ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್‌ಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ

ಬಾಲಿವುಡ್ ಖ್ಯಾತ ನಟಿ, ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಕ್ವೆಲಿನ್ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸುವ ಮೂಲಕ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

Recommended Video

ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ವಿಶ್ ಮಾಡಿದ ಕಿಚ್ಚ

ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಜಾಕ್ವೆಲಿನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 36ನೇ ವರ್ಷದ ಹುಟ್ಟುಹಬ್ಬಕ್ಕೆ ಕೇಕ್ ಮೇಲೆ 36 ಮೇಣದಬತ್ತಿಗಳನ್ನು ಹಚ್ಚುವ ಮೂಲಕ ವಿಶೇಷವಾದ ಕೇಕ್ ಕತ್ತರಿಸಿ ಸಂತಸ ಪಟ್ಟಿದ್ದಾರೆ. ಶ್ರೀಲಂಕಾದಲ್ಲಿ ಹುಟ್ಟಿದ ನಟಿ ಜಾಕ್ವೆಲಿನ್ ಬಹ್ರೇನ್ ನಲ್ಲಿ ಬೆಳೆದು ಭಾರತದಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಜಾಕ್ವೆಲಿನ್ ಬಾಲಿವುಡ್ ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಬಾಲಿವುಡ್ ಜೊತೆಗೆ ಜಾಕ್ವೆಲಿನ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ 'ವಿಕ್ರಾಂತ್ ರೋಣ' ಸಿನಿಮಾದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಜಾಕ್ವೆಲಿನ್ ಕನ್ನಡ ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿರುವ ಜಾಕ್ವೆಲಿನ್ ನೋಡಲು ಕಾತರರಾಗಿದ್ದಾರೆ.

Kiccha Sudeep birthday wishes to Bollywood Actress Jacqueline Fernandez

ಅಂದಹಾಗೆ ಜಾಕ್ವೆಲಿನ್ ಹುಟ್ಟುಹಬ್ಬದ ಪ್ರಯುಕ್ತ ಇಂದು ವಿಕ್ರಾಂತ್ ರೋಣ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ವಾಂಟೆಡ್ ಲಿಸ್ಟ ನಲ್ಲಿರುವ ಜಾಕ್ವೆಲಿನ್ ಫೋಟೋ ರಿವೀಲ್ ಆಗಿದೆ. ಕ್ರೈಂ, ಅಗ್ರಮ ಮದ್ಯೆ ಮಾರಾಟ, ಪೊಲೀಸ್ ಪೋಟೋಗಳ ಜೊತೆ ಜಾಕ್ವೆಲಿನ್ ಫೋಟೋ ಕೂಡ ಇರುವುದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕುತೂಹಲ ಮೂಡಿಸುವ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾತಂಡ ಶೇರ್ ಮಾಡಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಂದಹಾಗೆ ಈ ಫೋಟೋವನ್ನು ಶೇರ್ ಮಾಡಿ ಕಿಚ್ಚ ಸುದೀಪ್ ಬಾಲಿವುಡ್ ಬ್ಯೂಟಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. "ನಿಮಗೆ ಯಾವಾಗಲು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ.

ಇನ್ನು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ನಿರೂಪ್ ಭಂಡಾರಿ ಸಹ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಂದಹಾಗೆ ಜಾಕ್ವೆಲಿನ್ ವಿಕ್ರಾಂತ್ ರೋಣ ಸಿನಿಮಾದಲ್ಲಿ 'ಗದಂಗ್ ರಕ್ಕಮ್ಮ' ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾಗಿರುವ ಈ ಹೆಸರು ಜಾಕ್ವೆಲಿನ್ ಪಾತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Kiccha Sudeep birthday wishes to Bollywood Actress Jacqueline Fernandez

ಇತ್ತೀಚಿಗಷ್ಟೆ ಈ ಬಹುನಿರೀಕ್ಷೆಯ ಹಾಡಿನ ಚಿತ್ರೀಕರಣ ಮಾಡಲಾಗಿದೆ. ವಿಕ್ರಾಂತ್ ರೋಣಗಾಗಿ ಬೆಂಗಳೂರಿಗೆ ಬಂದಿದ್ದ ಜಾಕ್ವೆಲಿನ್ ಹಾಡಿನ ಚಿತ್ರೀಕರಣ ಮುಗಿಸಿ ಮುಂಬೈಗೆ ಆಗಿದ್ದರು. ಚಿತ್ರೀಕರಣ ಸಮಯದಲ್ಲಿ ಕಿಚ್ಚನ ಜೊತೆ ಫೋಟೋಗೆ ಪೋಸ್ ನೀಡಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಬಳಿಕ ಚಿತ್ರದಿಂದ ಜಾಕ್ವೆಲಿನ್ ಮೊದಲ ಲುಕ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿತ್ತು ಚಿತ್ರತಂಡ. ಜಾಕ್ವಿನ್ ಕೂಡ ಚಿತ್ರದ ಪೋಸ್ಟರ್ ಗೆ ಫಿದಾ ಆಗಿದ್ದರು. ಅಂದಹಾಗೆ ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು ಮಲಯಾಳಂ ಮತ್ತು ಹಿಂದಿ ಸೇರಿದಂತೆ 5 ಭಾಷೆಯಲ್ಲಿ ತೆರೆಗೆ ಬರ್ತಿದೆ. ಐದುಭಾಷೆಯಲ್ಲೂ ಜಾಕ್ವೆಲಿನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಸದ್ಯ ಹುಟ್ಟುಹಬ್ಬದ ಪ್ರಯುಕ್ತ ಬಂದ 'ಗದಂಗ್ ರಕ್ಕಮ್ಮ'ನ ರಗಡ್ ಲುಕ್ ಕೂಡ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ಸದ್ಯ ಹಾಡಿನ ಚಿತ್ರೀಕರಣ ಮುಗಿಸಿ ವಾಪಸ್ ಆಗಿರುವ ಜಾಕ್ವೆಲಿನ್ ಮತ್ತೆ ಬೆಂಗಳೂರಿಗೆ ಬರುವ ಸೂಚನೆ ನೀಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ತನ್ನ ಪಾತ್ರದ ಡಬ್ಬಿಂಗ್ ಮಾಡಲು ಜಾಕ್ವೆಲಿನ್ ಮತ್ತೆ ಬರ್ತಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ ಬಿಡುಗಡೆ ಯಾವಾಗ ಎನ್ನುವುದು ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ. ಕೊರೊನಾ 2ನೇ ಅಲೆ ಕಡಿಮೆಯಾಗಿ ಇನ್ನೇನು ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಂತೆ 3ನೇ ಅಲೆಯ ಆತಂಕ ಶುರುವಾಗಿದೆ. ಈ ನಡುವೆ ವಿಕ್ರಾಂತ್ ರೋಣನ ಎಂಟ್ರಿ ಯಾವಾಗ ಎನ್ನುವುದು ಸದ್ಯದ ಕುತೂಹಲ.

More from Filmibeat

English summary
Kannada Actor Kiccha Sudeep birthday wishes to Bollywood Actress Jacqueline Fernandez.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X