'ಆಪ್ತಮಿತ್ರ'ರಾದ ಕಿಚ್ಚ ಸುದೀಪ್-ಹುಚ್ಚ ವೆಂಕಟ್

By Bharath Kumar

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಿರಿಕ್ ಗಳಿಂದನೇ ಹೆಚ್ಚು ಖ್ಯಾತಿ. ಹುಚ್ಚ ವೆಂಕಟ್ ಎಲ್ಲಿ ಇರ್ತಾರೋ, ಅಲ್ಲಿ ವಿವಾದ, ಜಗಳ ಇದ್ದೇ ಇರುತ್ತೆ ಎಂಬುದು ವಾಡಿಕೆ.

ಆದ್ರೆ, ಹುಚ್ಚ ವೆಂಕಟ್ ಒಳಗೂ ಒಬ್ಬ ಸ್ನೇಹಜೀವಿ ಇದ್ದಾನೆ, ಅವರ ಭಾವನೆಗೆ ಪ್ರತಿಕ್ರಿಯಿಸುವ ಸ್ನೇಹಿತರೂ ಅವರ ಜೊತೆಯಲ್ಲಿದ್ದಾರೆ ಅಂದ್ರೆ ನಂಬಲೇಬೇಕು. ಅಷ್ಟಕ್ಕೂ, ಹುಚ್ಚ ವೆಂಕಟ್ ಭಾವನೆಗೆ ಓಲೈಸುವ ಸ್ನೇಹಜೀವಿ ಯಾರಪ್ಪ ಅಂತಾ ನಿಮ್ಗೆ ಕಾಡುತ್ತಿರಬಹುದು. ಅದು ಬೇರೆ ಯಾರು ಅಲ್ಲ. ಒನ್ ಅಂಡ್ ಒನ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. [ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.!]

ಇತ್ತೀಚೆಗೆ, ಪ್ರಥಮ್ ಮೇಲೆ ಆದ ಹಲ್ಲೆ ವಿಚಾರದಲ್ಲಿ ಸುದೀಪ್, ಹುಚ್ಚ ವೆಂಕಟ್ ಮೇಲೆ ಕೋಪ ಮಾಡಿಕೊಂಡಿದ್ದರು. ಆಮೇಲೆ ವೆಂಕಟ್, ಸುದೀಪ್ ಅವರಿಗೆ ಕ್ಷಮೆ ಕೇಳಿದ್ದರು. ಅದಾದ ನಂತರ ಎಲ್ಲವೂ ಕೂಲ್ ಆಗಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಹುಚ್ಚ ವೆಂಕಟ್ ಅವರ ಆಸೆಯನ್ನ ಸುದೀಪ್ ಈಡೇರಿಸುವಷ್ಟು ಬಾಂಧವ್ಯ ಬೆಸೆದಿದೆ. ಮುಂದೆ ಓದಿ....

ಹುಚ್ಚ ವೆಂಕಟ್ ಮೇಲೆ ಸುದೀಪ್ ಕೋಪ

ಹುಚ್ಚ ವೆಂಕಟ್ ಮೇಲೆ ಸುದೀಪ್ ಕೋಪ

''ಬಿಗ್ ಬಾಸ್' ಮನೆಯೊಳಗೆ ಹೋಗಿ, ಸ್ಪರ್ಧಿ ಪ್ರಥಮ್ ಮೇಲೆ ಹಲ್ಲೆ ನಡೆಸಿ ಬಂದಿರುವ ಹುಚ್ಚ ವೆಂಕಟ್ ರವರ ನಡವಳಿಕೆ ಅಕ್ಷಮ್ಯ. ಅವರಿಗೆ ಶಿಕ್ಷೆ ಆಗುವವರೆಗೂ ನಾನು 'ಬಿಗ್ ಬಾಸ್' ಶೋ ಹೋಸ್ಟ್ ಮಾಡಲ್ಲ'' ಅಂತ ಕಿಚ್ಚ ಸುದೀಪ್, ವೆಂಕಟ್ ಅವರ ಮೇಲೆ ಕೋಪ ಮಾಡಿಕೊಂಡಿದ್ದರು. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

ಕ್ಷಮೆ ಕೇಳಿದ ವೆಂಕಟ್

ಕ್ಷಮೆ ಕೇಳಿದ ವೆಂಕಟ್

ಸುದೀಪ್ ಅವರ ನಿರ್ಧಾರದಿಂದ ಬೇಸರವಾದ ಹುಚ್ಚ ವೆಂಕಟ್, ಮೊದಲು ಯ್ಯೂಟ್ಯೂಬ್ ನಲ್ಲಿ ಸುದೀಪ್ ಅವರಿಗೆ ಕ್ಷಮೆ ಕೇಳಿದರು. ಸಾಲದು ಅಂತ ಬಿಗ್ ಬಾಸ್ ವೇದಿಕೆಗೂ ಬಂದು ಬಹಿರಂಗವಾಗಿ ಸುದೀಪ್ ಹಾಗೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕ್ಷಮೆ ಕೇಳಿದರು. [ಹುಚ್ಚ ವೆಂಕಟ್ ಕ್ಷಮೆ ಕೇಳಿದರು, ಕಿಚ್ಚ ಸುದೀಪ್ ವಾಪಸ್ ಬಂದರು.!]

ವೆಂಕಟ್ ಹೇಳಿದ್ದೇನು?

ವೆಂಕಟ್ ಹೇಳಿದ್ದೇನು?

''ಸುದೀಪ್ ಅವರಿಗೆ ಹೇಳ್ತೀನಿ.. ದಯವಿಟ್ಟು ಕಾರ್ಯಕ್ರಮ ನಡೆಸಿಕೊಡಬೇಕು. ಇಷ್ಟು ವರ್ಷ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದೀರಾ. ಇನ್ಮುಂದೆ ಕೂಡ ನಡೆಸಿಕೊಡಿ. ದಯವಿಟ್ಟು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮವನ್ನ ನಡೆಸಿಕೊಡದೇ ಇರಬೇಡಿ. ಜನರ ಸಂತೋಷಕ್ಕೋಸ್ಕರ ನಡೆಸಿಕೊಡಿ. ನಾನು 'ಸಾರಿ' ಕೇಳಿದ್ದೀನಿ 'ಬಿಗ್ ಬಾಸ್' ಹಾಗೂ 'ಕಲರ್ಸ್ ಕನ್ನಡ'ದವರಿಗೆ. ಸುದೀಪ್ ಇರಬೇಕು ವೇದಿಕೆ ಮೇಲೆ... ನೀವೇ ನಡೆಸಿಕೊಡಬೇಕು..'' - ಹುಚ್ಚ ವೆಂಕಟ್ [ಎಲ್ಲಾ ಮುಗಿದ್ಮೇಲೆ ಹುಚ್ಚ ವೆಂಕಟ್ ದಿಢೀರ್ ಪ್ರೆಸ್ ಮೀಟ್ ಮಾಡಿದ್ಯಾಕೆ?]

ಸುದೀಪ್ ಹೇಳಿದ್ದೇನು?

ಸುದೀಪ್ ಹೇಳಿದ್ದೇನು?

''ವೆಂಕಟ್ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳುವುದಕ್ಕೂ ದೊಡ್ಡ ಮನಸ್ಸು ಬೇಕು. ಅವರೇ ಇಲ್ಲಿಗೆ ಬಂದು ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ನಿನ್ನೆ-ಮೊನ್ನೆ ಕೂಡ ಯ್ಯೂಟ್ಯೂಬ್ ನಲ್ಲೂ ವಿಡಿಯೋ ಮೂಲಕ ಕ್ಷಮೆ ಕೇಳಿದ್ದರು. ನಿಮ್ಮ ಮಾತಿಗೆ ಬೆಲೆ ಕೊಟ್ಟು 'ಬಿಗ್ ಬಾಸ್' ವೇದಿಕೆಗೆ ನಾನು ಬಂದಿದ್ದೇನೆ. ಇಟ್ ಮೀನ್ಸ್ ಎ ಲಾಟ್'' ಎಂದು ಬಿಗ್ ಬಾಸ್ ಕಾರ್ಯಕ್ರಮ ಆರಂಭದಲ್ಲಿ ಸುದೀಪ್, ವೆಂಕಟ್ ಅವರ ಬಗ್ಗೆ ಹೇಳಿದ್ದರು.

ಸುದೀಪ್ ಬಳಿ ಆಸೆ ಬಿಚ್ಚಿಟ್ಟ ವೆಂಕಟ್

ಸುದೀಪ್ ಬಳಿ ಆಸೆ ಬಿಚ್ಚಿಟ್ಟ ವೆಂಕಟ್

ಬಿಗ್ ಬಾಸ್ ಕಾರ್ಯಕ್ರಮವನ್ನ ಸುದೀಪ್ ಮತ್ತೆ ನಿರೂಪಣೆ ಮಾಡಿದ್ದಕ್ಕೆ, ವೆಂಕಟ್ ಖುಷಿಯಾದರು. ಈ ಮಧ್ಯೆ ಫಿಲ್ಮಿ ಬೀಟ್ ಕನ್ನಡದ ಜೊತೆ ಸಂದರ್ಶನದಲ್ಲಿ ಮಾತನಾಡುವಾಗ, ಸುದೀಪ್ ಅವರಿಗೆ ತಮ್ಮ ಆಸೆಯೊಂದನ್ನ ವ್ಯಕ್ತಪಡಿಸಿದರು.

ಏನದು ಹುಚ್ಚ ವೆಂಕಟ್ ಆಸೆ?

ಏನದು ಹುಚ್ಚ ವೆಂಕಟ್ ಆಸೆ?

ಥ್ಯಾಂಕ್ಸ್ ಸುದೀಪ್ ಅವರೇ, ನನ್ನ ಮಾತಿಗೆ ಬೆಲೆ ಕೊಟ್ಟು 'ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದೇನೆ ಅಂದ್ರಿ. ನಾನು ಅಷ್ಟೇ ನಿಮ್ಮ ಮಾತಿಗೆ ಬೆಲೆ ಕೊಡ್ತಿನಿ. ನೀವು ಅಡುಗೆ ಚೆನ್ನಾಗಿ ಮಾಡ್ತಿನಿ ಅಂತಾ ನೀವೇ ಹೇಳಿದ್ದೀರಾ? ನಾನು ಯಾವತ್ತಾದ್ರೂ ನಿಮ್ಮ ಮನೆಗೆ ಊಟಕ್ಕೆ ಬರ್ತಿನಿ, ಊಟ ಮಾಡೋಕೆ. ಹಾಗೆ ಯಾವತ್ತಾದರೂ ಒಂದು ದಿನ ನಮ್ಮ ಮನೆಗೂ ಊಟಕ್ಕೆ ನೀವು ಬರಬೇಕು'' ಎಂದು ಹೇಳಿಕೊಂಡಿದ್ದರು.

ವೆಂಕಟ್ ಆಸೆಗೆ ಕಿಚ್ಚನ ಕರೆಯೋಲೆ

ವೆಂಕಟ್ ಆಸೆಗೆ ಕಿಚ್ಚನ ಕರೆಯೋಲೆ

ವೆಂಕಟ್ ಅವರ ವಿಡಿಯೋ ನೋಡಿದ ಸುದೀಪ್, ಹುಚ್ಚ ವೆಂಕಟ್ ಆಸೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಟ್ವೀಟ್ ಮೂಲಕ ವೆಂಕಟ್ ಅವರನ್ನ ಮನೆಗೆ ಕರೆದಿದ್ದಾರೆ.

ವೆಂಕಟ್ ಗೆ ಸ್ವಾಗತ

ವೆಂಕಟ್ ಗೆ ಸ್ವಾಗತ

''ವೆಂಕಟ್ ಅವರೇ ನಿಮ್ಮ ಮನದಾಳದ ಮಾತಿಗೆ ಥ್ಯಾಂಕ್ಸ್. ಹಾಗೇ, ನೀವು ಯಾವಾಗ ಬೇಕಾದರೂ ನಮ್ಮ ಮನೆಗೆ ಬರಬಹುದು'' ಎಂದು ಹುಚ್ಚ ವೆಂಕಟ್ ಅವರ ಕೋರಿಕೆಗೆ ಕಿಚ್ಚ ಸ್ವಾಗತಿಸಿದ್ದಾರೆ.

ಕಿಚ್ಚ-ಹುಚ್ಚ ಈಗ ಆಪ್ತಮಿತ್ರರು

ಕಿಚ್ಚ-ಹುಚ್ಚ ಈಗ ಆಪ್ತಮಿತ್ರರು

ಈ ಮೂಲಕ ಕಿಚ್ಚ ಸುದೀಪ್ ಹಾಗೂ ಹುಚ್ಚ ವೆಂಕಟ್ ನಡುವಿನ ಮನಸ್ತಾಪ ಸಂಪೂರ್ಣವಾಗಿ ದಮನವಾಗಿದೆ. ಈಗ ಇವರಿಬ್ಬರು 'ಕುಚಿಕೂ ಕುಚಿಕೂ' ಸ್ನೇಹಿತರಾಗಿದ್ದಾರೆ ಅಂದ್ರೆ ನಂಬಲೇಬೇಕು.

More from Filmibeat

English summary
Kannada Actor Kiccha Sudeep has taken his twitter account to invite Huccha Venkat for his home to fulfill YouTube Star's desire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X