»   » ಪುನೀತ್ ಕಟ್ಟಾ ಅಭಿಮಾನಿಗಳಿಗೆ 'ಕಿಚ್ಚು' ಹಚ್ಚಿಸುವ ಸುದ್ದಿ ಇದು!

ಪುನೀತ್ ಕಟ್ಟಾ ಅಭಿಮಾನಿಗಳಿಗೆ 'ಕಿಚ್ಚು' ಹಚ್ಚಿಸುವ ಸುದ್ದಿ ಇದು!

Posted By:
Subscribe to Filmibeat Kannada

ಒಂಚೂರು ಫ್ಲಾಶ್ ಬ್ಯಾಕ್ ಗೆ ಹೋಗ್ಬರೋಣ....

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಸಿನಿಮಾ ತೆರೆಗೆ ಅಪ್ಪಳಿಸಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಮುಖ್ಯ ಚಿತ್ರಮಂದಿರದಲ್ಲಿ (ಬೆಂಗಳೂರಿನ ಸಂತೋಷ್ ಥಿಯೇಟರ್) ಅಪ್ಪು ಅಭಿಮಾನಿ ವೃಂದ ತುಂಬಿ ತುಳುಕುತ್ತಿತ್ತು.


ಅಪ್ಪು ಅಭಿನಯ ಕಂಡು ಶಿಳ್ಳೆ ಹೊಡೆಯುತ್ತಿದ್ದ ಅಭಿಮಾನಿಗಳು ಇಂಟರ್ವಲ್ ನಲ್ಲಿ ಏಕ್ದಂ ರೊಚ್ಚಿಗೆದ್ದು ಬಿಟ್ಟರು. ಅದಕ್ಕೆ ಕಾರಣ 'ರನ್ನ' ಚಿತ್ರದ ಟೀಸರ್.


ಸಂತೋಷ್ ಚಿತ್ರಮಂದಿರದವರು ಇಂಟರ್ವಲ್ ನಲ್ಲಿ 'ರನ್ನ' ಟೀಸರ್ ಪ್ರದರ್ಶನ ಮಾಡಿದ್ದಕ್ಕೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಗಲಾಟೆ ಮಾಡಿದರು. ಥಿಯೇಟರ್ ನಲ್ಲಿ ರಾದ್ಧಾಂತ ಎಬ್ಬಿಸಿದರು. ['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]


ಸ್ಟಾರ್ ನಟರ ನಡುವೆ ಭಿನ್ನಾಭಿಪ್ರಾಯ ಇದೆ ಅಂತ ಯಾರೋ ಕಿಡಿಗೇಡಿಗಳು ಹಬ್ಬಿಸಿದ ಸುದ್ದಿಯಿಂದಾಗಿ ಅಭಿಮಾನಿಗಳೂ ಕಿತ್ತಾಡುವ ಪರಿಸ್ಥಿತಿ ಬಂತು.


ಈಗ ಕಾಲ ಬದಲಾಗಿದೆ. ಚಿತ್ರವೊಂದರಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಂದಾಗುವ ಸಮಯ ಬಂದಿದೆ. ಮುಂದೆ ಓದಿ....


ಒಂದೇ ಚಿತ್ರದಲ್ಲಿ ಪುನೀತ್ ಹಾಗೂ ಸುದೀಪ್!

ನೀವು ನಂಬಿದ್ರೂ..ಬಿಟ್ರೂ..ಈ ಸುದ್ದಿ ಸತ್ಯ. ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. [ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ]


ಯಾವುದು ಆ ಚಿತ್ರ?

ಪುನೀತ್ ರಾಜ್ ಕುಮಾರ್ ಹಾಗೂ ರಚಿತಾ ರಾಮ್ ಜೋಡಿಯಾಗಿ ಅಭಿನಯಿಸುತ್ತಿರುವ 'ಚಕ್ರವ್ಯೂಹ' ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಕೆಲಸ ಮಾಡಲಿದ್ದಾರೆ. ಗಾಂಧಿನಗರದಲ್ಲಿ ಸದ್ಯ ಹಬ್ಬಿರುವ ಖಾಸ್ ಖಬರ್ ಅಂದ್ರೆ ಇದೇ.


ಪುನೀತ್ ಜೊತೆ ಸುದೀಪ್ ಅಭಿನಯ?

ಪುನೀತ್ ರವರ 'ಚಕ್ರವ್ಯೂಹ' ಚಿತ್ರದಲ್ಲಿ ಸುದೀಪ್ ಕೆಲಸ ಮಾಡಲಿದ್ದಾರೆ ಅಂದಾಕ್ಷಣ ಸುದೀಪ್ ನಟಿಸುತ್ತಿದ್ದಾರೆ ಅಂತಲ್ಲ.


ಮತ್ತೇನು?

'ಚಕ್ರವ್ಯೂಹ' ಚಿತ್ರಕ್ಕೆ ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಲಿದ್ದಾರೆ. ಅಪ್ಪು 'ಚಕ್ರವ್ಯೂಹ' ಚಿತ್ರದ ಒಂದು ಭಾಗದಲ್ಲಿ ಸ್ಟೋರಿ ನರೇಷನ್ ಇರುವುದರಿಂದ ಅದಕ್ಕೆ ವಾಯ್ಸ್ ಓವರ್ ನೀಡುವಂತೆ ಚಿತ್ರತಂಡ ಸುದೀಪ್ ರವರನ್ನ ಸಂಪರ್ಕ ಮಾಡಿದೆ.


ಸುದೀಪ್ ಒಪ್ಪಿಕೊಂಡ್ರಾ?

'ಚಕ್ರವ್ಯೂಹ' ಚಿತ್ರತಂಡದ ಮೂಲಗಳು ಹೇಳಿರುವ ಪ್ರಕಾರ, 'ಚಕ್ರವ್ಯೂಹ' ಸ್ಟೋರಿ ನರೇಷನ್ ಗೆ ವಾಯ್ಸ್ ಓವರ್ ನೀಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.


ಇದು ಮೊದಲೇನಲ್ಲ!

ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಸೇರಿದಂತೆ ಅನೇಕ ಚಿತ್ರಗಳಿಗೆ ಈಗಾಗಲೇ ಸುದೀಪ್ ವಾಯ್ಸ್ ಓವರ್ ನೀಡಿದ್ದಾರೆ.


'ಚಕ್ರವ್ಯೂಹ'ದಲ್ಲಿ ಜೂ.ಎನ್.ಟಿ.ಆರ್ ಧ್ವನಿ

'ಚಕ್ರವ್ಯೂಹ' ಚಿತ್ರದ ಹಾಡೊಂದಕ್ಕೆ ಟಾಲಿವುಡ್ ನಟ ಜೂನಿಯರ್ ಎನ್.ಟಿ.ಆರ್ ಗಾನ ಸುಧೆ ಹರಿಸಿದ್ದಾರೆ. [ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]


ಕಾಜಲ್ ಅಗರ್ವಾಲ್ ಗಾಯನ!

'ಚಕ್ರವ್ಯೂಹ' ಚಿತ್ರದ ಸ್ಪೆಷಲ್ ಹಾಡೊಂದಕ್ಕೆ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಕೂಡ ದನಿಯಾಗಿದ್ದಾರೆ. [ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು]


ಈಗ ಸುದೀಪ್!

ಹಲವು ವಿಶೇಷತೆಗಳಿಂದ ಈಗಾಗಲೇ ಸಖತ್ ಸುದ್ದಿಯಲ್ಲಿರುವ 'ಚಕ್ರವ್ಯೂಹ' ಚಿತ್ರ ಈಗ ಸುದೀಪ್ ರಿಂದ ಮತ್ತಷ್ಟು ಹೈಪ್ ಪಡೆದುಕೊಂಡಿದೆ. [ದಾಖಲೆ ಬೆಲೆಗೆ 'ಚಕ್ರವ್ಯೂಹ' ವಿತರಣಾ ಹಕ್ಕು ಸೇಲ್!]


ಆಡಿಯೋ ರಿಲೀಸ್

ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಥಮನ್ ಸಂಗೀತ ಸಂಯೋಜಿಸಿರುವ 'ಚಕ್ರವ್ಯೂಹ' ಆಡಿಯೋ ಮಾರ್ಚ್ 12ನೇ ತಾರೀಖು ರಿಲೀಸ್ ಆಗಲಿದೆ.


ರಿಲೀಸ್ ಯಾವಾಗ?

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17 ರಂದು 'ಚಕ್ರವ್ಯೂಹ' ಟ್ರೈಲರ್ ರಿಲೀಸ್ ಆಗಲಿದ್ದು, ಮಾರ್ಚ್ 25ಕ್ಕೆ 'ಚಕ್ರವ್ಯೂಹ' ನಿಮ್ಮೆದುರಿಗೆ ಬರುವ ಸಾಧ್ಯತೆ ಇದೆ.


English summary
Breaking News for all Puneeth Rajkumar and Kiccha Sudeep fans. Kiccha Sudeep has agreed to give voice over for Kannada Actor Puneeth Rajkumar and Kannada Actress Rachita Ram starrer Kannada Movie 'Chakravyuha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada