»   » 'ಅನಾಥೆ' ಎಂದವಳ ಮೇಲೆ ಸುದೀಪ್ ಅಭಿಮಾನಿ 'ಆರ್ಯ'ನಿಂದ ಅತ್ಯಾಚಾರ.!

'ಅನಾಥೆ' ಎಂದವಳ ಮೇಲೆ ಸುದೀಪ್ ಅಭಿಮಾನಿ 'ಆರ್ಯ'ನಿಂದ ಅತ್ಯಾಚಾರ.!

Posted By:
Subscribe to Filmibeat Kannada

ಸ್ಟಾರ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಲೆಟರ್ ಬರೆದಿದ್ದಾರೆ, ಕವನ ಬರೆದಿದ್ದಾರೆ, ಹಾಡು ಬರೆದಿದ್ದಾರೆ, ಹಾಗೆ ಹೀಗೆ ಅಂತ ಅಭಿಮಾನದ ಕಥೆ ಹೇಳುತ್ತಿರುತ್ತೇವೆ. ಆದ್ರೆ, ತುಮಕೂರಿನಲ್ಲೊಬ್ಬ ಸುದೀಪ್ ಅಭಿಮಾನಿ ಯುವತಿಗೆ ಮೋಸ ಮಾಡಿದ್ದಾನೆ ಎಂಬ ಕಥೆಯನ್ನ ಈಗ ಹೇಳಬೇಕಾಗಿದೆ.

ಹೌದು, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ತುಮಕೂರಿನ ಕಿಚ್ಚ ಸುದೀಪ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ, ಯುವತಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ ಲೈಂಗಿಕವಾಗಿ ನನ್ನನ್ನ ಬಳಸಿಕೊಂಡಿದ್ದಾನೆ ಎಂಬ ಗಂಭೀರ ಆರೋಪವನ್ನ ಯುವತಿ ಮಾಡಿದ್ದಾರೆ.

ಈ ಸಂಬಂಧ ತುಮಕೂರಿನ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಒಂದು ಕಡೆ ನೊಂದು ಯುವತಿ ಆರೋಪ ಮಾಡ್ತಿದ್ರೆ, ಮತ್ತೊಂದೆಡೆ ಸುದೀಪ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಈ ಆರೋಪಗಳು ಸುಳ್ಳು ಎನ್ನುತ್ತಿದ್ದಾರೆ. ಈ ಪ್ರಕರಣ ಸಂಪೂರ್ಣ ಮಾಹಿತಿ ಮುಂದೆ ನೀಡಲಾಗಿದೆ ಓದಿ.....

ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷನಿಂದ ಮೋಸ!

ತುಮಕೂರು ಜಿಲ್ಲಾ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ ಪುನೀತ್ ಆರ್ಯ ಎಂಬ ಯುವಕನಿಂದ ನನಗೆ ಮೋಸ ಆಗಿದೆ, ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ನೊಂದು ಯುವತಿ ದೂರು ದಾಖಲು ಮಾಡಿದ್ದಾರೆ.

ಪ್ರೀತಿ ಹೆಸರಲ್ಲಿ ನಂಬಿಸಿ ಅತ್ಯಾಚಾರ

ರಾಮನಗರ ಜಿಲ್ಲೆಯ ಮಾಗಡಿ ಮೂಲದ ಹುಡುಗಿ ಮನೆಯಿಂದ ದೂರವಿದ್ದು, ಪಿ.ಜಿಯಲ್ಲಿ ನೆಲಸಿದ್ದರಂತೆ. ಅದೇ ಪಿ.ಜಿ ಪಕ್ಕದಲ್ಲಿ ಪುನೀತ್ ಆರ್ಯ ವಾಸವಾಗಿದ್ದನಂತೆ. ಹುಡುಗಿಯನ್ನ ನೋಡಿದ್ದ ಪುನೀತ್ 'ನಾನು ನಿನ್ನನ್ನ ಪ್ರೀತಿಸುತ್ತಿದ್ದೇನೆ' ಎಂದು ಹಿಂದೆ ಬಿದ್ದಿದ್ದನಂತೆ. ಪ್ರೀತಿಯನ್ನ ನಿರಾಕರಿಸಿದ್ದ ಯುವತಿಯನ್ನ ಮೋಸ ಮಾಡಿ ಮನೆಗೆ ಕರೆಯಿಸಿಕೊಂಡು ಬಲತ್ಕಾರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಸಿನಿಮಾದಲ್ಲಿ ಅವಕಾಶ ಕೊಡಿಸುವ ಆಮಿಷ!

ಈ ಘಟನೆ ಬಳಿಕ, ಪುನೀತ್ ಆರ್ಯ ಅವರ ಪ್ರೀತಿಯನ್ನ ಒಪ್ಪಿಕೊಂಡ ಯುವತಿಗೆ, ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿದ್ದನಂತೆ. ಹೇಳಿ, ಕೇಳಿ ಸುದೀಪ್ ಅಭಿಮಾನಿ ಬೇರೆ, ಸಿನಿಮಾದವರ ಜೊತೆ ಸಂಪರ್ಕವಿರಬಹುದು ಎಂದು ಯುವತಿ ನಂಬಿದ್ದಳಂತೆ.

ನ್ಯಾಯ ಕೊಡಿಸಿ ಎನ್ನುತ್ತಿರುವ ಯುವತಿ

ಈಗ ನೀನು ಯಾರು ಗೊತ್ತಿಲ್ಲವೆನ್ನುತ್ತಿದ್ದಾನೆ. ನನಗೆ ಆಶ್ರಯ ಕೊಡಿಸಿ ಎಂದು ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಗ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಆರೋಪ ತಳ್ಳಿಹಾಕಿದ ಪುನೀತ್ ಆರ್ಯ

ಇನ್ನು ಈ ಯುವತಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅಭಿಮಾನಿ ಪುನೀತ್ ಆರ್ಯ, ಈ ಹುಡುಗಿ ನಡವಳಿಕೆ ಸರಿಯಿಲ್ಲ, ದುಡ್ಡಿಗಾಗಿ ಹೀಗೆ ಮಾಡುತ್ತಿದ್ದಾಳೆ, ನಾನು ನಟನು ಅಲ್ಲಾ, ನಾನು ಯಾವ ಸಿನಿಮಾದಲ್ಲೂ ಚಾನ್ಸ್ ಕೊಡಿಸುತ್ತೇನೆ ಎಂದು ಹೇಳಿಲ್ಲ, ಅವರದೊಂದು ದೊಡ್ಡ ಗ್ಯಾಂಗ್ ಇದೆ, ಹುಡುಗರಿಗೆ ಹೀಗೆ ಮೋಸ ಮಾಡುತ್ತಿರುತ್ತಾರೆ ಎಂದು ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ತನಿಖೆಯಿಂದ ಗೊತ್ತಾಗಬೇಕಿದೆ

ನಾನು ನಟ ಅಲ್ಲಾ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪುನೀತ್ ಆರ್ಯ, ತಮ್ಮ ಫೇಸ್ ಪುಕ್ ನಲ್ಲಿ ನಾನೊಬ್ಬ ನಟ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳನ್ನ ಮಾಡುತ್ತಿರುವ ಫೋಟೋಗಳನ್ನ ಪೋಸ್ಟ್ ಮಾಡಿಕೊಂಡಿದ್ದಾರೆ. ಒಟ್ನಲ್ಲಿ, ಯುವತಿಗೆ ಮೋಸ ಆಗಿದ್ಯಾ ಅಥವಾ ಸುದೀಪ್ ಅಭಿಮಾನಿ ವಿರುದ್ಧ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಬೇಕಿದೆ.

English summary
Puneeth Arya - Kiccha Sudeep Fans Association President of Tumakuru Unit in trouble. Puneeth Allegedly Sexually Harassment his girl friend. A complaint lodged against Puneeth in Tumakuru Police station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada