'ಹೊಂಬಣ್ಣ' ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್
ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವುದರಲ್ಲಿ ಕಿಚ್ಚ ಸುದೀಪ್ ಸದಾ ಮುಂದು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಬೇಕು ಎಂದು ಬಂದ ಅನೇಕ ಯುವ ಪ್ರತಿಭೆಗಳಿಗೆ ಕಿಚ್ಚ ಸುದೀಪ್ ಸಪೋರ್ಟ್ ಮಾಡಿದ್ದಾರೆ. ಸದ್ಯ 'ಹೊಂಬಣ್ಣ' ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿರುವ ಯುವಕರ ಸಮೂಹಕ್ಕೂ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.
ಕಾಡು-ನಾಡು ನಡುವಿನ ಸಂಘರ್ಷದ ಕಥೆ ಹೊಂದಿರುವ 'ಹೊಂಬಣ್ಣ' ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಹೊರಬಂದಿತ್ತು. ಟ್ರೈಲರ್ ಮಾತ್ರದಿಂದಲೇ 'ಹೊಂಬಣ್ಣ' ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.

ರಕ್ಷಿತ್ ತೀರ್ಥಹಳ್ಳಿ ಆಕ್ಷನ್ ಕಟ್ ಹೇಳಿರುವ 'ಹೊಂಬಣ್ಣ' ಚಿತ್ರದ ಟ್ರೈಲರ್ ನೋಡಿ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಟ್ರೈಲರ್ ಪ್ರಾಮಿಸ್ಸಿಂಗ್ ಆಗಿದೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಸಂಚಲನ ಮೂವೀಸ್ ಅಡಿಯಲ್ಲಿ ನಿರ್ಮಾಣ ಆಗಿರುವ 'ಹೊಂಬಣ್ಣ' ಸಿನಿಮಾ ಜುಲೈ 7 ರಂದು ತೆರೆಗೆ ಬರಲಿದೆ.
English summary
Kannada Actor Kiccha Sudeep has taken his twitter account to appreciate Kannada Movie 'Hombanna' trailer.


Click it and Unblock the Notifications