ಬಿಗ್‌ಬಾಸ್ ಕನ್ನಡ ಪ್ರತಿ ಸೀಸನ್‌ಗೆ ನಟ ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?

ನಟ ಕಿಚ್ಚ ಸುದೀಪ್ ಬಿಗ್‌ಬಾಸ್ ಶೋನಿಂದ ಹೊರ ಬರಲು ಮುಂದಾಗಿದ್ದಾರೆ. ಇದೇ ನನ್ನ ಕೊನೆಯ ಬಿಗ್‌ಬಾಸ್ ಸೀಸನ್, ಈ ಬಾರಿ ಇದನ್ನು ಯಶಸ್ವಿಗೊಳಿಸೋಣ ಎಂದು ಸುದೀಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸುದೀಪ್ ಬಿಗ್‌ಬಾಸ್ ನಿರೂಪಣೆ ನಿಲ್ಲಿಸುತ್ತಾರೆ ಎನ್ನುವ ವಿಚಾರ ಹೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಅಷ್ಟಕ್ಕೂ ಸುದೀಪ್ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಎಂದು ಕೆಲವರು ಚರ್ಚೆ ಆರಂಭಿಸಿದ್ದಾರೆ. ಆದರೆ ಈ ಬಗ್ಗೆ ಸುದೀಪ್ ಆಗಲಿ ಕಲರ್ಸ್ ಕನ್ನಡ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಗಂಭೀರ ಕಾರಣಕ್ಕೆ ಸುದೀಪ್ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನುವುದು ಕೆಲವರ ವಾದ. ಇನ್ನು ಮುಂದೆ ಯಾರು ಶೋ ನಡೆಸಿಕೊಡುತ್ತಾರೆ? ಅಥವಾ ಶೋ ನಿಂತು ಹೋಗುತ್ತಾ? ಎನ್ನುವ ಬಗ್ಗೆಯೂ ಕೆಲವರಲ್ಲಿ ಕುತೂಹಲವಿದೆ.

Kiccha Sudeep exit from bigg boss kannada how much remuneration he charge to Host Show

ಹೇಳಿ ಕೇಳಿ ಬಿಗ್‌ಬಾಸ್ ಶೋ ಚಿನ್ನದ ಮೊಟ್ಟೆ ಇಡುವ ಕೋಳಿ. ಶೋ ಆಯೋಜಕರಿಗೆ, ಸ್ಪರ್ಧಿಗಳಿಗೆ, ಅಷ್ಟೇ ಅಲ್ಲಿ ಶೋಗಾಗಿ ಕೆಲಸ ಮಾಡುವ ಸಿಬ್ಬಂದಿ ಹೀಗೆ ಎಲ್ಲರಿಗೂ ಒಳ್ಳೆ ಆದಾಯವಿದೆ. ಇನ್ನು ಇಡೀ ಶೋ ಕೇಂದ್ರಬಿಂದು ನಿರೂಪಕ ಸುದೀಪ್ ಅವರಿಗೂ ಭರ್ಜರಿ ಸಂಭಾವನೆ ಸಿಗುತ್ತಿದೆ. ಸಂಭಾವನೆ ಕಾರಣಕ್ಕೆ ನಾನು ಶೋನಿಂದ ಹೊರಬರುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ಹೇಳಿಕೊಂಡಿದ್ದರು.

ಕಳೆದ 10 ಸೀಸನ್‌ಗಳನ್ನು ನಟ ಸುದೀಪ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 11ನೇ ಸೀಸನ್ ಕೂಡ ಮೊದಲ ವಾರವೇ ಭರ್ಜರಿ ಟಿಆರ್‌ಪಿ ಗಿಟ್ಟಿಸಿದೆ. ಬಿಗ್‌ಬಾಸ್ ಕನ್ನಡ ಶೋಗೆ ಒಂದು ಗತ್ತು ಗಮ್ಮತ್ತು ತಂದುಕೊಟ್ಟವರು ಇದೇ ಸುದೀಪ್. ಮೊದಲ ಸೀಸನ್‌ನಿಂದಲೂ ಕಿಚ್ಚನಿಗೆ ಒಳ್ಳೆ ಸಂಭಾವನೆಯೇ ಸಿಗುತ್ತಿದೆ. ಸೀಸನ್‌ನಿಂದ ಸೀಸನ್‌ಗೆ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಸಂಭಾವನೆ ಕೂಡ ಹೆಚ್ಚುತ್ತಾ ಬಂದಿತ್ತು.

Kiccha Sudeep exit from bigg boss kannada how much remuneration he charge to Host Show

2013ರಲ್ಲಿ ಮೊದಲಿಗೆ ಬಿಗ್‌ಬಾಸ್ ಕನ್ನಡ ಸೀಸನ್-1 ಆರಂಭವಾಗಿತ್ತು. ಮೊದಲ 5 ಸೀಸನ್‌ಗಳಿಗೆ ಒಟ್ಟಿಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದ್ರೆ ಪ್ರತಿ ಸೀಸನ್‌ಗೆ 4 ಕೋಟಿ ರೂ. ಸಂಬಳ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ. ಅಲ್ಲಿಂದ ಮುಂದೆ ಪ್ರತಿ ಸೀಸನ್‌ಗೆ ಸುದೀಪ್ ಸಂಭಾವನೆ ಹೆಚ್ಚುತ್ತಾ ಬಂದಿತ್ತು.

ಸದ್ಯ 11ನೇ ಸೀಸನ್ ಆರಂಭವಾಗಿದೆ. ಈ ಬಾರಿ ಶೋ ನಿರೂಪಣೆಗೆ ಕಿಚ್ಚ ಬರೋಬ್ಬರಿ 8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೆ. ಪ್ರತಿಬಾರಿ ಹೊಸ ಸೀಸನ್ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಡಲಾಗುತ್ತಿದೆ. ಈ ಹಿಂದೆ ಸುದ್ದಿಗೋಷ್ಠಿಗಳಲ್ಲಿ ಸುದೀಪ್ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆದರೆ ಅದಕ್ಕೆ ಸುದೀಪ್ ಜಾಣ ಉತ್ತರವನ್ನೇ ನೀಡಿದ್ದರು.

ಕನ್ನಡ ಬಳಿಕ ತೆಲುಗು, ತಮಿಳು, ಮಲಯಾಳಂ ಹಾಗೂ ಮರಾಠಿ ಭಾಷೆಗಳಲ್ಲಿ ಕೂಡ ಬಿಗ್‌ಬಾಸ್ ಶೋ ಆರಂಭವಾಗಿತ್ತು. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಹಾಗೂ ನಾಗಾರ್ಜುನ ಶೋ ನಡೆಸಿಕೊಟ್ಟಿದ್ದರು. ತಮಿಳಿನಲ್ಲಿ ಕಮಲ್ ಹಾಸನ್ ಯಶಸ್ವಿಯಾಗಿ ಶೋ ನಿರೂಪಣೆ ಮಾಡಿದ್ದರು. ಈ ಬಾರಿ ವಿಜಯ್ ಸೇತುಪತಿ ಶೋ ಜವಾಬ್ದಾರಿ ಹೊತ್ತಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಶೋ ನಿರೂಪಕರಾಗಿ ಗೆದ್ದಿದ್ದಾರೆ.

ಹಿಂದಿ ಬಿಗ್‌ಬಾಸ್‌ಗೆ ನಟ ಸಲ್ಮಾನ್ ಖಾನ್ ಹೆಚ್ಚಯ ಸಂಭಾವನೆ ಪಡೆಯುತ್ತಾರೆ. ಇನ್ನುಳಿದಂತೆ ಆಯಾ ಭಾಷೆಗಳಲ್ಲಿ ಶೋಗೆ ಇರುವ ಕ್ರೇಜ್, ಆದಾಯ ಆಧರಿಸಿ ನಿರೂಪಕರಿಗೆ ಸಂಭಾವನೆ ನೀಡಲಾಗುತ್ತಿದೆ. ಸಲ್ಲು, ನಾಗ್, ಕಮಲ್ ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ.

More from Filmibeat

English summary
Bigg Boss kannada 11: Find out how many Crores Sudeep is getting paid for each season;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X