ಯಶ್ ಹಾಗೂ ಶಿವರಾಜ್ ಕುಮಾರ್ ಗೆ ಚಾಲೆಂಜ್ ಹಾಕಿದ ಕಿಚ್ಚ

By Pavithra

Recommended Video

ಶಿವಣ್ಣ ಹಾಗೂ ಯಶ್ ಗೆ ಚಾಲೆಂಜ್ ಹಾಕಿದ ಕಿಚ್ಚ | Filmibeat Kannada

ಕನ್ನಡ ನಟ ಕಿಚ್ಚ ಸುದೀಪ್ ಶಿವರಾಜ್ ಕುಮಾರ್ ಹಾಗೂ ಯಶ್ ಅವರಿಗೆ ಸುದೀಪ್ ಸವಾಲನ್ನು ಹಾಕಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟರು ಸವಾಲು ಹಾಕಿದ್ದಾರೆ ಎಂದರೆ ಎಲ್ಲರ ತಲೆಯಲ್ಲಿ ನೆಗೆಟಿವ್ ಆಗಿಯೇ ಯೋಚನೆ ಮೂಡುತ್ತದೆ.

ಆದರೆ ಈ ಬಾರಿ ಕಿಚ್ಚ ಸುದೀಪ್ ತನ್ನ ಸಹ ಕಲಾವಿದರಿಗೆ ಹಾಕಿರುವಂತಹ ಸವಾಲು ಪಾಸಿಟಿವ್ ಆಗಿರುವುದು ಹೌದು ಈಗಾಗಲೇ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್ ಹಾಗೂ ಕ್ರೀಡಾ ಲೋಕದ ಸೆಲಬ್ರೆಟಿಗಳು ಈ ಸವಾಲನ್ನು ಸ್ವೀಕರಿಸಿ ಯಶಸ್ಸು ಪಡೆದುಕೊಂಡಿದ್ದಾರೆ.

ಅದೇ ರೀತಿಯ ಚಾಲೆಂಜ್ ಅನ್ನು ಸುದೀಪ್ ಸ್ವೀಕರಿಸಿ ಈಗ ತಮ್ಮ ಕೋ ಸ್ಟಾರ್ ಗಳಿಗೆ ನೀಡಿದ್ದಾರೆ. ಹಾಗಾದರೆ ಸುದೀಪ್ ಹಾಕಿರುವ ಚಾಲೆಂಜ್ ಏನು? ಯಶ್ ಹಾಗೂ ಶಿವರಾಜ್ ಕುಮಾರ್ ಈ ಚಾಲೆಂಜ್ ಅನ್ನು ಸ್ವೀಕರಿಸುತ್ತಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಫಿಟ್ನೆಸ್ ಅಭಿಯಾನದಲ್ಲಿ ಸುದೀಪ್

ಫಿಟ್ನೆಸ್ ಅಭಿಯಾನದಲ್ಲಿ ಸುದೀಪ್

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಇತ್ತೀಚಿಗಷ್ಟೆ ಫಿಟ್ನೆಸ್ ಕುರಿತು ಹೊಸದೊಂದು ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಪರಿಣಾಮ ಸ್ಟಾರ್ ನಟ-ನಟಿಯರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಕಿಚ್ಚ ಸುದೀಪ್.

ಶಿವಣ್ಣ-ಯಶ್ ಗೆ ಸುದೀಪ್ ಚಾಲೆಂಜ್

ಶಿವಣ್ಣ-ಯಶ್ ಗೆ ಸುದೀಪ್ ಚಾಲೆಂಜ್

ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಕಿಚ್ಚ ಕೈ ಜೋಡಿಸಿದ್ದು ಕೋರ್ ವರ್ಕ್ ಔಟ್ ಮಾಡುವ ಮೂಲಕ ಕ್ರಿಕೆಟರ್ ವಿನಯ್ ಕುಮಾರ್ ಹಾಕಿದ ಚಾಲೆಂಜ್ ನಲ್ಲಿ ಗೆದ್ದಿದ್ದಾರೆ. ಅದೇ ಸಮಯದಲ್ಲಿ ನಟ ರಿತೆಶ್ ದೇಶ್ಮುಖ್ , ಸೋಹಿಲ್ ಖಾನ್, ಪ್ರಿಯಾ ಸುದೀಪ್, ಯಶ್ ಹಾಗೂ ಶಿವಣ್ಣನಿಗೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಹಾಕಿದ್ದಾರೆ.

ಹಮ್ ಫಿಟ್ ತೋ ಇಂಡಿಯಾ ಫಿಟ್ ನಲ್ಲಿ ಬಿಟೌನ್

ಹಮ್ ಫಿಟ್ ತೋ ಇಂಡಿಯಾ ಫಿಟ್ ನಲ್ಲಿ ಬಿಟೌನ್

ಬಾಲಿವುಡ್ ಸ್ಟಾರ್ ನಟ-ನಟಿಯರು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿ ತಾವು ವರ್ಕ್ ಔಟ್ ಮಾಡುವ ವಿಡಿಯೋ ಅಪ್ಲೋಡ್ ಮಾಡಿ ತಮ್ಮ ಸ್ನೇಹಿತರಿಗೂ ಚಾಲೆಂಜ್ ಹಾಕುವ ಮೂಲಕ ದೇಶದ ಜನರನ್ನು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡುತ್ತಿದ್ದಾರೆ.

ಚಾಲೆಂಜ್ ಸ್ವೀಕರಿಸಿದ ಕನ್ನಡ ಸ್ಟಾರ್ಸ್

ಚಾಲೆಂಜ್ ಸ್ವೀಕರಿಸಿದ ಕನ್ನಡ ಸ್ಟಾರ್ಸ್

ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಅನ್ನು ಈಗಾಗಲೇ ನಟಿ ಸಂಯುಕ್ತಾ ಹೊರನಾಡು, ಲೂಸಿಯಾ ಪವನ್ ಕುಮಾರ್ ಹಾಗೂ ರಾಧಿಕಾ ಚೇತನ್ ಸ್ವೀಕರಿಸಿ ಚಾಲೆಂಜ್ ನಲ್ಲಿ ಗೆದ್ದಿದ್ದಾರೆ. ಸದ್ಯ ಸುದೀಪ್ ಹಾಕಿರುವ ಚಾಲೆಂಜ್ ನಲ್ಲಿ ಯಾರು ವಿನ್ ಆಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

More from Filmibeat

English summary
Kannada actor Kiccha Sudeep accepted hum fit toh india fit challenge, Samyukta Hornadu, Pavan Kumar, Radhika chetan Posted Fitness Video For 'hum fit toh india fit campaign'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X