'ಪೈಲ್ವಾನ್' ತಂಡದೊಂದಿಗೆ ದೀಪಾವಳಿ ಆಚರಿಸಿದ ಕಿಚ್ಚ ಸುದೀಪ್
ಬೆಳಕಿನ ಹಬ್ಬ ದೀಪಾವಳಿಯನ್ನ ಎಲ್ಲರೂ ತಮ್ಮ ಬಂಧು-ಬಳಗ, ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ತಾರೆಯರೂ ಕೂಡ ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ದೀಪಾವಳಿಯನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಆದ್ರೆ, ಕಿಚ್ಚ ಸುದೀಪ್ ಮಾತ್ರ 'ಪೈಲ್ವಾನ್' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಹಬ್ಬದ ದಿನವೂ ಬಿಡುವಿಲ್ಲದೇ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ದೀಪಾವಳಿ ಹಬ್ಬದ ದಿನ 'ಪೈಲ್ವಾನ್' ಚಿತ್ರದ ಸೆಟ್ ನೋಡಿ ಸುದೀಪ್ ಅಕ್ಷರಶಃ ಬೆರಗಾಗಿದ್ದಾರೆ.

''ಪೈಲ್ವಾನ್' ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿಬಂದಿದೆ. ನಿರ್ದೇಶಕ ಕೃಷ್ಣ ಮತ್ತು ತಂಡಕ್ಕೆ ಹ್ಯಾಟ್ಸ್ ಆಫ್'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಪೈಲ್ವಾನ್' ಚಿತ್ರತಂಡದ ಪರವಾಗಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ದೀಪಾವಳಿ ಹಬ್ಬದ ದಿನವೂ ರಾತ್ರಿ ಪೂರ್ತಿ ಶೂಟಿಂಗ್ ನಲ್ಲಿ ಪಾಲ್ಗೊಂಡು ಚಿತ್ರತಂಡದ ಪರವಾಗಿ ನಿಂತ ಕಿಚ್ಚ ಸುದೀಪ್ ಗೆ ನಿರ್ದೇಶಕ ಕೃಷ್ಣ ಧನ್ಯವಾದ ಸಲ್ಲಿಸಿದ್ದಾರೆ.
ನಿರ್ದೇಶಕ ಕೃಷ್ಣ ಅವರ ಕಾರ್ಯಕ್ಷಮತೆಯನ್ನ ಕಣ್ಣಾರೆ ಕಂಡಿರುವ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ.
'ಹೆಬ್ಬುಲಿ' ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಒಂದಾಗಿರುವುದು 'ಪೈಲ್ವಾನ್' ಮೂಲಕ. ಸದ್ಯ ಹೈದರಾಬಾದ್ ನಲ್ಲಿ 'ಪೈಲ್ವಾನ್' ಶೂಟಿಂಗ್ ಭರದಿಂದ ಸಾಗುತ್ತಿದೆ.


Click it and Unblock the Notifications











