»   » 'ಧೃವ'ತಾರೆಯ ಅಕಾಲಿಕ ಮರಣ ನಂಬಲಸಾಧ್ಯ ಎಂದ ಕಿಚ್ಚ ಸುದೀಪ್

'ಧೃವ'ತಾರೆಯ ಅಕಾಲಿಕ ಮರಣ ನಂಬಲಸಾಧ್ಯ ಎಂದ ಕಿಚ್ಚ ಸುದೀಪ್

Posted By:
Subscribe to Filmibeat Kannada

ನಟ ಹಾಗೂ ಸಿ.ಸಿ.ಎಲ್ ಆಟಗಾರ ಧ್ರುವ್ ಶರ್ಮ ರವರ ಸಾವಿನ ಸುದ್ದಿ ಕೇಳಿ ದಿಗ್ಬ್ರಮೆಗೊಂಡ ಕಿಚ್ಚ ಸುದೀಪ್, ಟ್ವಿಟ್ಟರ್ ನಲ್ಲಿ ನೆಚ್ಚಿನ ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

''ಧ್ರುವ್ ಶರ್ಮ ಇನ್ನಿಲ್ಲ ಎನ್ನುವುದನ್ನು ನಂಬುವುದಕ್ಕೆ ಅಸಾಧ್ಯವಾಗಿದೆ. ಉಸಿರಾಡದೆ ಆತ ಮಲಗಿರುವುದನ್ನು ನೋಡಿದರೆ ಹೃದಯ ಛಿದ್ರವಾಗುತ್ತದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Kiccha Sudeep express condolence over Dhruv Sharma death

ಧ್ರುವ್ ಶರ್ಮ ಸಾವಿನ ಸುದ್ದಿ ಕೇಳಿ ನಟ ಜಗ್ಗೇಶ್ ಹೃದಯ ಛಿದ್ರ

ಅಂದ್ಹಾಗೆ, ಧ್ರುವ್ ಶರ್ಮ ರವರೊಂದಿಗೆ ಕಿಚ್ಚ ಸುದೀಪ್ ಉತ್ತಮ ಒಡನಾಟ ಹೊಂದಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್)ನಲ್ಲಿ ಸುದೀಪ್ ಸಾರಥ್ಯದ 'ಕರ್ನಾಟಕ ಬುಲ್ದೋಜರ್ಸ್' ತಂಡದಲ್ಲಿ ಧ್ರುವ್ ಶರ್ಮ ಆಲ್ ರೌಂಡರ್ ಆಗಿ ಅನೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

Sudeep Express His Condolences Over Dhruv Sharma's Demise, on Twitter

ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದ ಧ್ರುವ್ ಶರ್ಮ ಇನ್ನು ನೆನಪು ಮಾತ್ರ.

English summary
Kannada Actor Kiccha Sudeep has taken his twitter account to express his condolence over death of Dhruv Sharma (35).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada