ಸಲ್ಮಾನ್ ಖಾನ್ ವಿರುದ್ಧ ಕಿಚ್ಚ ಸುದೀಪ್ ಶರ್ಟ್ ಲೆಸ್ ಫೈಟ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಕ್ಲೈಮ್ಯಾಕ್ಸ್ ಸೆರೆ ಹಿಡಿಯುವಲ್ಲಿ ಬ್ಯುಸಿಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗಾಗಲೆ ಚಿತ್ರೀಕರಣಕ್ಕೆ ಹಾಜರಾಗಿ ದಿನಗಳೆ ಆಗಿವೆ.

'ದಬಾಂಗ್-3' ಚಿತ್ರದಲ್ಲಿ ಸುದೀಪ್ ಖಳ ನಟನಾಗಿ ಅಬ್ಬರಿಸಲಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ವಿರುದ್ಧ ಕಿಚ್ಚ ಅಖಾಡಕ್ಕೆ ಇಳಿದಿದ್ದಾರೆ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ವಿರುದ್ಧ ತೊಡೆತಟ್ಟಿರುವ ಸುದೀಪ್ ಸದ್ಯ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರಂತೆ.

ಭಾರಿ ಒತ್ತಡದ ನಡುವೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುತ್ತಿದ್ದಾರಂತೆ. ಅಲ್ಲದೆ ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್, ಸಲ್ಮಾನ್ ವಿರುದ್ಧ ಶರ್ಟ್ ಲೆಸ್ ಫೈಟ್ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ವತಹ ಸುದೀಪ್ ಟ್ವಿಟ್ಟರ್ ಸ್ಪಷ್ಟಪಡಿಸಿದ್ದಾರೆ.

kiccha sudeep busy in dabangg-3 climax shooting

"ಒತ್ತಡದ ನಡುವೆ ದಬಾಂಗ್-3 ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ದೊಡ್ಡ ಸೆಟ್, ವಿನಮ್ರ ತಂಡ. ಇದೊಂದು ಉತ್ತಮ ಅನುಭವ. ಬೇರ್ ಬಾಡಿಯಲ್ಲಿ ಸಲ್ಮಾನ್ ಖಾನ್ ವಿರುದ್ಧ ಫೈಟ್ ಮಾಡುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ. ಸ್ವಲ್ಪ ವಿಶ್ವಾಸದೊಂದಿಗೆ ಇವತ್ತು ಚಿತ್ರೀಕರಣಕ್ಕೆ ಹೊರಟಿದ್ದೇನೆ. ನಾನು ಇದನ್ನು ಎಂಜಾಯ್ ಮಾಡುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

ಸುದೀಪ್ ಮೊನ್ನೆ ಮೊನ್ನೆಯಷ್ಟೆ ಚಿತ್ರೀಕರಣ ಸೆಟ್ ಗೆ ಹಾಜರಾಗಿದ್ದಾರೆ. ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸಿಕಂದರ್ ಭಾರಧ್ವಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ದಬಾಂಗ್-3' ಚಿತ್ರದಲ್ಲಿ ಸುದೀಪ್ ಪಾತ್ರ ಭಾರಿ ಕುತೂಹಲ ಮೂಡಿಸಿದೆ. ಕಿಚ್ಚ ಅಭಿನಯದ 'ಪೈಲ್ವಾನ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜೊತೆಗೆ 'ಕೋಟಿಗೊಬ್ಬ-3' ಕೂಡ ಚಿತ್ರೀಕರಣ ನಡೊಯುತ್ತಿದೆ.

More from Filmibeat

English summary
Sudeep took to the twitter and gave an update about shooting the dabangg-3 climax scene. He wrote climax shoot for dabangg3 has been very hectic yet a great experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X