For Quick Alerts
  ALLOW NOTIFICATIONS  
  For Daily Alerts

  ಅರುಣ್ ಗೌಡಗೆ ಕಿಚ್ಚ ಸುದೀಪ್ ಕೊಟ್ಟ ಹೊಸ ಹೆಸರು?

  By Bharath Kumar
  |
  ಸುದೀಪ್ ಅವರು ನಟ ಅರುಣ್ ಗೌಡ ಅವರಿಗೆ ಹೀಗೊಂದು ಬಿರುದು ಕೊಟ್ಟಿದ್ದು ಯಾಕೆ ? | Filmibeat Kannada

  ಆಗೊಂದು ಕಾಲವಿತ್ತು. ಹಲವು ಸಿನಿಮಾಗಳು ಮಾಡಿ, ಆ ಸಿನಿಮಾ ಯಶಸ್ವಿಯಾದ ನಂತರ ಆ ಹೀರೋಗೆ ಬಿರುದು ನೀಡುತ್ತಿದ್ದರು. ಈಗೊಂದು ಕಾಲ ಬಂದಿದೆ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಹೆಸರಿನ ಹಿಂದೆ ಬಿರುದು ಸೇರಿಸಿ ಇಟ್ಕೊಂಡು ಬರ್ತಾರೆ. ಈ ವಿಚಾರ ಬಿಡಿ.

  ಅಸಲಿ ವಿಷ್ಯ ಏನಪ್ಪಾ ಅಂದ್ರೆ, '3 ಗಂಟೆ 30 ದಿನ 30 ಸೆಂಕೆಂಡ್' ಚಿತ್ರದ ಮೂಲಕ ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಅರುಣ್ ಗೌಡಗೆ, ಕಿಚ್ಚ ಸುದೀಪ್ ಹೊಸ ಹೆಸರು ನೀಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ.

  ಹೌದು, ಅರುಣ್ ಗೌಡ ಅವರ 'ಇನ್-ಕಂಪ್ಲೀಟ್' ಕಥೆ ಕೇಳಿದ ಸುದೀಪ್ 'ಇನ್-ಕಂಪ್ಲೀಟ್ ಸ್ಟಾರ್' ಎಂದು ನಾಮಕರಣ ಮಾಡಿದ್ದಾರೆ. ಅಂದ್ಹಾಗೆ, ಸುದೀಪ್ ಈ ಹೆಸರಿಡಲು ಒಂದು ಕಾರಣವಿದೆ.

  'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ 'ಕಿಚ್ಚನ್ ಟೈಂ'ನಲ್ಲಿ ಭಾಗಿಯಾಗಿದ್ದ ನಟ ಅರುಣ್ ಗೌಡ ತಮ್ಮ 'ಇನ್-ಕಂಪ್ಲೀಟ್' ಕಥೆ ಹೇಳಿಕೊಂಡರು. ಅವರು ಈಗಲೂ ಡಿಗ್ರಿ ಕಂಪ್ಲೀಟ್ ಮಾಡಿಲ್ಲ. ಯಾವುದೇ ಕೆಲಸ ಹಿಡಿದರೂ ಅದನ್ನು ಮುಗಿಸುವಷ್ಟರಲ್ಲಿ ಇನ್ನೇನೋ ಆಗಿ ಅರ್ಧಕ್ಕೆ ನಿಂತು ಹೋಗುತ್ತಂತೆ. ಇದನ್ನೆಲ್ಲ ಕೇಳಿದ ಕಿಚ್ಚ ಅರುಣ್ ಗೌಡಗೆ 'ಇನ್-ಕಂಪ್ಲೀಟ್ ಸ್ಟಾರ್' ಎಂದು ಬಿಟ್ಟರು.

  ಈ ಹೆಸರನ್ನ ಸುದೀಪ್ ಅವರು, ಅರುಣ್ ಗೌಡ ಅವರ ಕಾಲೆಳೆಯಲು ಹೇಳಿದರೇ ಹೊರತು, ಬೇರೆ ಏನೂ ಇಲ್ಲ. ಸದ್ಯ, ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಅಭಿನಯದ ಗಂಟೆ 30 ದಿನ 30 ಸೆಂಕೆಂಡ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

  English summary
  Kannada actor Kiccha Sudeep has called 'In-Complete Star' to younger actor Arun Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X