twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ವೇದಿಕೆ ಮೇಲೆ ಕಿಚ್ಚ ಸುದೀಪ್–ದರ್ಶನ್ ಸಹೋದರ: ಇಬ್ಬರ ನಡುವಿನ ಸಂಭಾಷಣೆ ಏನು?

    By ಫಿಲ್ಮಿಬೀಟ್ ಡೆಸ್ಕ್
    |

    ಕರ್ನಾಟಕ ಚಲನಚಿತ್ರ ಕಪ್ ಕಳೆದ ಎರಡು ಸೀಸನ್ ಯಶಸ್ವಿಯಾಗಿ ನಡೆದಿದೆ. ಈಗ ಮೂರನೇ ಸೀನಸ್‌ಗೆ ಮುಂದಾಗಿದೆ. ಈ ಬಾರಿ ಕಳೆದ ಎರಡು ಸೀಸನ್‌ಗಿಂತ ಅದ್ದೂರಿಯಾಗಿ ನಡೆಯುತ್ತೆ ಅನ್ನೋ ಸುಳಿವು ನೋಡಿದ್ದಾರೆ.

    ಅದಕ್ಕಾಗಿಯೇ ಕೆಸಿಸಿ ಕಮಿಟಿ ಪ್ರೆಸ್‌ಮೀಟ್ ಕರೆದಿತ್ತು. ಈ ವೇಳೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಗೂ ಚಿತ್ರರಂಗ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಜೊತೆ ದಿನಕರ್ ತೂಗುದೀಪ ಕೂಡ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಚಿಕ್ಕದೊಂದು ಸಂಭಾವಣೆ ಕೂಡ ನಡೆದಿದೆ.

    "ಸುದೀಪ್ ಸರ್ ಹಾರ, ಮೊಟ್ಟೆ, ಕಲ್ಲು ಅಂದ್ರು, ರಕ್ತ ಬಂದ್ರೆ ಏನು ಮಾಡೋದು?": ರಶ್ಮಿಕಾ ಪ್ರಶ್ನೆ

    ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು. ಆ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ಅನ್ನೋ ಕುತೂಹಲ ಇಲ್ಲಿದೆ.

    ಕೆಸಿಸಿ ವೇದಿಕೆ ಮೇಲೆ ಸುದೀಪ್–ದಿನಕರ್

    ಕೆಸಿಸಿ ವೇದಿಕೆ ಮೇಲೆ ಸುದೀಪ್–ದಿನಕರ್

    ಇತ್ತೀಚೆಗೆ ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಬಗ್ಗೆ ಪತ್ರಕ್ಕೆ ದರ್ಶನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಸುದೀಪ್ ಜೊತೆ ದಿನಕರ್ ತೂಗುದೀಪ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ಕಪ್ ಸೀಸನ್ 3ನಲ್ಲಿ ಮೆಂಟರ್ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕಿಚ್ಚ ಹಾಗೂ ದಿನಕರ್ ನಡುವೆ

    'ಸುದೀಪ್ ಸರ್ ಇದ್ದಾರೆ'

    'ಸುದೀಪ್ ಸರ್ ಇದ್ದಾರೆ'

    ಕೆಸಿಸಿ ಸೀಸನ್ 3ನಲ್ಲಿ ದಿನಕರ್ ತೂಗುದೀಪ ಭಾಗವಹಿಸುತ್ತಿದ್ದು, ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಗೂ ಕೆಸಿಸಿ ಬಗ್ಗೆ ಮಾತಾಡಿದ್ದಾರೆ. "ಫಸ್ಟ್ ಸೀಸನ್‌ನಲ್ಲಿ ಪ್ಲೇಯರ್ ಆಗಿದ್ದೆ. ಮೂರನೇ ಸೀಸನ್‌ನಲ್ಲಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಆಡುತ್ತಿದ್ದೇನೆ. ಲೈಫ್‌ನಲ್ಲಿ ಇಷ್ಟ ಆಗೋದು ಎರಡನೇ. ಒಂದು ಸಿನಿಮಾ. ಇನ್ನೊಂದು ಎಂಟರ್‌ಟೈನ್ಮೆಂಟ್. ಸಿನಿಮಾಗೆ ಪ್ರಡ್ಯೂಸರ್ ಇದ್ದಾರೆ ಮಾಡಿಕೊಡೋಕೆ. ಕ್ರಿಕೆಟ್ ಖುಷಿ ಕೊಡೋಕೆ ಸುದೀಪ್ ಸರ್ ಇದ್ದಾರೆ." ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.

    ಎಲ್ಲರಿಗೂ ಆಹ್ವಾನ

    ಎಲ್ಲರಿಗೂ ಆಹ್ವಾನ

    ಕೆಸಿಸಿ ಸೀಸನ್ 1 ಹಾಗೂ 2ರ ವೇಳೆ ಸ್ಯಾಂಡಲ್‌ವುಡ್‌ನ ಕೆಲವು ಸೆಲೆಬ್ರೆಟಿಗಳು ತಮಗೆ ಆಹ್ವಾನ ಬಂದಿಲ್ಲ ಎಂದಿದ್ದರು. ಅದಕ್ಕೆ ಈ ಬಾರಿ ಸ್ಯಾಂಡಲ್‌ವುಡ್‌ನ ಎಲ್ಲಾ ಗಣ್ಯರಿಗೂ ಆಹ್ವಾನವನ್ನು ನೀಡಿದ್ದಾರೆ. ಅಲ್ಲದೆ "ಕೆಲವರಿಗೆ ಕೆಸಿಸಿಯಲ್ಲಿ ಆಡುವುದಕ್ಕೆ ಇಷ್ಟವಿರಲ್ಲ. ಅಂತಹವರು ಬರೋದಿಲ್ಲ. ಅವರು ಯಾಕೆ ಬಂದಿಲ್ಲ ಅಂತ ಹೇಳಬೇಡಿ" ಎಂದು ಕಿಚ್ಚ ಸುದೀಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೆಸಿಸಿ ಹೈಲೈಟ್ ಏನು?

    ಕೆಸಿಸಿ ಹೈಲೈಟ್ ಏನು?

    ಕೆಸಿಸಿ ಸೀಸನ್ 3 ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ಆರು ಮಂದಿ ಅಂತರಾಷ್ಟ್ರೀಯ ಆಟಗಾರರು, ಕನ್ನಡ ಚಿತ್ರರಂಗದ ತಾರೆಯರೂ ಇರುತ್ತಾರೆ. ಅಲ್ಲದೆ ಬೇರೆ ಭಾಷೆಯ ಸಿನಿಮಾ ಮಂದಿ ಕೂಡ ಭಾಗವಹಿಸುವ ಸಾಧ್ಯತೆಯಿದೆ. ಫೆಬ್ರವರಿ 11 ಹಾಗೂ ಫೆಬ್ರವರಿ 12 ಎರಡು ದಿನಗಳ ಕಾಲ ಕೆಸಿಸಿ ಸೀಸನ್ 3 ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಗಳು ಲೈವ್ ಕೂಡ ಇರುತ್ತೆ. ಹೀಗಾಗಿ ಮೈಸೂರಿನಲ್ಲಿ ನಡೆಯಲಿರುವ ಈ ಪಂದ್ಯಾವಳಿ ಬಗ್ಗೆ ಎಲ್ಲರ ಕುತೂಹಲವಿದೆ.

    English summary
    Kichcha Sudeep And Dinakar Thoogudeepa Seen Together On KCC 3 Stage, Know More.
    Monday, January 23, 2023, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X