ಮದುವೆ ಮನೆಯಲ್ಲಿ ಅಭಿಷೇಕ್ ಅಂಬರೀಶ್‌ಗೆ ಕಿಚ್ಚ ಸುದೀಪ್ ನೀಡಿದ ದುಬಾರಿ ಉಡುಗೊರೆ ಏನು?

ಬೆಂಗಳೂರಿನಲ್ಲಿ ಸಡಗರ ಸಂಭ್ರಮದಿಂದ ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಿತ್ರರಂಗ, ರಾಜಕೀಯರಂಗದ ಹಲವರು ಬಂದು ನೂತನ ದಂಪತಿಗೆ ಶುಭಾ ಹಾರೈಸಿದ್ದಾರೆ. ರಜನಿಕಾಂತ್, ಮೋಹನ್ ಬಾಬು, ಸುಹಾಸಿನಿ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ಗಣ್ಯರು ಈ ಅದ್ಧೂರಿ ಕಲ್ಯಾಣಕ್ಕೆ ಸಾಕ್ಷಿ ಆಗಿದ್ದಾರೆ.

ಬೆಳಗ್ಗೆ 9:30 ರಿಂದ 10:30 ವರೆಗಿನ ಕರ್ನಾಟಕ ಲಗ್ನದಲ್ಲಿ ಅಭಿ ಜೊತೆಗಾತಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದರು. ಅರಮನೆ ಮೈದಾನದ ಚಾಮರವಜ್ರದಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭಕ್ಕೆ 1000 ಜನ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಒಕ್ಕಲಿಗ ಸಾಂಪ್ರದಾಯದಂತೆ ಅಭಿಷೇಕ್ ಅಂಬರೀಶ್ ಕಲ್ಯಾಣೋತ್ಸವ ನಡೆದಿದ್ದು ವಿಶೇಷ. ಬರೀ ಚಿತ್ರರಂಗದ ಗಣ್ಯರು ಪಾತ್ರವಲ್ಲದೇ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕೂಡ ಮದುವೆ ಆಗಮಿಸಿ ನವಜೋಡಿಗೆ ಆರ್ಶೀವದಿಸಿದ್ದರು.

Kiccha Sudeep gifts a gold chain to Actor Abhishek Ambareesh on his wedding

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಅಭಿ- ಅವಿವಾ ಮದುವೆಗೆ ಆಗಮಿಸಿದ್ದರು. ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡರು. ಮದುವೆ ಮನೆಯಲ್ಲಿ ಅಭಿಮಾನಿಗಳ ಜೊತೆ ಫೋಟೊಗಳನ್ನಿ ಕ್ಲಿಕ್ಕಿಸಿದರು. ಈ ವೇಳೆ ಅಭಿಷೇಕ್‌ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

Kiccha Sudeep gifts a gold chain to Actor Abhishek Ambareesh on his wedding

ಅಭಿಗೆ ಚಿನ್ನದ ಸರ ನೀಡಿದ ಕಿಚ್ಚ

ಬಹಳ ಸಿಂಪಲ್ ಆಗಿ ಖುರ್ತಾ, ಪೈಜಾಮಾ ತೊಟ್ಟು ಬಂದಿದ್ದ ಕಿಚ್ಚ ಎಲ್ಲರ ಗಮನ ಸೆಳೆದರು. ಮದುವೆಗೆ ಉಡುಗೊರೆಯಾಗಿ ಅಭಿ ಕೊರಳಿಗೆ ಚಿನ್ನದ ಸರವನ್ನು ಸುದೀಪ್ ಹಾಕಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕುತ್ತಿಗೆ ಸರ ಹಾಕಿ ಪ್ರೀತಿಯಿಂದ ತಬ್ಬಿ ಅಭಿಗೆ ಸುದೀಪ್ ಶುಭ ಹಾರೈಸಿದ್ದಾರೆ. ತಾವೇ ಮೊಬೈಲ್ ತೆಗೆದುಕೊಂಡು ನವ ದಂಪತಿಯ ಜೊತೆ ಕೆಲವರ ಫೋಟೊ ಕ್ಲಿಕ್ಕಿಸಿದರು.

ಬುಧವಾರ ಆರತಕ್ಷತೆ

ಅರಮನೆ ಮೈದಾನದಲ್ಲೇ ಬುಧವಾರ ಅಭಿಷೇಕ್- ಅವಿವಾ ದಂಪತಿಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮದುವೆಗೆ ಆಗಮಿಸಲು ಸಾಧ್ಯವಾಗದವರು ಅಂದು ನವಜೋಡಿಗೆ ಹಾರೈಸಲಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಜನ ಭಾಗಿ ಆಗುವ ನಿರೀಕ್ಷೆಯಿದೆ. ಅಂದು ಕೂಡ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಆಗಮಿಸಲಿದ್ದಾರೆ. ತ್ರಿಪುರವಾಸಿನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಿಗಾಗಿ ಬಗೆ ಬಗೆಯ ಭಕ್ಷ್ಯ ಭೋಜನ ಸಿದ್ಧಪಡಿಸಲಾಗುತ್ತದೆ.

ಜೂನ್ 16ಕ್ಕೆ ಬೀಗರೂಟ

ಇನ್ನು ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟ ಕೂಡ ಆಯೋಜನೆ ಮಾಡಲಾಗುತ್ತಿದೆ. ಅಂದು ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಅಭಿಮಾನಿಗಳಿಗೆ ನಾನ್ ವೆಜ್ ಊಟ ಹಾಕಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಂದಾಜು ಒಂದು ಲಕ್ಷ ಮಂದಿಗೆ ಅಂಬಿ ಕುಟುಂಬ ಔತಣ ಕೂಟ ಏರ್ಪಾಟು ಮಾಡುತ್ತಿದೆ.

ರಾಕ್‌ಲೈವ್ ವೆಂಕಟೇಶ್ ಉಸ್ತುವಾರಿ

ಅಂಬಿ ಕುಟುಂಬಕ್ಕೆ ಆಪ್ತರಾದ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮದುವೆ, ಆರತಕ್ಷತೆ, ಬೀಗರೂಟ ಎಲ್ಲದರ ಬಗ್ಗೆ ಗಮನ ಹರಿಸಿದ್ದಾರೆ. ಅಂಬಿ ಆಸೆಯಂತೆ, ಕನಸಿನಂತೆ ಅಭಿಷೇಕ್ ಮದುವೆ ಕಾರ್ಯಕ್ರಮಗಳು ನಡೀತಿದೆ.

More from Filmibeat

English summary
Kiccha Sudeep gifts a gold chain to Actor Abhishek Ambareesh on his wedding. Abishek Ambareesh and Aviva Bidapa Tie the Knot. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X