ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುನೀಲ್ ಶೆಟ್ಟಿಗೆ ಸುದೀಪ್ ಹೇಳಿದ್ದೇನು?
ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಕಿಚ್ಚ ಅಭಿಮಾನಿಗಳು ಪೈಲ್ವಾನ್ ಕಾದಾಟ ನೊಡಲು ಕಾದುಕುಳಿತಿದ್ದಾರೆ. ಅಂದ್ಹಾಗೆ ಚಿತ್ರದಲ್ಲಿ ಸುದೀಪ್ ಜೊತೆ ಬಾಲಿವುಡ್ ನಟ ಕನ್ನಡಿಗ ಸುನೀಲ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಅಂದ್ಹಾಗೆ ಸುನೀಲ್ ಶೆಟ್ಟಿ ಮತ್ತು ಸುದೀಪ್ ಇಬ್ಬರು ಉತ್ತಮ ಗೆಳೆಯರು. ಪೈಲ್ವಾನ್ ಸಿನಿಮಾದ ನಂತರ ಇಬ್ಬರ ಸ್ನೇಹ ಸಂಬಂಧ ಮತ್ತಷ್ಟು ಗಾಢವಾಗಿದೆ. ಇಂದು ಸುನೀಲ್ ಶೆಟ್ಟಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಸುನೀಲ್ ಶೆಟ್ಟಿ ಜನ್ಮದಿನಚರಣೆಗೆ ಕಿಚ್ಚ ಸುದೀಪ್ ವಿಶೇಷವಾಗಿ ಶುಭ ಕೋರಿದ್ದಾರೆ. "ನಿಮ್ಮನ್ನು ಭೇಟಿಯಾಗಿದ್ದು, ನೀವು ಪರಿಚಯವಾಗಿದ್ದು, ನಿಮ್ಮ ಜೊತೆ ತುಂಬ ಹತ್ತಿರದಿಂದ ಕೆಲಸ ಮಾಡಿದ್ದು ತುಂಬ ಖುಷಿಯಾಗುತ್ತೆ. ನೀವು ನಿಸ್ವಾರ್ಥ ವ್ಯಕ್ತಿ. ನಿಮ್ಮ ಜೀವನದಲ್ಲಿ ನನಗೂ ಸ್ಥಾನ ಕೊಟ್ಟಿರುವುದಕ್ಕೆ ಧನ್ಯವಾದಗಳು. ನಿಮಗೆ ದೇವರು ಹೆಚ್ಚು ಆರೋಗ್ಯ ನೀಡಲಿ. ಹುಟ್ಟುಹಬ್ಬದ ಶುಭಾಶಯಗಳು ಸುನೀಲ್ ಅಣ್ಣ" ಎಂದು ಪ್ರೀತಿಯ ಸುನೀಲ್ ಅಣ್ಣನಿಗೆ ಶುಭಹಾರೈಸಿದ್ದಾರೆ.

ಸುದೀಪ್ ಮತ್ತು ಸುನೀಲ್ ಶೆಟ್ಟಿ ಅಭಿನಯದ ಪೈಲ್ವಾನ್ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದ ಆಡಿಯೋವನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಗೆ ತರಬೇಕಿತ್ತು. ಆದ್ರೆ ಉತ್ತರ ಕರ್ನಾಟಕ ಜನರ ಸಂಕಷ್ಟಕ್ಕೆ ಮಿಡಿದ ಚಿತ್ರತಂಡ ಆಡಿಯೋ ರಿಲೀಸ್ ಡೇಟನ್ನು ಮುಂದಕ್ಕೆ ಹಾಕಿಕೊಂಡಿದೆ.


Click it and Unblock the Notifications











