Just In
- 22 min ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 2 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 2 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 11 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- News
ಬೆಳಗಾವಿ; ರೈಲಿಗೆ ತಲೆಕೊಟ್ಟ ಒಂದೇ ಕುಟುಂಬದ ನಾಲ್ವರು
- Finance
ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ
- Automobiles
3 ಡೋರುಗಳ, 5 ಡೋರುಗಳ ಫೇಸ್ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ
- Sports
ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ಈ ಚಿತ್ರಕ್ಕೆ ಬೇಕೇ ಬೇಕು ಎಂದು ಆ ನಿರ್ದೇಶಕ ಪಟ್ಟು ಹಿಡಿದಿದ್ದೇಕೆ?

ಕೆಲವು ನಿರ್ದೇಶಕರು ಸಿನಿಮಾ ಕಥೆ ಮಾಡಿ ಈ ಕಥಗೆ ಈ ನಾಯಕ ಸೂಕ್ತವಾಗಬಹುದು ಎಂದು ಆಯ್ಕೆ ಮಾಡುತ್ತಾರೆ. ಮತ್ತೆ ಕೆಲವರು ಈ ನಾಯಕನಿಗಾಗಿಯೇ ಕಥೆ ಮಾಡಿ ಸಿನಿಮಾ ಮಾಡ್ತಾರೆ. ಅದು ಹಲವರು ಬಾರಿ ಸಾಬೀತಾಗಿದೆ.
ಇದೀಗ, ತೆಲುಗಿನ ಖ್ಯಾತ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ದುಬಾರಿ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಕಿಚ್ಚ ಸುದೀಪ್ ಅವರು ಬೇಕೇ ಬೇಕು ಎಂದು ಪಟ್ಟು ಹಿಡಿದು ಒಪ್ಪಿಸಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಆರಂಭದಲ್ಲಿ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕಿದ್ದರು. ಆದ್ರೆ, ನಿರ್ದೇಶಕರ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದು ಕಿಚ್ಚ ಗ್ರೀನ್ ಸಿಗ್ನಲ್ ಕೊಡಬೇಕಾಯಿತು ಎನ್ನುವುದು ಗಾಂಧಿನಗರದ ಮಾತು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ......

ಮೆಗಾಸ್ಟಾರ್ ಚಿತ್ರವನ್ನ ಬೇಡವೆಂದಿದ್ದ ಸುದೀಪ್.!
ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಅಭಿನಯಿಸಲು ಸುದೀಪ್ ಅವರಿಗೆ ಅವಕಾಶ ಬಂದಿತ್ತು. ಆದ್ರೆ, ಅತಿ ಹೆಚ್ಚು ದಿನಗಳ ಕಾಲ ಕಾಲ್ ಶೀಟ್ ಕೊಡಬೇಕು ಎಂಬ ಕಾರಣದಿಂದ ಸುದೀಪ್ ಈ ಅವಕಾಶವನ್ನ ಬೇಡವೆಂದಿದ್ದರಂತೆ. ಹೀಗಾಗಿ, ಚಿರು ಚಿತ್ರವನ್ನ ಸುದೀಪ್ ರಿಜೆಕ್ಟ್ ಮಾಡಿದರು ಎಂಬ ಸುದ್ದಿಯಾಯಿತು.
ಯಾರ್ರೀ ಹೇಳಿದ್ದು ಸುದೀಪ್ ಗೆ 'ಮೆಗಾ' ಆಫರ್ ಕೈತಪ್ಪಿ ಹೋಯ್ತು ಅಂತ.?!

ನಿರ್ದೇಶಕರು ಪಟ್ಟು ಹಿಡಿದು ಕುಂತರು.!
ಸುದೀಪ್ ಅವರೇ ಈ ಚಿತ್ರವನ್ನ ಕೈಬಿಡಲು ನಿರ್ಧರಿಸಿ ಬಿಟ್ಟಿದ್ದರು. ಆದ್ರೆ, ಆ ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಅವರು ಕಿಚ್ಚನನ್ನ ಬಿಡಲಿಲ್ಲ. ''ಈ ಪಾತ್ರವನ್ನು ನೀವು ಮಾಡಲೇ ಬೇಕು. ನೀವು ನಮ್ಮ ಸಿನಿಮಾದಲ್ಲಿದ್ದರೇ ಚೆಂದ. ನೀವು ಬಿಟ್ಟರೇ ಈ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾದ್ಯವಿಲ್ಲ'' ಎಂದು ಸುರೇಂದ್ರ ರೆಡ್ಡಿ ಪಟ್ಟು ಹಿಡಿದರಂತೆ.
ಚಿರಂಜೀವಿ 151ನೇ ಚಿತ್ರದಲ್ಲಿ ಅಮಿತಾಬ್ ಪಾತ್ರದ ಗುಟ್ಟು ಈಗ ರಟ್ಟು.!

ಕಾಲ್ ಶೀಟ್ ನಲ್ಲಿ ಸಂಧಾನ
ಮೊದಲು ಹೇಳಿದಂತೆ ಈ ಚಿತ್ರದಲ್ಲಿ ಸುದೀಪ್ ಅವರು ಸುಮಾರು 100 ದಿನಕ್ಕಿಂತ ಹೆಚ್ಚು ಕಾಲ್ ಶೀಟ್ ನೀಡಬೇಕಾಗಿತ್ತಂತೆ. ಆದ್ರೆ, ಸುದೀಪ್ ಅವರು ಬಿಜಿ ಶೆಡ್ಯೂಲ್ ಬಗ್ಗೆ ಅರಿತು ಕೊಂಡ ನಿರ್ದೇಶಕರು 45 ರಿಂದ 50 ದಿನಕ್ಕೆ ಕಾಲ್ ಶೀಟ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ 'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಸುದೀಪ್ ಸಿದ್ದವಾಗಿದ್ದಾರಂತೆ.

ಎಲ್ಲ ಭಾಷೆಯ ನಟರು ಇದ್ದಾರೆ
ಅಂದ್ಹಾಗೆ, ಈ ಚಿತ್ರದಲ್ಲಿ ಎಲ್ಲ ಭಾಷೆಯ ಸ್ಟಾರ್ ನಟರು ಅಭಿನಯಿಸುತ್ತಿದ್ದಾರೆ. ಹಿಂದಿಯ ಮೆಗಾ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ತಮಿಳಿನ ವಿಜಯ್ ಸೇಥುಪತಿ, ಜಗಪತಿ ಬಾಬು, ನಯನತಾರ ಇವರ ಜೊತೆ ಸುದೀಪ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸುದೀಪ್ ಸಿನಿಮಾ ಪಟ್ಟಿ ನೋಡಿ
ಸದ್ಯ, ಸುದೀಪ್ 'ದಿ ವಿಲನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಶೋ ನಿರೂಪಣೆ ಮಾಡ್ತಿದ್ದಾರೆ. 'ದಿ ವಿಲನ್' ಚಿತ್ರದ ನಂತರ ಪೈಲ್ವಾನ್, 'ಕೋಟಿಗೊಬ್ಬ-3', ರೆಬೆಲ್ ಸ್ಟಾರ್ ಜೊತೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಗ್ಯಾಪ್ ನಲ್ಲಿ ಹಾಲಿವುಡ್ `ರೈಸನ್' ಸಿನಿಮಾ ಕೂಡ ಮಾಡುತ್ತಿದ್ದಾರೆ. ಇದೆಲ್ಲರ ಮಧ್ಯೆ 'ಸೈರಾ ನರಸಿಂಹ ರೆಡ್ಡಿ' ಸಿನಿಮಾಗೂ ಒಕೆ ಅಂದಿದ್ದಾರೆ.

'ಸೈರಾ' ಚಿತ್ರದ ಬಗ್ಗೆ
ಅಂದ್ಹಾಗೆ, ಸ್ವಾತಂತ್ರ್ಯ ಹೋರಾಟಗಾರ ನರಸಿಂಹರೆಡ್ಡಿ ಅವರ ಐತಿಹಾಸಿಕ ಕಥೆ ಇದಾಗಿದ್ದು, ಸುರೇಂದ್ರ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ರಾಮ್ ಚರಣ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಎ.ಆರ್.ರೆಹಮಾನ್ ಮ್ಯೂಸಿಕ್ ಒಳಗೊಂಡಿದೆ. ಇನ್ನು ತೆಲಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.