twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ಕಬ್ಬಿನ ಗದ್ದೆಯಲ್ಲಿ ಬಾಲಕಿ ಸಾವು: ನ್ಯಾಯಕ್ಕೆ ಒತ್ತಾಯಿಸಿದ ಸುದೀಪ್

    |

    ಮಂಡ್ಯದ ಮದ್ದೂರಿನ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    Recommended Video

    ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

    ಇದೀಗ, ಕನ್ನಡ ನಟ ಕಿಚ್ಚ ಸುದೀಪ್ ಸಹ ಖಂಡಿಸಿದ್ದು, ಆ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ಒತ್ತಾಯಿಸಿರುವ ಸುದೀಪ್ ''ಈ ಕೇಸ್‌ನಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಭಾವಿಸಿದ್ದೇನೆ. ಈ ಮೂಲಕ ಅತ್ಯಾಚಾರಿಗಳಿಗೆ ಭಯಾನಕ ಸಂದೇಶ ರವಾನೆಯಾಗಲಿದೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ಬಾಲಕಿ ಮೇಲೆ ಅತ್ಯಾಚಾರ ಕೊಲೆ ಖಂಡಿಸಿದ ನಟ ಸತೀಶ್ ನೀನಾಸಂಬಾಲಕಿ ಮೇಲೆ ಅತ್ಯಾಚಾರ ಕೊಲೆ ಖಂಡಿಸಿದ ನಟ ಸತೀಶ್ ನೀನಾಸಂ

    kiccha-sudeep-condemns-the-rape-of-12-year-old-girl-in-mandya

    ಸುದೀಪ್ ಅವರಿಗೂ ಮುಂಚೆ ನಟ ಸತೀಶ್ ನೀನಾಸಂ ಈ ಘಟನೆ ಖಂಡಿಸಿದ್ದು, ''ಮಂಡ್ಯ ಜಿಲ್ಲೆ, ಮದ್ದೂರ್ ತಾಲುಕು, "ಆರತಿ" ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಅಸಹ್ಯವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ, ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರು ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ಈ ಭೂಮಿಯ ದುರಂತ'' ಎಂದು ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

    ಘಟನೆಯ ವಿವರ
    ಮದ್ದೂರಿನ ಹುರುಗಲ ವಾಡಿ ಗ್ರಾಮದ ರೈತ ಚೆಲುವರಾಜ್ ಅವರ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೂಲದ ಬಾಲಕಿ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದಳು. ಈ ವೇಳೆ ಆಕೆಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

    ಮೃತ ಬಾಲಕಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಇಂದು ಹೊಸಪೇಟೆಯ ಮೂಲ ಊರಿಗೆ ತೆಗೆದುಕೊಂಡು ಬರಲಾಗಿದೆ. ಈ ವೇಳೆ ಊರಿನ ಗ್ರಾಮಸ್ಥರು ಬಾಲಕಿ ಶವವನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಡಿಸಿ ನಕುಲ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.

    English summary
    Actor Kiccha Sudeep condemns the rape of a 12 year old girl in mandya.
    Saturday, December 5, 2020, 10:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X