ಲೆಜೆಂಡ್ ಚಿರಂಜೀವಿ ಬಗ್ಗೆ ಸುದೀಪ್ ಮಾಡಿದ ಟ್ವೀಟ್ ಏನು.?

Recommended Video

ತೆಲುಗು ನಟ ಚಿರಂಜೀವಿ ಬಗ್ಗೆ ಮಾತನಾಡಿದ ಕನ್ನಡದ ನಟ ಸುದೀಪ್ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಪಕ್ಕದ ಟಾಲಿವುಡ್ ನಲ್ಲಿಯೂ ಬಹು ಬೇಡಿಕೆಯ ನಟ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ತೆಲುಗಿನ 'ರಕ್ತ ಚರಿತ್ರ', 'ಈಗ', 'ಬಾಹುಬಲಿ' ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್ ಇದೀಗ 'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟ ಸುದೀಪ್ 'ಅವುಕು ರಾಜಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸುತ್ತಿರುವ ಸುದೀಪ್ ಅವರ ಲುಕ್ ಈಗಾಗಲೇ ಬಹಿರಂಗವಾಗಿದೆ.

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬರುವ ಯುದ್ಧ ಸನ್ನಿವೇಶಗಳನ್ನ ಜಾರ್ಜಿಯಾದಲ್ಲಿ ಚಿತ್ರೀಕರಿಸಲಾಗಿದೆ. ಇದಕ್ಕಾಗಿಯೇ ಚಿತ್ರತಂಡ ಬರೋಬ್ಬರಿ 50 ಕೋಟಿ ಖರ್ಚು ಮಾಡಿದೆ. ಇಂತಹ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಜೊತೆಗೆ ತೆರೆಹಂಚಿಕೊಂಡಿರುವುದಕ್ಕೆ ಕಿಚ್ಚ ಸುದೀಪ್ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಟ್ವೀಟ್...

ಸುದೀಪ್ ಮಾಡಿರುವ ಟ್ವೀಟ್

''ಲೆಜೆಂಡ್ ಚಿರಂಜೀವಿ ಜೊತೆಗೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಇದೆ. ಸುರೇಂದರ್ ರೆಡ್ಡಿ ತಂಡ ಹಾಗೂ ರಾಮ್ ಚರಣ್ ತೇಜಾ ಈ ಪ್ರಾಜೆಕ್ಟ್ ನ ಪಿಲ್ಲರ್ ಗಳು'' ಎಂದು ನಟ ಚಿರಂಜೀವಿ ಜೊತೆಗೆ ಕ್ಲಿಕ್ ಮಾಡಿಕೊಂಡಿರುವ ಫೋಟೋವನ್ನ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಚಿರಂಜೀವಿ ಜೊತೆಗೆ ಸುದೀಪ್ ಮಗಳು

ಚಿರಂಜೀವಿ ಜೊತೆಗೆ ಸುದೀಪ್ ಮಗಳು

ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸುದೀಪ್ ಪುತ್ರಿ ಸಾನ್ವಿ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಚಿತ್ರೀಕರಣದ ಬಿಡುವಿನ ವೇಳೆ ಚಿರಂಜೀವಿ ಜೊತೆಗೆ ಸುದೀಪ್ ಕುಟುಂಬ ಕೊಂಚ ಕಾಲ ಹರಟಿದೆ.

ಚಿತ್ರದಲ್ಲಿ ಚಿರಂಜೀವಿ ಪಾತ್ರ ಏನು.?

ಚಿತ್ರದಲ್ಲಿ ಚಿರಂಜೀವಿ ಪಾತ್ರ ಏನು.?

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹತ್ತು ವರ್ಷಗಳ ಹಿಂದೆ ನಡೆದ ಸಮರದ ಕಥೆಯನ್ನ ಈ ಚಿತ್ರ ಹೊಂದಿದೆ.

ಚಿತ್ರದಲ್ಲಿ ದೊಡ್ಡ ತಾರಾಬಳಗ

ಚಿತ್ರದಲ್ಲಿ ದೊಡ್ಡ ತಾರಾಬಳಗ

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಚಿರಂಜೀವಿ, ಸುದೀಪ್ ಜೊತೆಗೆ ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಪೂನಂ ಕೌರ್ ನಟಿಸಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಬಣ್ಣ ಹಚ್ಚಲಿದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನದ ರಾಮ್ ಚರಣ್ ನಿರ್ಮಾಣದ ಈ ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿದೆ.

More from Filmibeat

English summary
Kannada Actor Kiccha Sudeep has taken his twitter account to express his working experience with Mega Star Chiranjeevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X