Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
" ಪಬ್ಲಿಕ್ ಫಿಗರ್ ಅಂದ್ಮೇಲೆ ಹಾರ, ಮೊಟ್ಟೆ ಎಲ್ಲಾ ಬೀಳುತ್ತೆ.. ಎಚ್ಚರಿಕೆ ಇರ್ಬೇಕು": ರಶ್ಮಿಕಾಗೆ ಕಿಚ್ಚನ ಬುದ್ಧಿಮಾತು
ರಶ್ಮಿಕಾ ಮಂದಣ್ಣ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡ್ಬೇಕು ಎಂದು ಕೆಲ ದಿನಗಳ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಇದೇ ವಿಚಾರವಾಗಿ ಇದೀಗ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ದೃಶ್ಯ ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಬೆಳೆದಂತೆ ಸ್ಟಾರ್ ನಟರು ಮಾತನಾಡುವುದು ಕಷ್ಟ ಆಗುತ್ತಿದೆಯಾ? ಏನೇ ಹೇಳಿದರೂ ಅದು ಬೇರೆ ಸ್ವರೂಪದ ಪಡೆದುಕೊಳುತ್ತಿದೆಯಾ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಕಿಚ್ಚ ಪಬ್ಲಿಕ್ ಫಿಗರ್ ಅಂದ್ಮೇಲೆ ಹಾರನೂ, ಬೀಳುತ್ತೆ ಮೊಟ್ಟೆನೂ ಬೀಳುತ್ತೆ. ಹೇಗೆ ನಿಭಾಯಿಸಬೇಕು ಎನ್ನುವುದು ಮುಖ್ಯ ಎಂದಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಹೇಳಿಕೆಗಳಿಂದ ಪದೇ ಪದೇ ಟ್ರೋಲ್ ಆಗುವುದು ಗೊತ್ತೇಯಿದೆ. 'ಕಾಂತಾರ' ಸಿನಿಮಾ ನೋಡಿದ್ದೀರಾ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಹೇಳಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರೇಮ್
ಮಾಡಿದ್ದ
ಈ
ಕೆಲಸದ
ಮೇಲೆ
ಶಿವಣ್ಣನಿಗೆ
ಈಗಲೂ
ಬೇಸರವಿದೆ!
ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಿಬೇಕು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಮಾಡಿದ್ದರು. ಆ ನಂತರ ರಶ್ಮಿಕಾ ತಮ್ ಹೇಳಿಕೆಗೆ ಸ್ಪಷ್ಟನೆಯನ್ನೂ ಕೂಡ ನೀಡಿದ್ದರು.

ಪ್ರಪಂಚ ಇರುವುದೇ ಹೀಗೆ
ಸೋಶಿಯಲ್ ಮೀಡಿಯಾ, ದೃಶ್ಯ ಮಾಧ್ಯಮಗಳ ಭರಾಟೆ ನಡೆಯುತ್ತಿದೆ. ಏನೇ ಸೆಲೆಬ್ರೆಟಿಗಳು ಏನೇ ಮಾತನಾಡಿದರೂ ಅದು ಮತ್ತೇನೋ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಸೆಲೆಬ್ರೆಟಿಗಳು ಮಾತನಾಡಲು ಭಯಪಡುವಂತೆ ಆಗಿದ್ಯಾ? ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. "ಪ್ರಪಂಚ ಇರುವುದೇ ಹೀಗೆ. ಅದನ್ನು ಬದಲಿಸೋಕೆ ಸಾಧ್ಯವಿಲ್ಲ. ನಮ್ಮ ಜನರೇಷನ್‌ನಲ್ಲಿ ಒಂದಷ್ಟು ದೃಶ್ಯ ಮಾಧ್ಯಮಗಳು ಇದ್ದವು. ನಮ್ಮ ಸಂದರ್ಶನ ಮಾಡುತ್ತಿದ್ದವು. ಅದಕ್ಕಿಂತ ಹಿಂದೆ ಹೋದರೆ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಸರ್ ಕಾಲದಲ್ಲಿ ಪೇಪರ್, ದೂರದರ್ಶನ್ ಚಾನಲ್ ಬಿಟ್ಟರೆ ಸರಿಯಾಗಿ ಟಿವಿ ಕೂಡ ಇರಲಿಲ್ಲ. ಅದೇ ಚೆನ್ನಾಗಿತ್ತು. ಈಗ ಚೆನ್ನಾಗಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ".

ಹಾರ, ಮೊಟ್ಟೆ ಎರಡೂ ಬೀಳುತ್ತೆ
"ನಮ್ಮ ಕಾಲದಲ್ಲಿ ದೃಶ್ಯ ಮಾಧ್ಯಮಗಳು ಇದ್ದವು. ಎಲ್ಲೆಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತದೆ. ಇಲ್ಲದಿದ್ದರೆ ಮತ್ತೆ ಇನ್ನು ಏನೇನು ಆಗುತ್ತಿತ್ತೋ. ಅದು ಕೂಡ ಕಷ್ಟ ಅಲ್ಲವೇ. ನಮ್ಮ ಜನರೇಶನ್ ಅಲ್ಲಿ ಏನಾಯಿತು ಅನ್ನೋವುದು ಸರಿ. ಈ ಜನರೇಶನ್‌ನಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ಸರಿ. ನಾನು ಹೇಳುವುದು ಏನಂದರೆ ನಾವು ಇದನ್ನು ಕಲಿಬೇಕು, ಹೇಗೆ ನಿಭಾಯಿಸಬೇಕು ಎಂದು ಗೊತ್ತಿರಬೇಕು. ಪಬ್ಲಿಕ್ ಫಿಗರ್ ಅಂದಮೇಲೆ ಹಾರ, ಮೊಟ್ಟೆ, ಟೊಮೆಟೋ, ಕಲ್ಲು ಎಲ್ಲಾ ಬೀಳುತ್ತೆ."

ಸರಿಯಾಗಿ ಮಾತನಾಡಲು ಕಲಿಯಬೇಕು
"ಇಂತಹ ಸನ್ನಿವೇಶಗಳನ್ನೆಲ್ಲಾ ನಿಭಾಯಿಸಲು ಕಲಿಯಬೇಕು, ಸ್ಟ್ರಾಂಗ್ ಆಗಬೇಕು. ಇದು ನಮಗೆ ಮತ್ತಷ್ಟು ಒಳ್ಳೆಯದನ್ನು ಮಾಡುತ್ತದೆ. ಹೀಗೆ ಆಗುತ್ತದೆ ಎಂದು ಗೊತ್ತಾದಾಗ ನಾವು ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇವೆ. ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎನ್ನುವುದು ಗೊತ್ತಾಗುತ್ತದೆ. ನೀವು ಆರಂಭದಿಂದ ಇದನ್ನು ಅಭ್ಯಾಸ ಮಾಡಿಕೊಂಡು ಬಂದರೆ ಸಮಸ್ಯೆಗೆ ಸಿಲುಕುವುದಿಲ್ಲ. ಇರೋದೇ ಹೀಗೆ. ಮೊಬೈಲ್ ಬೇಕು, ಮಾತ್ರೆಬೇಕು, ಸೋಶಿಯಲ್ ಮೀಡಿಯಾ ಬೇಕು. ಅದರಲ್ಲಿ ಅಕೌಂಟ್ ಕೂಡ ಬೇಕು. 2 ಮಿಲಿಯನ್, 10 ಮಿಲಿಯನ್ ಫಾಲೋಯಿಂಗ್ ಕೂಡ ಬೇಕು. ಆದರೆ ಈ ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ?

ಕಾಮೆಂಟ್ಸ್ ಓದಲು ಹೋಗಬೇಡಿ
"ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಹಾಕಿದರೆ ಸಾವಿರ ಕಾಮೆಂಟ್ ಬರ್ತಾವೆ ಎಂದರೆ ಅದರಲ್ಲಿ 700 ಪಾಸಿಟಿವ್, 300 ನೆಗೆಟಿವ್ ಬರುತ್ತೆ ಎಂದಿಟ್ಟುಕೊಳ್ಳಿ. ನೆಗೆಟಿವ್ ಯಾಕೆ ಬೇಕು, ಯಾಕಂದರೆ ಯಾರೊಬ್ಬರು ನೆಗೆಟಿವ್ ಮಾತನಾಡಬಾರದು ಎನ್ನುತ್ತೀರಾ. ಅದು ಹೇಗೆ ಸಾಧ್ಯ. ಪ್ರತಿಯೊಬ್ಬರಿಗೂ ಎರಡೆರಡು ಅಭಿಪ್ರಾಯ ಇರುತ್ತದೆ. ಇದು ಬೇಡ ಎಂದರೆ ಸೋಶಿಯಲ್ ಮೀಡಿಯಾದಿಂದ ದೂರ ಇದ್ದುಬಿಡಿ. ಅದು ಉತ್ತಮ. ಒಂದು ವೇಳೆ ಇದ್ದರೆ ಪೋಸ್ಟ್ ಮಾಡಿ ನನ್ನ ರೀತಿ ಸುಮ್ಮನಾಗಿ. ಕಾಮೆಂಟ್ಸ್ ಓದಲು ಹೋಗಬೇಡಿ" ಎಂದು ಇಂಡಿಯಾಗ್ಲಿಟ್ಜ್ ತೆಲುಗು ಯೂಟ್ಯೂಬ್ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ.