ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್

By Bharath Kumar

Recommended Video

ಹೇಗಿದೆ ನೋಡಿ ಕಿಚ್ಚ-ಗಣಿ ಕ್ರಿಕೆಟ್ ಅಭ್ಯಾಸ..! | Filmibeat Kannada

ಸ್ಯಾಂಡಲ್ ವುಡ್ ನಟರ ಆಯೋಜನೆಯಲ್ಲಿ ನಡೆಯಲಿರುವ ಕೆಸಿಸಿ ಕ್ರಿಕೆಟ್ ಟೂರ್ನಿ ಸೆಪ್ಟಂಬರ್ 8 ರಂದು ಆರಂಭವಾಗಲಿದೆ. ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಹಾಗೂ ಗಣೇಶ್ ಸೇರಿದಂತೆ ಹಲವು ಕನ್ನಡ ನಟರು ಈ ಟೂರ್ನಿ ಆಡಲಿದ್ದಾರೆ.

ಈಗಾಗಲೇ ಕಿಚ್ಚ ಸುದೀಪ್ ಸೇರಿದಂತೆ ಎಲ್ಲರೂ ಅಭ್ಯಾಸ ಶುರು ಮಾಡಿದ್ದಾರೆ. ನೆಲಮಂಗಲದ ಮೈದಾನದಲ್ಲಿ ಸುದೀಪ್ ಪ್ರಾಕ್ಟೀಸ್ ಮಾಡುತ್ತಿದ್ದು, ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟ ಕಿಚ್ಚನಿಗೆ ಸಾಥ್ ನೀಡಿದ್ದಾರೆ.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಇಂದು ಸುದೀಪ್ ಜೊತೆ ಸೇರಿ ಕ್ರಿಕೆಟ್ ಅಭ್ಯಾಸ ಮಾಡಿದ್ದಾರೆ. ಗಣೇಶ್ ಬೌಲಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

kiccha sudeep and ganesh start cricket practice

ಗಣೇಶ್ ಒಡೆಯರ್ ಚಾರ್ಜರ್ಸ್ ತಂಡದ ಪರವಾಗಿ ಅಖಾಡಕ್ಕೆ ಇಳಿಯಲಿದ್ದು, ಸುದೀಪ್ ಕದಂಬ ಲಯನ್ಸ್ ಪರವಾಗಿ ಆಡಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್​ ವಿಜಯನಗರ ಪೇಟ್ರಿಯಟ್ಸ್, ಪುನೀತ್ ರಾಜಕುಮಾರ್ ಗಂಗಾ ವಾರಿಯರ್ಸ್, ಯಶ್ ರಾಷ್ಟ್ರಕೂಟ ಪ್ಯಾಂಥರ್ಸ್, ಉಪೇಂದ್ರ ಹೊಯ್ಸಳ ಈಗಲ್ಸ್ ತಂಡದ ಪರವಾಗಿ ಅಖಾಡಕ್ಕಿಳಿಯಲಿದ್ದಾರೆ.

ಈ ಬಾರಿಯ ವಿಶೇಷ ಅಂದ್ರೆ, ಅಂತಾರಾಷ್ಟ್ರೀಯ ಆಟಗಾರರು ಕೂಡ ಆಡಲಿದ್ದಾರೆ. ಭಾರತದ ಡ್ಯಾಷಿಂಗ್ ಒಪನರ್ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್​ ಗಿಬ್ಸ್ ಹೊಯ್ಸಳ ಈಗಲ್ಸ್, ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್, ಲ್ಯಾನ್ಸ್​ ಕ್ಲೂಸ್ನರ್ ಗಂಗಾ ವಾರಿಯರ್ಸ್, ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಯಡಂ ಗಿಲ್​ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿ ಆಡಲಿದ್ದಾರೆ.

More from Filmibeat

English summary
KCC season II starts on 8th and 9th of september at Chinnaswamy stadium. already kiccha sudeep and golden star ganesh has start practice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X