»   » ದಕ್ಷಿಣದ ಈ ದೊಡ್ಡ ಸಿನಿಮಾದಲ್ಲಿ ಸುದೀಪ್ ನಟಿಸುವುದು ಅನುಮಾನ.!

ದಕ್ಷಿಣದ ಈ ದೊಡ್ಡ ಸಿನಿಮಾದಲ್ಲಿ ಸುದೀಪ್ ನಟಿಸುವುದು ಅನುಮಾನ.!

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನ 'ದಿ ವಿಲನ್' ಬಹುತೇಕ ಮುಗಿದಿದೆ. 'ಹೆಬ್ಬುಲಿ' ಕೃಷ್ಣ ನಿರ್ದೇಶನದಲ್ಲಿ 'ಪೈಲ್ವಾನ್' ಸೆಟ್ಟೇರಲಿದೆ. ಈ ಮಧ್ಯೆ 'ಬಿಗ್ ಬಾಸ್ ಕನ್ನಡ 5' ಆರಂಭವಾಗಿದ್ದು, ಪ್ರತಿವಾರ ಸುದೀಪ್ ವೇದಿಕೆಯಲ್ಲಿರಬೇಕು.

ಇದೇ ತಿಂಗಳಿನಿಂದ ಹಾಲಿವುಡ್ ಚಿತ್ರವೂ ಶುರುವಾಗುವ ಸಾಧ್ಯತೆ ಇದೆ. ಇಷ್ಟು ಬಿಜಿ ಶೆಡ್ಯೂಲ್ ನಲ್ಲಿ ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿದೆ.

ಇದನ್ನ ಚಿತ್ರತಂಡ ಖಚಿತ ಪಡಿಸಿದ್ದು, ಸುದೀಪ್ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಆದ್ರೀಗ, ಈ ಚಿತ್ರದಲ್ಲಿ ಸುದೀಪ್ ನಟಿಸುವುದು ಬಹುತೇಕ ಅನುಮಾನವಾಗಿದೆ. ಅದು ಯಾಕೆ ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದಾರೆ ನೋಡಿ....ಮುಂದೆ ಓದಿ.....

ಮೆಗಾಸ್ಟಾರ್ ಚಿರು ಸಿನಿಮಾದಲ್ಲಿ ಸುದೀಪ್.!

'ಮೆಗಾಸ್ಟಾರ್' ಚಿರಂಜೀವಿ ಅಭಿನಯಿಸಲಿರುವ 'ಸೈರ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಪ್ರಮುಖ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಚಿರಂಜೀವಿಯ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗೆಡಯಾಗಿದ್ದು, ಇದರಲ್ಲಿ ಸುದೀಪ್ ಅವರ ಫೋಟೋ ಕೂಡ ಇತ್ತು.

ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!

ಈ ಚಿತ್ರವನ್ನ ಸುದೀಪ್ ಕನ್ ಫರ್ಮ್ ಮಾಡಿಲ್ಲ!

ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ ದಕ್ಷಿಣ ಭಾರತದ ಹಲವು ಸ್ಟಾರ್ ನಟರ ಜೊತೆ ಕನ್ನಡ ಸುದೀಪ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಈ ಸಿನಿಮಾ ಕನ್ ಫರ್ಮ್ ಆಗಿಲ್ಲ ಎಂದು ಸ್ವತಃ ಸುದೀಪ್ ಅವರೇ ತಿಳಿಸಿದ್ದಾರೆ.

ಮಾತುಕತೆ ಹಂತದಲ್ಲಿದೆ

ಈ ಪ್ರಾಜೆಕ್ಟ್ ಅಭಿನಯಿಸುವುದರ ಬಗ್ಗೆ ಇನ್ನು ಮಾತುಕತೆಯ ಹಂತದಲ್ಲಿದೆ ಎಂದು ಕಿಚ್ಚ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ನಟಿಸುವುದು ಅನುಮಾನವೆಂದು ಕೂಡ ಹೇಳಿದ್ದಾರೆ.

ಅಭಿನಯಿಸುವುದು ಅನುಮಾನ.!

ಅಂದ್ಹಾಗೆ, ಚಿರಂಜೀವಿಯ 151 ಚಿತ್ರದಲ್ಲಿ ಸುದೀಪ್ ಅಭಿನಯಿಸುವುದು ಬಹುತೇಕ ಅನುಮಾನ. ಯಾಕಂದ್ರೆ, ಸುದೀಪ್ ಅವರು ಚಿತ್ರಕ್ಕಾಗಿ ಸುಮಾರು 50-60 ದಿನಗಳ ಕಾಲ್ ಶೀಟ್ ನೀಡಬೇಕಂತೆ. ಈಗಾಗಲೇ ಹಲವು ಪ್ರಾಜೆಕ್ಟ್ ನಲ್ಲಿ ಬಿಜಿ ಇರುವ ಸುದೀಪ್ ಈ ಒಂದು ಚಿತ್ರಕ್ಕೆ 50-60 ದಿನ ಮೀಸಲಿಡಲು ಕಷ್ಟ ಎಂದು ನಿರ್ಧರಿಸಿದ್ದಾರಂತೆ.

ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!

ಕಾದು ನೋಡಬೇಕಿದೆ....

ಈ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಮುಂದೆನಾಗತ್ತೇ ಎಂದು ಕಾದು ನೋಡೋಣ ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದಾರೆ. ಹೀಗಾಗಿ, ದಕ್ಷಿಣ ಭಾರತದ ಈ ದೊಡ್ಡ ಸಿನಿಮಾದಲ್ಲಿ ಕಿಚ್ಚನ ಎಂಟ್ರಿ ಇನ್ನು ಅಧಿಕೃತವಾಗಿ ಆಗಿಲ್ಲ ಎನ್ನುವುದು ಮಾತ್ರ ಪಕ್ಕಾ.

ಚಿರಂಜೀವಿ 151ನೇ ಚಿತ್ರದಲ್ಲಿ ಅಮಿತಾಬ್ ಪಾತ್ರದ ಗುಟ್ಟು ಈಗ ರಟ್ಟು.!

English summary
Kannada Actor, kiccha Sudeep Speaks About His Telugu Movie With Megastar Chiranjeevi. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರದಲ್ಲಿ ನಟಿಸುವ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada