'ಪೈಲ್ವಾನ್' ನಿರ್ದೇಶಕರಿಗೆ ಸವಾಲ್ ಹಾಕಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಸೌತ್ ಸಿನಿ ಇಂಡಸ್ಟ್ರಿಯ ಬಹುನಿರೀಕ್ಷಿತ ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸದಾ ಸಕ್ರೀಯರಾಗಿದ್ದಾರೆ.

ಟ್ವಿಟರ್ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಕಿಚ್ಚ ಆಗಾಗ ಸ್ನೇಹಿತರನ್ನು ಕಾಲೆಯುತ್ತಿರುತ್ತಾರೆ. ಇತ್ತೀಚಿಗಷ್ಟೆ ಕ್ಯಾಡ್ಬರಿ ಧರ್ಮ ಕೀರ್ತಿ ರಾಜ್ ಕಾಲೆಳೆದಿದ್ದ ಕಿಚ್ಚ ಇಂದು ನಿರ್ದೇಶಕ ಕೃಷ್ಣ ಅವರನ್ನು ಕಿಚಾಯಿಸಿದ್ದಾರೆ.

Kiccha Sudeep gave pailwan challenge to director krishna

ಸುದೀಪ್ ಈ ಹಿಂದೆ ಅಭಿಮಾನಿಗಳಿಗೆ 'ಪೈಲ್ವಾನ್' ಚಾಲೆಂಜ್ ಹಾಕ್ಕಿದ್ದರು. ಚಾಲೆಂಜ್ ಸ್ವೀಕರಿಸಿದ ಸಾಕಷ್ಟು ಮಂದಿ ಅಭಿಮಾನಿಗಳು ತಾವು ಹುರಿಗೊಳಿಸಿದ ದೇಹದ ಫೋಟೊ ತೆಗೆದು ಕಿಚ್ಚನಿಗೆ ಕಳುಹಿಸುವ ಮೂಲಕ ಪೈಲ್ವಾನ್ ಚಾಲೆಂಜ್ ಅನ್ನು ಯಶಸ್ವಿಯಾಗಿ ಮಾಡಿದ್ದರು. ಇದನ್ನು ನೋಡಿ ಖುಷಿಯಾದ ಅಭಿನಯ ಚಕ್ರವರ್ತಿ ನಿರ್ದೇಶಕ ಕೃಷ್ಣ ಅವರಿಗೆ ಸವಾಲ್ ಹಾಕಿದ್ದಾರೆ.

'ಪ್ರತಿಯೊಬ್ಬರು ಪೈಲ್ವಾನ್ ಚಾಲೆಂಜ್ ಅನ್ನು ಪ್ರಾಮಾಣಿಕವಾಗಿ ಸ್ವೀಕರಿಸಿದ್ದೀರಿ. ಎಲ್ಲರ ರೀತಿ ನಿರ್ದೇಶಕ ಕೃಷ್ಣ ಸಹ ಶರ್ಟ್ ಹಾಕದೆ ತಮ್ಮ ಬಾಡಿ ತೋರಿಸಬೇಕು. ಕೂಡಲೇ ಈ ರೀತಿಯ ಫೋಟೋವನ್ನು ಹಾಕಬೇಕು' ಎಂದು 'ಪೈಲ್ವಾನ್' ನಿರ್ದೇಶಕರಿಗೆ ಚಾಲೆಂಜ್ ಹಾಕಿದ್ದಾರೆ.

ಕಿಚ್ಚನ ಚಾಲೆಂಜ್ ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಕೃಷ್ಣ ''ಸರ್ ದಯವಿಟ್ಟು ಕ್ಷಮೆ ಇರಲಿ' ಎಂದು ಕೈ ಮುಗಿದಿದ್ದಾರೆ. ಕಿಚ್ಚ ಹಾಕಿದ ಚಾಲೆಂಜ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Kannada actor Kiccha Sudeep has taken his twitter account to challenge director krishna to accepte pailwal challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X