For Quick Alerts
  ALLOW NOTIFICATIONS  
  For Daily Alerts

  ಬರ್ತ್‌ಡೇಗೆ ಹೊಸ ಸಿನಿಮಾ ಯಾಕೆ ಘೋಷಿಸಿಲ್ಲ? ಸೇತುಪತಿ ಜೊತೆ ಸಿನಿಮಾ ಮಾಡಲ್ವಾ ಕಿಚ್ಚ?

  |

  ಸ್ಟಾರ್‌ಗಳ ಹುಟ್ಟುಹಬ್ಬದ ದಿನ ಹೊಸ ಹೊಸ ಸಿನಿಮಾಗಳನ್ನು ಘೋಷಿಸುವುದು ವಾಡಿಕೆ. ಆದರೆ ಈಗ ಅದರಲ್ಲಿ ಅರ್ಥವಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸುದೀಪ್ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಸಾಕಷ್ಟು ವಿಚಾರಗಳನ್ನು ಕಿಚ್ಚ ಹಂಚಿಕೊಂಡಿದ್ದಾರೆ.

  ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಾಗಿ ಇಟ್ಟಿದ್ದರು. ಮಧ್ಯರಾತ್ರಿಯಿಂದಲೇ ಜೆಪಿ ನಗರದ ಸುದೀಪ್ ನಿವಾಸದ ಬಳಿ ಅಭಿಮಾನಿಗಳಿ ಜಮಾಯಿಸಿ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದರು. ರಾತ್ರಿ ಮನೆಯಿಂದ ಹೊರ ಬಂದು ಅಭಿಮಾನಿಗಳ ಪ್ರೀತಿಗೆ ಕೈಮುಗಿದು ಧನ್ಯವಾದ ತಿಳಿಸಿ ಹೋಗಿದ್ದ ಸುದೀಪ್ ನಂತರ ಮಧ್ಯಾಹ್ನದವರೆಗೂ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದರು. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭಾಶಯ ಕೋರಿ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 'ವಿಕ್ರಾಂತ್‌ ರೋಣ' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಹುಟ್ಟುಹಬ್ಬ ಆಚರಿಸಿದ್ದಾರೆ.

  ಸಂಭಾವನೆ ಪಡೆಯದೇ ಪುಣ್ಯಕೋಟಿ ಯೋಜನೆಗೆ ಸುದೀಪ್ ರಾಯಭಾರಿ!ಸಂಭಾವನೆ ಪಡೆಯದೇ ಪುಣ್ಯಕೋಟಿ ಯೋಜನೆಗೆ ಸುದೀಪ್ ರಾಯಭಾರಿ!

  ಜುಲೈ 28ಕ್ಕೆ ತೆರೆಗಪ್ಪಳಿಸಿದ 'ವಿಕ್ರಾಂತ್‌ ರೋಣ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡಿ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಈ ಸಿನಿಮಾ ಸಕ್ಸಸ್‌ ಹಿನ್ನೆಲೆಯಲ್ಲಿ ಮುಂದಿನ ಚಿತ್ರವ್ನನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳಲು ಸುದೀಪ್ ನಿರ್ಧರಿಸಿದ್ದಾರೆ. ಆದರೆ ಹುಟ್ಟುಹಬ್ಬದ ದಿನ ಯಾವುದೇ ಸಿನಿಮಾ ಘೋಷಣೆಯಾಗಲಿಲ್ಲ.

  ತನ್ನ ಹುಟ್ಟುಹಬ್ಬದಂದು ಅಕುಲ್ ಬಾಲಾಜಿಗೆ ಐಶಾರಾಮಿ ಬೈಕ್ ಉಡುಗೊರೆ ನೀಡಿದ ಸುದೀಪ್ತನ್ನ ಹುಟ್ಟುಹಬ್ಬದಂದು ಅಕುಲ್ ಬಾಲಾಜಿಗೆ ಐಶಾರಾಮಿ ಬೈಕ್ ಉಡುಗೊರೆ ನೀಡಿದ ಸುದೀಪ್

  ಬರ್ತ್‌ಡೇಗೆ ಹೊಸ ಸಿನಿಮಾ ಘೋಷಿಸಿಲ್ಲ

  ಬರ್ತ್‌ಡೇಗೆ ಹೊಸ ಸಿನಿಮಾ ಘೋಷಿಸಿಲ್ಲ

  "ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಣೆ ಮಾಡುವುದು ಔಟ್‌ಡೇಟೆಡ್ ಆಯ್ತು. ಆ ಹೀರೊದು ಇಷ್ಟು ಆಗಿದೆ, ನಂದು ಇಷ್ಟು ಸಿನಿಮಾ ಘೋಷಣೆ ಆಗಿದೆ ಎಂದು ತೋರಿಸಿಕೊಳ್ಳಬೇಕಾ ? ಸಿನಿಮಾ ಅನೌನ್ಸ್ ಮಾಡುವುದು ಕೂಡ ಈ ಪಬ್ಲಿಸಿಟಿ. ಅದಕ್ಕೊಂದು ಅರ್ಥ ಇದೆ. ಹುಟ್ಟುಹಬ್ಬದ ದಿನ ಸಿನಿಮಾ ಅನೌನ್ಸ್ ಮಾಡುವುದರಿಂದ ಏನನ್ನು ಸಾಧಿಸುತ್ತೀವಿ. ಹೋ ಇನ್ನು ಕೆಲಸ ಇದೆ. ಕೆಲಸ ಖಾಲಿ ಆಗಿಲ್ಲ ಅಂಥಾನಾ? ನನಗೆ ಕೆಲಸ ಇದೆ. ಸುಮ್ಮನೆ ಪೋಸ್ಟರ್, ಬ್ಯಾನರ್ ಅಂತೆಲ್ಲಾ ಖರ್ಚು ಮಾಡುವುದು ನನಗೆ ಇಷ್ಟವಿಲ್ಲ. ಆ ಹಣದಲ್ಲಿ ಯಾರಿಗಾದರೂ ಸಹಾಯ ಮಾಡಬಹುದು. ಸಿನಿಮಾ ಅನೌನ್ಸ್ ಮಾಡ್ತೀವಿ. ಈಗ ಆ ಟ್ರೆಂಡ್ ಇಲ್ಲ. ನಾನಂತೂ ಅದನ್ನು ಫಾಲೋ ಮಾಡುವುದಿಲ್ಲ"

  ಹುಟ್ಟುಹಬ್ಬಕ್ಕೆ 'ವಿಕ್ರಾಂತ್‌ ರೋಣ' ಗಿಫ್ಟ್

  ಹುಟ್ಟುಹಬ್ಬಕ್ಕೆ 'ವಿಕ್ರಾಂತ್‌ ರೋಣ' ಗಿಫ್ಟ್

  'ವಿಕ್ರಾಂತ್‌ ರೋಣ' ನಂತರ ಸುದೀಪ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಘೋಷಣೆ ಮಾಡ್ತಾರೆ ಎಂದುಕೊಂಡವರಿಗೆ ನಿರಾಸೆ ಕಾದಿತ್ತು. ಈ ಬಗ್ಗೆ ಮಾತನಾಡಿದ ಕಿಚ್ಚ "ಇತ್ತೀಚೆಗಷ್ಟೆ 'ವಿಕ್ರಾಂತ್‌ ರೋಣ' ರಿಲೀಸ್ ಆಗಿದೆ. ಇವತ್ತು ಓಟಿಟಿಗೆ ಬಂದಿದೆ. 3 ವರ್ಷ ಕಾದಿದ್ದಕ್ಕೆ ಇದಕ್ಕಿಂತ ಒಳ್ಳೆ ಗಿಫ್ಟ್ ಏನು ಬೇಕು. ಹೊಸ ಸಿನಿಮಾ ಅನೌನ್ಸ್‌ ಮಾಡುವುದರಿಂದ ಏನು ಸಿಗುತ್ತದೆ" ಎಂದಿದ್ದಾರೆ.

  ಸದ್ಯಕ್ಕಿಲ್ಲ ನಿರ್ದೇಶನ

  ಸದ್ಯಕ್ಕಿಲ್ಲ ನಿರ್ದೇಶನ

  ಸುದೀಪ್ ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಒಂದೊಳ್ಳೆ ಸಿನಿಮಾ ನಿರ್ದೇಶನ ಮಾಡಬೇಕು ಅನ್ನುವ ತುಡಿತ ಸದಾ ಅವರಲ್ಲಿರುತ್ತದೆ. 'ವಿಕ್ರಾಂತ್‌ ರೋಣ' ನಂತರ ಅಂತಹ ಐಡಿಯಾ ಇದ್ಯಾ ಎನ್ನುವ ಪ್ರಶ್ನಗೆ "ತುಂಬಾ ಜನ ನನಗಾಗಿ ಕಥೆ ಬರೆಯುತ್ತಿದ್ದಾರೆ. ನಿರ್ದೇಶನ ಮಾಡುತ್ತಿದ್ದಾರೆ. ಈಗ ಅರ್ಜೆಂಟ್ ಏನು ಇಲ್ಲ. ಮಾಡಬೇಕು ಅನ್ನಿಸಿದ್ದಾಗ ಸಿನಿಮಾ ನಿರ್ದೇಶನ ಮಾಡ್ತೀನಿ. ತುಂಬಾ ಜನ ನಿರ್ದೇಶಕರು ಸಿನಿಮಾ ಮಾಡಲು ಬಂದಾಗ ಅವರೊಟ್ಟಿಗೆ ಕೆಲಸ ಮಾಡೋಣ ಮೊದಲು".

  ವಿಜಯ್ ಸೇತುಪತಿ ಜೊತೆ ಸಿನಿಮಾ?

  ವಿಜಯ್ ಸೇತುಪತಿ ಜೊತೆ ಸಿನಿಮಾ?


  ಇತ್ತೀಚೆಗೆ ಸುದೀಪ್ ತೆಲುಗಿನ 'ರಾಕ್ಷಸುಡು'- 2 ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ದೊಡ್ಡದಾಗಿ ಸದ್ದು ಮಾಡಿತ್ತು. ಇದು ನಿಜಾನೋ ಸುಳ್ಳೋ ಅನ್ನುವ ಪ್ರಶ್ನೆ ಸುದೀಪ್ ಮುಂದಿಟ್ಟಾಗ "ಇಲ್ಲ ಅದೆಲ್ಲಾ, ಬರೀ ಗಾಸಿಪ್ ಅಷ್ಟೇ ಎಂದು ಸುದೀಪ್ ಹೇಳಿದ್ದಾರೆ'. 'ಕಬಾಲಿ' ಸಿನಿಮಾ ನಿರ್ಮಾಪಕರು ಹಾಗೂ ವೆಂಕಟ್ ಪ್ರಭು ಜೊತೆ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿರುವುದು ನಿಜ. ಆದರೆ ಸದ್ಯಕ್ಕೆ ಆ ಸಿನಿಮಾಗಳು ಯಾವುದು ಶುರುವಾಗುತ್ತಿಲ್ಲ ಎಂದಿದ್ದಾರೆ ಸುದೀಪ್.

  ಎಲ್ಲೇ ಹೋದ್ರು 'ವಿಕ್ರಾಂತ್‌ ರೋಣ' ಬಗ್ಗೆ ಮಾತನಾಡ್ತಾರೆ

  ಎಲ್ಲೇ ಹೋದ್ರು 'ವಿಕ್ರಾಂತ್‌ ರೋಣ' ಬಗ್ಗೆ ಮಾತನಾಡ್ತಾರೆ

  "ಒಂದು 'ವಿಕ್ರಾಂತ್‌ ರೋಣ' ಸಕ್ಸಸ್ ನಂತರ ಆಲ್‌ ಓವರ್ ಇಂಡಿಯಾ ಒಂದು ವಿಂಡೋ ಓಪನ್ ಆಯ್ತು. ಹೊಸ ಹೊಸ ಪ್ರೇಕ್ಷಕರನ್ನು ಸಂಪಾದಿಸಿದ್ದೀವಿ. ಹಾಗಾಗಿ ಮುಂದೆ ಅದಕ್ಕಿಂತ ದೊಡ್ಡದಾಗಿ ಪ್ರಯತ್ನಿಸಬೇಕು. ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಲೇ ಇರ್ತೀವಿ. ಆದರೆ ಹೊಸದನ್ನು ಪ್ರಯತ್ನಿಸಬೇಕು. 'ವಿಕ್ರಾಂತ್ ರೋಣ' ಆ ತರ ಮಾಡಿದ್ದಕ್ಕೆ ಎಲ್ಲಾ ಕಡೆ ಸದ್ದು ಮಾಡಿದ್ದು. ಅಲ್ಲೂ ನನ್ನ ಸ್ವಾರ್ಥ ಇಟ್ಟುಕೊಂಡು ಇದೇ ತರ ಫೈಟ್ಸ್, ಡೈಲಾಗ್ಸ್ ಬೇಕು ಎಂದು ಮಾಡಿದ್ದರೆ ಸರಿಯಾಗುತ್ತಿರಲಿಲ್ಲ. ಕಥೆಗೆ ತಕ್ಕಂತೆ ಕೆಲಸ ಮಾಡಬೇಕು. ಎಲ್ಲೇ ಹೋದ್ರು 'ವಿಕ್ರಾಂತ್‌ ರೋಣ' ಬಗ್ಗೆ ಮಾತನಾಡ್ತಾರೆ. ಒಳ್ಳೆ ಬ್ಯುಸಿನೆಸ್ ಮಾಡಿದೆ."

  English summary
  Kiccha Sudeep Birthday Sudeep Talks About His Upcoming Projects. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X