For Quick Alerts
  ALLOW NOTIFICATIONS  
  For Daily Alerts

  ದಬಾಂಗ್ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರ ಇದು

  |
  ಸಲ್ಮಾನ್ ಖಾನ್ ರ ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರ ಯಾವುದು ಗೊತ್ತಾ? | Oneindia Kannada

  ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಚಿತ್ರದ ಆಕ್ಷನ್ ಮತ್ತು ಹಾಡಿನ ದೃಶ್ಯ ಸೆರೆ ಹಿಡಿಯಲಾಗಿದೆ. ವಿಶೇಷ ಅಂದ್ರೆ ಸಲ್ಮಾನ್ ಖಾನ್ ಜೊತೆ ನಟ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  'ದಬಾಂಗ್-3' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಹಿರಂಗ ಆಗಿರಲಿಲ್ಲ. ಆದ್ರೀಗ ಕಿಚ್ಚ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ರಿವೀಲ್ ಆಗಿದೆ. ಹೌದು ಸುದೀಪ್ 'ದಬಾಂಗ್-3' ಚಿತ್ರದಲ್ಲಿ ಸಿಖಂದರ್ ಭಾರದ್ವಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ನಟ ಸಲ್ಮಾನ್ ಖಾನ್ ಮಿಂಚಿದ್ರೆ, ಸಿಖಂದರ್ ಭಾರದ್ವಜ್ ಪಾತ್ರದ ಮೂಲಕ ಖಳ ನಟನಾಗಿ ಕಿಚ್ಚ ಅಬ್ಬರಿಸಲಿದ್ದಾರೆ. ಮೊದಲ ಬಾರಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿ ಕೊಳ್ಳುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಸಂತಸ ತಂದಿದೆ.

  ಅಂದ್ಹಾಗೆ ಸಧ್ಯದಲ್ಲೇ ಸುದೀಪ್ 'ದಬಾಂಗ್-3' ತಂಡ ಸೇರಿಕೊಳ್ಳಲಿದ್ದಾರೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್ 'ದಬಾಂಗ್-3' ತಂಡ ಬ್ಯುಸಿಯಾಗಿದೆ. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ಸೆರೆ ಹಿಡಿಯುವುದರ ಜೊತೆಗೆ ಟೈಟಲ್ ಸಾಂಗ್ ಕೂಡ ಶೂಟಿಂಗ್ ಮಾಡಿ ಮುಗಿಸಿದೆ.

  'ದಬಾಂಗ್-3' ಪ್ರಭುದೇವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. 'ದಬಾಂಗ್' ಮೂರನೆ ಸರಣಿಯಲ್ಲೂ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದಾರೆ. ಇನ್ನು ದಬಾಂಗ್ ಎರಡೂ ಸರಣಿಯಲ್ಲಿ ಐಟಂ ಹಾಡು ಸಖತ್ ಸದ್ದು ಮಾಡಿತ್ತು. ಈಗ ಮೂರನೆ ಸರಣಿಯಲ್ಲಿ ಯಾರು ಹೆಜ್ಜೆ ಹಾಕಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಮುಂದಿನ ತಿಂಗಳಿಂದ ಕಿಚ್ಚ ಸುದೀಪ್ ಸಿಖಂದರ್ ಭಾರದ್ವಜ್ ಆಗಿ 'ದಬಾಂಗ್-3' ತಂಡ ಸೇರಿಕೊಳ್ಳಲಿದ್ದಾರೆ. ಸದ್ಯ ಅಭಿನಯ ಚಕ್ರವರ್ತಿ 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 'ಪೈಲ್ವಾನ್' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪರಭಾಷೆಯಲ್ಲಿ ವಿಲನ್ ಪಾತ್ರದ ಮೂಲಕವೇ ಅಬ್ಬರಿಸಿರುವ ಕಿಚ್ಚ ಸಿಖಂದರ್ ಭಾರದ್ವಜ್ ಆಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  English summary
  Kannada actor Kiccha Sudeep is playing 'Sikandar Bhardwaj' in 'dabangg-3' hindi movie. Sudeep first time act with bollywood actor Salman Khan in same movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X