Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾರ್ಡ್ಸ್ ಮೈದಾನದಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ ಸುದೀಪ ತಂಡ
ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ ತೆರೆ ಮೇಲೆ ಮಾತ್ರ ಅಬ್ಬರಿಸುವುದಿಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಿಕ್ಸ್-ಫೋರ್ ಗಳ ಸುರಿಮಳೆ ಹರಿಸಿ ಆರ್ಭಟಿಸುತ್ತಾರೆ. ಕ್ರಿಕೆಟ್ ಅಂದ್ರೆ ಕಿಚ್ಚನಿಗೆ ಪಂಚ ಪ್ರಾಣ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಹಾಗಾಗಿ ಆಗಾಗ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದು ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಸದ್ಯ ಕಿಚ್ಚನ ತಂಡ ಕ್ರಿಕೆಟ್ ಆಡಲು ಇಂಗ್ಲೆಂಡ್ ಕಡೆ ಪಯಣ ಬೆಳೆಸಿ ದಿನಗಳೆ ಆಗಿವೆ. ಪ್ರತಿವರ್ಷ ನಡೆಯುವ ಕಾರ್ಪೊರೇಟ್ ಕ್ರಿಕೆಟ್ ಲೀಗ್ ನಲ್ಲಿ ಸುದೀಪ ಮತ್ತು ತಂಡದವರು ಭಾಗಿಯಾಗುತ್ತಾರೆ. ಸಿನಿಮಾ ಸೆಲೆಬ್ರಿಟಿಗಳ ಜೊತೆ ವೃತ್ತಿ ನಿರತ ಆಟಗಾರರು ಸೇರಿ ನಡೆಸುವ ಕ್ರಿಕೆಟ್ ಪಂದ್ಯವಿದು.
ಯುವರಾಜ್ ಸಿಂಗ್ ಬಗ್ಗೆ ಸ್ಫೂರ್ತಿದಾಯಕ ಟ್ವೀಟ್ ಮಾಡಿದ ಸುದೀಪ್
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಮೊದಲ ಪಂದ್ಯ ಆಡಿದ್ದು, ಮೊದಲ ಪಂದ್ಯದಲ್ಲೆ ಜಯಭೇರಿ ಭಾರಿಸಿ ಗೆದ್ದು ಬೀಗಿದ್ದಾರೆ. ಸುದೀಪ ತಂಡದಲ್ಲಿ ಪ್ರದೀಪ್ ಮತ್ತು ರಾಜೀವ್ ಕೂಡ ಇದ್ದಾರೆ. ಮೊದಲ ಪಂದ್ಯ ಗೆದ್ದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪ್ರದೀಪ್.
ಇಂಗ್ಲೆಂಡ್ ನಲ್ಲಿ ಒಂದೆಡೆ ವಿಶ್ವಕಪ್ ಅಬ್ಬರ ಜೋರಾಗಿದೆ. ಮತ್ತೊಂದೆಡೆ ಕಿಚ್ಚ ಲಾರ್ಡ್ಸ್ ಮೈದಾನದಲ್ಲಿ ಅಬ್ಬರಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಅಭಿನಯ ಚಕ್ರವರ್ತಿ ದಿ ಓವೆಲ್ ಮೈದಾನದಲ್ಲಿ ಕುಳಿತು ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯ ನೋಡಿ ಸಖತ್ ಎಂಜಾಯ್ ಮಾಡಿದ್ರು.
ಸುದೀಪ ಈಗಾಗಲೆ ಅನೇಕ ಕ್ರಿಕೆಟ್ ಲೀಗ್ ಗಳಲ್ಲಿ ಭಾಗಿಯಾಗಿ ಮೈದಾನದಲ್ಲಿ ರನ್ ಗಳ ಸುರುಮಳೆ ಹರಿಸಿದ್ದಾರೆ. ಕೆಪಿಎಲ್, ಸಿಸಿಎಲ್, ಕೆಸಿಸಿ ಸೇರಿದಂತೆ ಹಲವು ಆವೃತ್ತಿಯ ಕ್ರಿಕೆಟ್ ಆಡಿ ಕೈಚಳಕ ತೋರಿಸಿದ್ದಾರೆ. ಈಗ ಲಾರ್ಡ್ಸ್ ನಲ್ಲಿ ಆಡುತ್ತಿದ್ದಾರೆ. ಕಳೆದ ವರ್ಷ ಕಿಚ್ಚನ ಟೀಂ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ರು. ಈ ಬಾರಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.