Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೈಲ್ವಾನ್ ಚಿತ್ರೀಕರಣಕ್ಕೆ ನಿಗದಿ ಆಯ್ತು ಸಮಯ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಪೈಲ್ವಾನ್ ಚಿತ್ರೀಕರಣಕ್ಕೆ ಸಮಯ ನಿಗದಿ ಆಗಿದೆ. ಟೈಟಲ್ ಮತ್ತು ಪೋಸ್ಟರ್ ನಿಂದಲೇ ಕನ್ನಡ ಸಿನಿಮಾ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ.
ಈಗಾಗಲೇ ಮುಹೂರ್ತ ಮುಗಿಸಿಕೊಂಡು ಚಿತ್ರಕ್ಕೆ ಬೇಕಿರುವಂತೆ ತಯಾರಿಗಳನ್ನೂ ಮಾಡಿಕೊಂಡಿರುವ ತಂಡ ಮತದಾನ ಮಾಡಿ ಚಿತ್ರೀಕರಣಕ್ಕಾಗಿ ಚೆನೈ ಗೆ ಪ್ರಯಾಣ ಬೆಳೆಸುತ್ತಿದೆ. ಕಿಚ್ಚ ಸುದೀಪ್ ನಾಯಕನಾಗಿ ಅಭಿನಯ ಮಾಡುತ್ತಿರುವ ಪೈಲ್ವಾನ್ ಸಿನಿಮಾವನ್ನ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.
ಮತದಾನ ಮಾಡಿದ ಕಿಚ್ಚನಿಗೆ ಸಿಕ್ಕಿತು ಉಡುಗೊರೆ
ನಿರ್ದೇಶನದ ಜೊತೆಯಲ್ಲಿ ಚಿತ್ರದ ನಿರ್ಮಾಣವನ್ನು ಮಾಡುತ್ತಿರುವ ಕೃಷ್ಣ, ಪ್ರೀ-ಪ್ರೊಡಕ್ಷನ್ ಗಾಗಿ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಇನ್ನು ಹೆಬ್ಬುಲಿ ಚಿತ್ರದಲ್ಲಿ ಖಳನಟನಾಗಿ ಅಭಿನಯ ಮಾಡಿದ್ದ ಕಬೀರ್ ದುಹಾನ್ ಸಿಂಗ್ ಕೂಡ ಪೈಲ್ವಾನ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.
ಆದರೆ ಪೈಲ್ವಾನ್ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡದ ನಿರ್ದೇಶಕ ಕೃಷ್ಣ ಚಿತ್ರೀಕರಣ ಚುನಾವಣೆಯ ತೀರ್ಪು ಹೊರಬಿದ್ದ ನಂತರ ಶುರುವಾಗಲಿದೆ. ಚಿತ್ರತಂಡ ಅದಕ್ಕೂ ಮುಂಚೆ ಚೆನೈ ತಲುಪಲಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.