ಮಾನಸಿಕ ಅಸ್ವಸ್ಥನಿಗೆ ಹೊಸ ಬದುಕು ನೀಡಿದ ಕಿಚ್ಚನ ಅಭಿಮಾನಿ
Recommended Video

ಕಿಚ್ಚ ಸುದೀಪ್ ಅಭಿಮಾನಿಗಳು ಎಂದರೆ ಕೇವಲ ಹುಟ್ಟುಹಬ್ಬ, ಸಿನಿಮಾ ಬಿಡುಗಡೆ ಸಮಯದಲ್ಲಿ ಸಂಭ್ರಮ ಆಚರಣೆ ಮಾಡುವುದಕ್ಕೆ ಮಾತ್ರವಲ್ಲ ಸಮಾಜಮುಖಿ ಕೆಲಸಗಳಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ ಎನ್ನುವ ವಿಚಾರವನ್ನು ಸಾಕಷ್ಟು ದಿನಗಳ ಹಿಂದಿನಿಂದಲೇ ನಿರೂಪಿಸಿದ್ದರು.
ಅನಾಥಾಶ್ರಮ, ಶಿಶು ವಿಹಾರ, ಸರ್ಕಾರಿ ಶಾಲೆ, ಆಸ್ಪತ್ರೆ ಹೀಗೆ ಸಾಕಷ್ಟು ಜಾಗಗಳಿಗೆ ಭೇಟಿ ಕೊಟ್ಟು ಕೈನಲ್ಲಿ ಆಗುವ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ ಸುದೀಪ್ ಅಭಿಮಾನಿಗಳು. ಇವುಗಳ ಜೊತೆಗೆ ಮಾನಸಿಕ ಅಸ್ವಸ್ಥನಾಗಿ ರಸ್ತೆಗಳಲ್ಲಿ ಅಲೆದಾಡಿ ಭಿಕ್ಷೆ ಬೇಡುತ್ತಿದ್ದ ಯುವಕನೊಬ್ಬನಿಗೆ ಬದುಕು ಕಟ್ಟಿಕೊಡುವಲ್ಲಿ ಕಿಚ್ಚನ ಅಭಿಮಾನಿಗಳು ಯಶಸ್ವಿ ಆಗಿದ್ದಾರೆ.
ಸರ್ಕಾರಿ ಅಧಿಕಾರಿಗಳೇ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಇದ್ದರೂ ಕೂಡ ಅಭಿಮಾನಿಗಳು ಆತನ ಜೀವನಕ್ಕೆ ಆಸರೆ ಆಗಿದ್ದಾರೆ. ಯಾರು ಈ ಮಾನಸಿಕ ಅಸ್ವಸ್ಥ ? ಸುದೀಪ್ ಅಭಿಮಾನಿ ಈ ಹುಡುಗನ ಬದುಕನ್ನು ಸುಂದರವಾಗಿ ರೂಪಿಸಿದ್ದು ಹೇಗೆ? ಸದ್ಯ ಆ ಹುಡುಗ ಏನು ಮಾಡುತ್ತಿದ್ದಾನೆ? ಈ ಎಲ್ಲಾ ವಿಚಾರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ಕಿಚ್ಚ ಸುದೀಪ್ ಅಭಿಮಾನಿ ಸಂಘದಿಂದ ಸಹಾಯ
ಒಬ್ಬರಿಗೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡಿಯೂ ಹಾಗೆ ಹೋಗುವ ಈ ಕಾಲದಲ್ಲಿ ಕಿಚ್ಚನ ಅಭಿಮಾನಿಗಳು ಅನಾಮಿಕನೊಬ್ಬನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ರಸ್ತೆಯಲ್ಲಿದ್ದ ಆತನಿಗೊಂದು ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.

ಚೇತರಿಸಿಕೊಂಡು ಬೇಕರಿಯಲ್ಲಿ ಉದ್ಯೋಗ
ಚಿಕಿತ್ಸೆ ಪಡೆದುಕೊಂಡು ಗಣೇಶ್ ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ. ಕಿಚ್ಚ ಅಭಿಮಾನಿ ಸಂಘದ ಅಧ್ಯಕ್ಷ ಸುಧೀ ಅವರ ಭಾವ ಮಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ. ಅದೇ ಬೇಕರಿಯಲ್ಲಿ ಗಣೇಶ್ ಕೆಲಸ ಮಾಡುತ್ತಿದ್ದಾನೆ.

ಪೋಷಕರನ್ನು ಕಳೆದುಕೊಂಡ ನಂತರ ಅಸ್ವಸ್ಥ
ಗಣೇಶ್ ಬಾಲ್ಯದಲ್ಲೇ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಇದೇ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದಾನೆ. ತಂದೆ ತಾಯಿ ಇಲ್ಲದ ಕೊರಗು ಆತನನ್ನು ಹೆಚ್ಚಾಗಿ ಕಾಡಿದ್ದು ಕಳೆದ 10 ವರ್ಷಗಳಿಂದ ಈತ ಮಾನಸಿಕ ಅಸ್ವಸ್ಥನಾಗಿ ಉಳಿದುಕೊಂಡು ಬಿಟ್ಟಿದ್ದ.

ಅಭಿಮಾನಿಗ ಕೆಲಸಕ್ಕೆ ಅಭಿನಂದನೆ
ಸುದೀಪ್ ತಮ್ಮ ಅಭಿಮಾನಿಗಳು ಇಂತಹ ಕೆಲಸ ಮಾಡಿದಾಗ ಅವರನ್ನು ಅಭಿನಂದಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಸುಧೀ ಮಾಡಿರುವ ಕೆಲಸಕ್ಕೆ ಟ್ವಿಟ್ಟರ್ ಮೂಲಕ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











