»   » ಬೀದಿಪಾಲಾಗಿದ್ದ ಹಿರಿಯ ನಟನಿಗೆ ಕಿಚ್ಚ ಸುದೀಪ್ ನೆರವು

ಬೀದಿಪಾಲಾಗಿದ್ದ ಹಿರಿಯ ನಟನಿಗೆ ಕಿಚ್ಚ ಸುದೀಪ್ ನೆರವು

Posted By:
Subscribe to Filmibeat Kannada

ವಯಸ್ಸಾದ ತಂದೆ, ಸ್ವಾತಂತ್ರ್ಯ ಹೋರಾಟಗಾರ, ಬಡ ಮೇಷ್ಟ್ರು, ಅಸಹಾಯಕ ಅಜ್ಜ, ದೇವಸ್ಥಾನದ ಪೂಜಾರಿ, ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿ.. ಹೀಗೆ ಬಹುತೇಕ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಕಲಾವಿದ ಸದಾಶಿವ ಬ್ರಹ್ಮಾವರ್. ಇಂತಹ ಕಲಾವಿದನ ಬದುಕು ಇಂದು ಬೀದಿಪಾಲಾಗಿದೆ.

ಮನೆ, ಮಕ್ಕಳನ್ನ ಬಿಟ್ಟು ಸದಾಶಿವ ಬ್ರಹ್ಮಾವರ್ ಅವರು ಬೀದಿ ಬೀದಿಯಲ್ಲಿ ಅಲೆಯುತ್ತಿದ್ದಾರೆ. ಊಟಕ್ಕೆ ಹಣವಿಲ್ಲದೆ, ಮಲಗಲು ಜಾಗವಿಲ್ಲದೇ ರಸ್ತೆಪಾಲಾಗಿದ್ದಾರೆ. ಇದನ್ನ ಗಮಿನಿಸಿದ ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದ್ರೆ, ಇವರು ಈ ಸ್ಥಿತಿಗೆ ನಿಜವಾದ ಕಾರಣ ಮಾತ್ರ ಗೊತ್ತಿಲ್ಲ. ತಮ್ಮ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದರೂ ತಂದೆಯನ್ನ ಕಡೆಗಣಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಇದನ್ನ ಸದಾಶಿವ ಬ್ರಹ್ಮಾವರ್ ಅವರು ಒಪ್ಪುವುದಿಲ್ಲ.

ಇಂತಹ ಅದ್ಭುತ ಕಲಾವಿದನ ಈ ಸ್ಥಿತಿ ಕಂಡು ಕಿಚ್ಚ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ. ಬ್ಯಾಂಕಾಕ್ ನಲ್ಲಿ 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿರುವ ಕಿಚ್ಚ, ತಮ್ಮ ಅಭಿಮಾನಿ ಸಂಘಕ್ಕೆ ಈ ವಿಷ್ಯ ತಿಳಿಸಿ ಸಹಾಯ ಮಾಡುವಂತೆ ಸೂಚಿಸಿದ್ದಾರೆ. ಮುಂದೆ ಓದಿ.....

ಹಿರಿಯ ಜೀವಕ್ಕೆ ಆಸರೆಯಾದ ಕಿಚ್ಚ

ಸದಾಶಿವ ಬ್ರಹ್ಮಾವರ್ ಅವರನ್ನ ಹುಡುಕಿ, ಅವರಿಗೆ ಸಹಾಯ ಮಾಡುವಂತೆ ಸುದೀಪ್ ತಮ್ಮ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ಸುದೀಪ್ ಅಭಿನಯದ 'ಸ್ವಾತಿಮುತ್ತು', 'ಕಿಚ್ಚ' ಚಿತ್ರಗಳಲ್ಲಿ ಅಭಿನಯಿಸಿದ್ದರು.

600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ಕನ್ನಡ ಚಿತ್ರಗಳಲ್ಲಿಯೇ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ಅವರು ಬಣ್ಣ ಹಚ್ಚಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ನಾಲ್ಕು ಜನರೇಷನ್ ಸ್ಟಾರ್​ಗಳೊಂದಿಗೆ ಈ ಹಿರಿಯ ಕಲಾವಿದ ಅಭಿನಯಿಸಿದ್ದಾರೆ.

ನಿಜಕ್ಕೂ ಅಸಹಾಯಕರಾದರೇ ಹಿರಿಯ ಕಲಾವಿದ?

ಭಾನುವಾರ (ಆಗಸ್ಟ್ 14) ಕುಮುಟಾದ ಬೀದಿಗಳಲ್ಲಿ ಅಸಹಾಯಕರಾಗಿ ಅಲೆಯುತ್ತಿದ್ದ ಬ್ರಹ್ಮಾವರ್ ಅವರನ್ನ ಸ್ಥಳೀಯರೇ ಗುರುತಿಸಿ ಹೋಟೆಲ್​ಗೆ ಕರೆದುಕೊಂಡು ತಾವೇ ಊಟ ಹಾಕಿಸಿ, ಬಸ್ ಚಾರ್ಜಿಗೆ ಹಣ ಕೊಟ್ಟು, ಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುಂಚೆ ಕೂಡ ಈ ರೀತಿಯ ಘಟನೆ ನಡೆದಿದೆಯಂತೆ.

Kiccha Sudeep Appreciate To Sculptor | Filmibeat Kannada

ಇಂತಹ ಕಲಾವಿದರಿಗೆ ನೆರವು ಬೇಕು

ಇಂತಹ ಒಬ್ಬ ಕಲಾವಿದ ಹೀಗೆ ಬೀದಿಪಾಲಾಗುವುದು, ಅದು ಯಾರಿಗೂ ಗೊತ್ತಾಗದೆ ಹೋಗುವುದು ಬಣ್ಣದ ಬದುಕಿನ ಬಣ್ಣ ಮಾಸಿದ ಬದುಕಿಗೆ ಸಾಕ್ಷಿ. ಹೀಗಾಗಿ, ಇಂತಹ ಕಲಾವಿದರಿಗೆ ಚಿತ್ರರಂಗದಿಂದ ನೆರವು ನೀಡಬೇಕು. ಕೊನೆಗಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು.

English summary
Kiccha Sudeep is rushing to help Sadashiva Brahmavar. Sudeep who is shooting in Bangkok for The Villain has asked his fans association members to immediately search for Brahmavar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada