'ದಬಾಂಗ್ 3' ಚಿತ್ರೀಕರಣಕ್ಕೆ ಸುದೀಪ್ ಯಾವಾಗ ಹೋಗ್ತಾರೆ?

Recommended Video

ದಬಾಂಗ್ 3ನಲ್ಲಿ ಮೋಡಿ ಮಾಡ್ತಾರಾ ಕಿಚ್ಚ? | FILMIBEAT KANNADA

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಚಿತ್ರದ ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದೆ. 'ದಬಾಂಗ್' ಸರಣಿಯ ಮೂರನೇ ಆವೃತ್ತಿಯ ವಿಶೇಷ ಅಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ಸುದೀಪ್ ಒಂದೊಂದೆ ಪ್ರಾಜೆಕ್ಟ್ ಮುಗಿಸಿ ಈಗ 'ದಬಾಂಗ್ -3 'ಚಿತ್ರೀಕರಣದಲ್ಲಿ ಭಾಗಿಯಾಗಲು ಸಿದ್ದರಾಗಿದ್ದಾರೆ. ಕೃಷ್ಣ ನಿರ್ದೇಶನದ 'ಪೈಲ್ವಾನ್' ಮತ್ತು ತೆಲುಗಿನ ಬಹುನಿರೀಕ್ಷೆಯ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಚಿತ್ರೀಕರಣ ಮುಗಿಸಿರುವ ಸುದೀಪ್ ಸದ್ಯ ಕನ್ನಡದ 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾದ ಜೊತೆಗೆ 'ದಬಾಂಗ್-3 'ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ಅಂದ್ಹಾಗೆ, ಕಿಚ್ಚ ಮುಂದಿನ ತಿಂಗಳು ಅಂದರೆ ಮೇ ಮೊದಲ ವಾರದಲ್ಲಿ 'ದಬಾಂಗ್-3' ಟೀಂ ಸೇರಿಕೊಳ್ಳಲಿದ್ದಾರೆ. ಸದ್ಯ, 'ದಬಾಂಗ್-3' ಟೈಟಲ್ ಸಾಂಗ್ ಚಿತ್ರೀಕರಣ ನಡೆಯುತ್ತಿದೆ. ಸುಮಾರು 500 ಜೂನಿಯರ್ ಆರ್ಟಿಸ್ಟ್ ಗಳೊಂದಿಗೆ ಅದ್ದೂರಿಯಾಗಿ ಚಿತ್ರದ ಟೈಟಲ್ ಟ್ರ್ಯಾಕ್ ಸೆರೆಹಿಡಿಯಲಾಗುತ್ತಿದೆ.

kiccha sudeep joins to dabangg 3 team on may first week

'ದಬಾಂಗ್-3' ಪ್ರಭುದೇವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣ ಮಾಡುವುದರ ಜೊತೆಗೆ ಅಭಿನಯ ಕೂಡ ಮಾಡುತ್ತಿದ್ದಾರೆ. ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಿರೀಕ್ಷೆಯ ಸಿನಿಮಾ ಇದಾಗಿದ್ದು, ಕಿಚ್ಚನ ಪಾತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

More from Filmibeat

English summary
Kiccha Sudeep joins 'Dabangg 3' team on may first week. Sudeep playing important role in Salman Khan's 'Dabangg 3'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X