ ಶೂಟಿಂಗ್ ಆಗಿರುವ ಕಾರಣ ಡಮ್ಮಿ ಕುದುರೆ ಬಳಸಿದ್ದಾರೆ.

ಸಿನಿಮಾನಾ, ಜಾಹೀರಾತಾ..?

ಇನ್ನು, ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಕೆಲವರು ಇದು ಸಿನಿಮಾ ಶೂಟಿಂಗ್ ಅಲ್ಲ, ಜಾಹೀರಾತು ಚಿತ್ರೀಕರಣ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದು 'ಪ್ರೊ ಕಬ್ಬಡಿ' ಟೂರ್ನಿ ಪ್ರೋಮೊ ಶೂಟ್ ಎನ್ನುತ್ತಿದ್ದಾರೆ. ಆದರೆ, ಸೆಟ್ ನೊಡಿದರೇ ಸಿನಿಮಾ ಶೂಟಿಂಗ್ ರೀತಿಯೇ ಕಾಣುತ್ತಿದೆ. ಜಾಹೀರಾತುಗಳೂ ಕೂಡ ಕೋಟ್ಯಾಂತರ ಬಂಡವಾಳ ಹಾಕಿ ಶೂಟಿಂಗ್ ಮಾಡುವ ಕಾರಣ ಇದು ಸಿನಿಮಾವೋ, ಜಾಹೀರಾತೋ ಎಂಬುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

More from Filmibeat

English summary
Kiccha 47- Battle Of Breaths Teaser Making Video Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X