ಅಭಿಮಾನಿಗಳ ಅಭಿಮಾನಿ ಕಿಚ್ಚ: ಶಿವಣ್ಣ ರಿಲೀಸ್ ಮಾಡಿದ ಬರ್ತ್‌ಡೇ ಕಾಮನ್ ಡಿಪಿ ವೈರಲ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ನಾಲ್ಕು ದಿನ ಬಾಕಿಯಿದೆ. ಅಭಿಮಾನಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೇಷನ್ ಶುರು ಮಾಡಿದ್ದಾರೆ. ಸ್ಪೆಷಲ್ ಕಾಮನ್ ಡಿಪಿ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಕಿಚ್ಚ ಅದ್ಧೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಈ ಬಾರಿ ಕೂಡ ಬಹಳ ಸರಳವಾಗಿಯೇ ಆಚರಣೆ ಇರಲಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ಕೊಂಚ ಜೋರಾಗಿದೆ ಇರಲಿದೆ.

ಈ ವರ್ಷ ಸುದೀಪ್ ಹುಟ್ಟುಹಬ್ಬದ ಸ್ಪೆಷಲ್ ಬರ್ತ್‌ಡೇ ಕಾಮನ್ ಡಿಪಿಯನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ. ನಗರದ ನಡುವೆ ಸುದೀಪ್ ಕುಳಿತುಕೊಂಡಿದ್ದು ಅಭಿಮಾನಿಗಳೆಲ್ಲಾ ಪ್ರೀತಿಯಿಂದ ಮುತ್ತಿಕೊಂಡಿದ್ದಾರೆ. ನೆಚ್ಚಿನ ನಟನನ್ನು ನೋಡಲು ಮೇಲೆ ಏರಿ ಬಂದ ಅಭಿಮಾನಿಗಳನ್ನು ಸುದೀಪ್ ತಮ್ಮ ಕೈಯಲ್ಲಿ ಹಿಡಿದು ಪ್ರೀತಿಯಿಂದ ನೋಡುತ್ತಿರುವಂತೆ ಡಿಪಿ ಡಿಸೈನ್ ಮಾಡಲಾಗಿದೆ. ಸುತ್ತ ಸುದೀಪ್ ಸೂಪರ್ ಸಿನಿಮಾಗಳ ಕಟೌಟ್‌ಗಳು ರಾರಾಜಿಸುತ್ತಿದ್ದು, ಹಿಂದೆ ಬಾದ್‌ಶಾ ಎಂದು ದೊಡ್ಡದಾಗಿ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಅಭಿಮಾನಿಗಳ ಪ್ರೀತಿಯ ಅಭಿಮಾನಿ ಕಿಚ್ಚ ಸುದೀಪ್ ಅನ್ನುವುದನ್ನು ಕಾಮನ್ ಡಿಪಿಯಲ್ಲಿ ಬಿಂಬಿಸಲಾಗಿದೆ.

ಸತತ 24 ಗಂಟೆಗಳ ಕಾಲ ಈ ಕಾಮನ್ ಡಿಪಿಯನ್ನು ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿ ಇರುವಂತೆ ಮಾಡಲು ಅಭಿಮಾನಿಗಳು ಪಣ ತೊಟ್ಟಿದೆ. #KingKicchaBdayCDP ಹ್ಯಾಶ್‌ಟ್ಯಾಗ್ ರೀಟ್ವೀಟ್‌ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. 25 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿದ ಸುದೀಪ್ ಒಂದೊಂದು ಮೆಟ್ಟಿಲು ಏರಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಒಂದ್ಕಾಲದಲ್ಲಿ ಕಿಚ್ಚನನ್ನು ಐರೆನ್ ಲೆಗ್ ಎನ್ನಲಾಗಿತ್ತು. ಆದರೆ ಛಲ ಬಿಡಿದೇ ಸಾಧಿಸಿ ತೋರಿಸಿ ಸುದೀಪ್ ಇಂದು ಅಭಿನಯ ಚಕ್ರವರ್ತಿಯಾಗಿ ಮಿಂಚುತ್ತಿದ್ದಾರೆ.

kicchkiccha-sudeep-birthday-cdp-trends-on-social-mediaa-sudeep-birthday-cdp-trends-on-social-media

'ಹುಚ್ಚ', 'ನಂದಿ', 'ಈಗ', 'ಮೈ ಆಟೋಗ್ರಾಫ್', 'ನಂದಿ', 'ಕೆಂಪೇಗೌಡ', 'ಮದಕರಿ', 'ರನ್ನ' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಅಭಿಮಾನಿಗಳ ಮನಗೆದ್ದಿದ್ದಾರೆ. ಬಿಗ್‌ ಬಿ ಅಮಿತಾಬ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ ಜೊತೆಗೂ ಸ್ಕ್ರೀನ್‌ ಶೇರ್ ಮಾಡಿಕೊಂಡು ದರ್ಬಾರ್ ನಡೆಸಿದ್ದರು. ಒಂದು ಹಾಲಿವುಡ್ ಪ್ರಾಜೆಕ್ಟ್‌ನಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ, ಗಾಯಕನಾಗಿ, ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಹೋಸ್ಟ್ ಆಗಿ ಸುದೀಪ್ ಸದ್ದು ಮಾಡುತ್ತಿದ್ದಾರೆ. ರಾಜಮೌಳಿ, ಆರ್‌ಜಿವಿರಂತಹ ಸ್ಟಾರ್ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿ ಸೂಪರ್ ಸಕ್ಸಸ್ ಕಂಡ ನಟ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಸುದೀಪ್ ನಟನೆಯ 'ವಿಕ್ರಾಂತ್‌ ರೋಣ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನೂರಾರು ಕೋಟಿ ಕೊಳ್ಳೆ ಹೊಡೆದು ಅಭಿಮಾನಿಗಳನ್ನು ರಂಜಿಸಿತ್ತು. ಟಾಲಿವುಡ್‌, ಬಾಲಿವುಡ್‌ನಲ್ಲೂ ರೋಣನ ದರ್ಬಾರ್ ಜೋರಾಗಿತ್ತು.

kiccha Sudeep Birthday CDP Trends on Social Media

ಸುದೀಪ್‌ ಹುಟ್ಟುಹಬ್ಬದ ದಿನವೇ ಈ ಸಿನಿಮಾ ಜೀ5 ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಸದ್ಯ ಕಿಚ್ಚ 'ಕಬ್ಜ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, ಇತ್ತೀಚೆಗೆ ಶೂಟಿಂಗ್ ಮುಗಿಸಿದ್ದಾರೆ. ಮುಂದೆ ವೆಂಕಟ್ ಪ್ರಭು ನಿರ್ದೇಶನದ ಚಿತ್ರದಲ್ಲಿ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಮತ್ತೊಂದು ಕಡೆ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಚಿತ್ರಕ್ಕೆ ಕಥೆ ಸಿದ್ಧಪಡಿಸುತ್ತಿದ್ದಾರೆ. 'ವಿಕ್ರಾಂತ್‌ ರೋಣ' ಕಾಂಬಿನೇಷನ್‌ನಲ್ಲಿ ಈ ವರ್ಷವೇ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

More from Filmibeat

English summary
kiccha Sudeep Birthday CDP Trends on Social Media. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X