»   » ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!

ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!

Posted By:
Subscribe to Filmibeat Kannada

ತೆರೆ ಮೇಲೆ 'ಆರ್ಮುಗಂ' ರವಿಶಂಕರ್ ಅಬ್ಬರದ ನಟನೆ ಯಾರೂ ಮಿಸ್ ಮಾಡಿರೋಕೆ ಸಾಧ್ಯವೇ ಇಲ್ಲ.

'ಕೆಂಪೇಗೌಡ', 'ದಂಡಂ ದಶಗುಣಂ', 'ವರದ ನಾಯಕ', 'ಮಾಣಿಕ್ಯ' ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖತರ್ನಾಕ್ ಕೇಡಿ ಪಾತ್ರಗಳಲ್ಲಿ ಅಭಿನಯಿಸಿರುವ ರವಿಶಂಕರ್, ನಿಜ ಜೀವನದಲ್ಲೂ ಕಟುಕ, ಕ್ರೂರಿ ಅಂತ ಕೆಲವರಿಗೆ ಅನಿಸಿರಬಹುದು. [ಆರ್ಮುಗಂ ರವಿಶಂಕರ್ ಸಂದರ್ಶನ]


ಆದ್ರೆ, ವಾಸ್ತವ ಅದಲ್ಲ. ರವಿಶಂಕರ್ ಅಸಲಿ ವ್ಯಕ್ತಿತ್ವ ಏನು ಎಂಬುದನ್ನ ಕಿಚ್ಚ ಸುದೀಪ್ ಇಂದು ಬಯಲು ಮಾಡಿದರು.


'ಕೋಟಿಗೊಬ್ಬ-2' ಚಿತ್ರದ ಕಲೆಕ್ಷನ್ ಸಮಾಚಾರ ಹಂಚಿಕೊಳ್ಳಲು ಇಂದು ವಿತರಕರು ಪತ್ರಿಕಾಗೋಷ್ಟಿ ಆಯೋಜಿಸಿದ್ದರು. ಅದರಲ್ಲಿ ಭಾಗವಹಿಸಿದ ಕಿಚ್ಚ ಸುದೀಪ್, ರವಿಶಂಕರ್ ಕುರಿತು ಕೆಲ ಮಾತುಗಳನ್ನಾಡಿದರು.


ರವಿಶಂಕರ್ ಬಗ್ಗೆ ಸುದೀಪ್ ಏನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ.....


ಅತ್ಯುತ್ತಮ ವ್ಯಕ್ತಿ ರವಿಶಂಕರ್

''ರವಿಶಂಕರ್ ಮತ್ತು ನನ್ನದು - ಒಂಥರಾ ಬೇರೆ ತರಹದ ಸಂಬಂಧ. ಅವರಲ್ಲಿ ಬಹಳ ಅತ್ಯುತ್ತಮ ವ್ಯಕ್ತಿಯನ್ನ ನಾನು ಕಾಣುತ್ತೇನೆ'' - ಕಿಚ್ಚ ಸುದೀಪ್ [50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]


ಸಿಂಪಲ್ ವ್ಯಕ್ತಿ

''Very honest, Very simple. I still wonder how he does that on the screen'' - ಕಿಚ್ಚ ಸುದೀಪ್ [ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!]


ಇದನ್ನೆಲ್ಲಾ ರವಿಶಂಕರ್ ಮಾಡೋಕೆ ಸಾಧ್ಯವೇ ಇಲ್ಲ!

''ಯಾರಿಗಾದರೂ ಬೈಯ್ಯುವುದು, ಗುರಾಯಿಸಿಕೊಂಡು ಹೊಡೆಯೋಕೆ ಹೋಗುವುದು, ಹುಡುಗಿಯರ ಕೈ ಹಿಡಿದು ಎಳೆಯುವುದು - ಇದು ರವಿಶಂಕರ್ ಮಾಡೋಕೆ ಸಾಧ್ಯನೇ ಇಲ್ಲ'' - ಕಿಚ್ಚ ಸುದೀಪ್ [ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]


'ಕೋಟಿಗೊಬ್ಬ-2' ಸೆಟ್ ನಲ್ಲಿ ಆದ ಘಟನೆ

''He is such a beautiful talent. 'ಕೋಟಿಗೊಬ್ಬ-2' ಚಿತ್ರದಲ್ಲಿ ಒಂದ್ ಸೀನ್ ಇದೆ. ಹುಡುಗಿಯನ್ನ ಹಿಡ್ಕೊಂಡು ಎಳೆಯೋದು, ಅದನ್ನ ಮಾಡೋಕೆ ರವಿಶಂಕರ್ ಅಷ್ಟು ಯಾರೂ ಬೆವತಿಲ್ಲ. ಆ ಹುಡುಗಿನೇ ಚೆನ್ನಾಗಿದ್ದರು, ನಗಾಡಿಕೊಂಡು. ರವಿಶಂಕರ್ ಕೈಯಲ್ಲಿ ಆಗ್ತಿರ್ಲಿಲ್ಲ, ನಡುಗುತ್ತಿದ್ರು'' - ಕಿಚ್ಚ ಸುದೀಪ್ [ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ರವಿಶಂಕರ್ ಸಿಕ್ಕಿದ್ಮೇಲೆ....

''What an Actor.! 'ಕೋಟಿಗೊಬ್ಬ-2' ಚಿತ್ರದಲ್ಲಿ ಒಂದು ಡೈಲಾಗ್ ಇದೆ - ''ಪರ್ವಾಗಿಲ್ಲ, ನನ್ನ ಜೊತೆ ಸೇರ್ಕೊಂಡು ನಿನ್ನ ಆಕ್ಟಿಂಗ್ ಇಂಪ್ರೂವ್ ಆಗಿದೆ'' ಅಂತ. ನಿಜ ಹೇಳ್ಬೇಕಂದ್ರೆ, ಅದು ಉಲ್ಟಾ. ನಾನು ರವಿಶಂಕರ್ ರವರನ್ನ ಭೇಟಿ ಮಾಡಿದ್ದು 'ಕೆಂಪೇಗೌಡ' ಚಿತ್ರದಲ್ಲಿ. ಅಲ್ಲಿಂದ ನನ್ನ ಗ್ರಾಫ್ ಚೆನ್ನಾಗಿದೆ'' - ಕಿಚ್ಚ ಸುದೀಪ್


ರವಿಶಂಕರ್ ರವರಿಂದ ನನ್ನ ಆಕ್ಟಿಂಗ್ ಇಂಪ್ರೂವ್ ಆಗಿದೆ!

''I guess, ರವಿಶಂಕರ್ ಸಿಕ್ಕಿದಾಗಿನಿಂದ ನಾನು ಇಂಪ್ರೂವ್ ಆಗಿದ್ದೀನಿ'' - ಕಿಚ್ಚ ಸುದೀಪ್


English summary
In a Success Meet arranged by 'Kotigobba-2' Producer Surappa Babu and distributors today (August, 16th) at 'Gold Finch' Hotel, Bengaluru, Kannada Actor Kiccha Sudeep commented on P.Ravishankar Personality. Read the article to know Sudeep's comments.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada