'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ?
Recommended Video

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಸಿನಿಮಾದಲ್ಲಿ ಕಿಚ್ಚನ ಅಭಿನಯವಿರುತ್ತಂತೆ.
ಬಾಲಿವುಡ್ ಅಂಗಳದಲ್ಲಿ 'ದಬಾಂಗ್' ಸೀರಿಸ್ ಹಿಟ್ ಆಗಿದ್ದು ಈಗಾಗಲೇ 'ದಬಾಂಗ್ 3' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ಸನ್ಮಾನ್ ಖಾನ್ ಅಭಿನಯ ಮಾಡಲಿದ್ದು ಖುದ್ದು ಸಲ್ಮಾನ್ ಅವರೇ ಸುದೀಪ್ ಸಿನಿಮಾದಲ್ಲಿ ಅಭಿನಯ ಮಾಡಬೇಕು ಎನ್ನುವ ಸಲಹೆಯನ್ನು ಸಿನಿಮಾತಂಡಕ್ಕೆ ಕೊಟ್ಟಿದ್ದಾರಂತೆ.

ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿರುವ ಕಿಚ್ಚ 'ದಬಾಂಗ್ 3' ಸಿನಿಮಾದಲ್ಲಿ ಯಾವಾಗ ಅಭಿನಯ ಮಾಡುತ್ತಾರೆ ಎನ್ನುವುದು ಅಭಿಮಾನಿಗಳ ಯೋಚನೆ. ಈ ಹಿಂದೆ ಸಲ್ಲು ಅಭಿನಯದ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ಅಭಿನಯ ಮಾಡುತ್ತಾರೆ ಎಂದು ಸುದ್ದಿ ಆಗಿತ್ತು. 'ದಬಾಂಗ್ 3' ಚಿತ್ರವನ್ನು ಪ್ರಭುದೇವಾ ನಿರ್ದೇಶನ ಮಾಡುತ್ತಿದ್ದು ಸೋಹಲ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಮೂಲಗಳ ಪ್ರಕಾರ ಸುದೀಪ್ ಚಿತ್ರದಲ್ಲಿ ಪಾಸಿಟಿವ್ ಆಗಿರುವ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರಂತೆ.


Click it and Unblock the Notifications











