CCL 2026: ಮತ್ತೆ ಬಂತು ತಾರೆಯರ ಕ್ರಿಕೆಟ್ ಹಬ್ಬ; ಇಲ್ಲಿದೆ ಸಿಸಿಎಲ್ ಸೀಸನ್ 12ರ ವೇಳಾಪಟ್ಟಿ

ಭಾರತದಲ್ಲಿ ಸಿನಿಮಾ ಹಾಗೂ ಕ್ರಿಕೆಟ್‌ ನಡುವೆ ಬಿಡಿಸಲಾಗದ ನಂಟು. ಸಿನಿಮಾ ತಾರೆಯರು ಮೈದಾನಕ್ಕಿಳಿದು ಕ್ರಿಕೆಟ್ ಆಡುವುದು, ಕ್ರಿಕೆಟಿಗರು ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುವುದು ಹೊಸದೇನು ಅಲ್ಲ. 'ಸೆಲೆಬ್ರೆಟಿ ಕ್ರಿಕೆಟ್ ಲೀಗ್' ಕೂಡ ಗಮನ ಸೆಳೆಯುತ್ತಿದೆ. ಈಗಾಗಲೇ 11 ಸೀಸನ್ ಕಂಪ್ಲೀಟ್ ಆಗಿದೆ. 12ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ.

ಕನ್ನಡ ಚಿತ್ರರಂಗದ ತಾರೆಯರು ಸೇರಿ ಸಿಸಿಎಲ್ ಟೂರ್ನಿಯಲ್ಲಿ ಬೇರೆ ಬೇರೆ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಕ್ರಿಕೆಟ್ ಆಡುತ್ತಾನೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದಾರೆ. ಹಾಗಾಗಿ ಕ್ರೇಜ್ ಜಾಸ್ತಿನೇ ಇರುತ್ತೆ. ಇನ್ನು ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪ್ರಬಲ ತಂಡವಾಗಿ ಗುರ್ತಿಸಿಕೊಂಡಿದೆ. ಸಂಕ್ರಾಂತಿ ಸಂಭ್ರಮದಲ್ಲಿ 12ನೇ ಸೀಸನ್‌ ಶುರುವಾಗುತ್ತಿದೆ.

Kiccha Sudeep Leads Karnataka Bulldozers as CCL Season 12 Kicks Off with High Expectations

ಈಗಾಗಲೇ ಸಿಸಿಎಲ-12 ಟೂರ್ನಿಗಾಗಿ ಕಿಚ್ಚ ಸುದೀಪ್ ತಾಲೀಮು ಆರಂಭಿಸಿದ್ದಾರೆ. 'ಮಾರ್ಕ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ಚಿತ್ರೀಕರಣ ಬಿಟ್ಟು ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಈ ನಡುವೆ ಬಿಗ್‌ಬಾಸ್-12 ಫಿನಾಲೆ ಹತ್ತಿರವಾಗುತ್ತಿದೆ. ಕಾರ್ಯಕ್ರಮವನ್ನು ನಿರೂಪಣೆ ಮಾಡಬೇಕಿದೆ. 'ಮಾರ್ಕ್' ಬಳಿಕ ಹೊಸ ಸಿನಿಮಾ ಆರಂಭಿಸಿಲ್ಲ. ಸಿಸಿಎಲ್-12 ಮುಗಿಸಿ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚುವ ಸಾಧ್ಯತೆಯಿದೆ.

ಈ ಬಾರಿ ಕೂಡ 8 ತಂಡಗಳು ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ಕಿಂಗ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಭೋಜ್‌ಪುರಿ ಡಬ್ಬಂಗ್ಸ್, ಪಂಜಾಬ್ ಡಿ ಶೇರ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಕ್ರಿಕೆಟ್ ಆಡಿ ರಂಜಿಸಲಿದ್ದಾರೆ. ಕಳೆದ ವರ್ಷ ಪಂಜಾಬ್ ಡಿ ಶೇರ್ ತಂಡ ಟ್ರೋಫಿ ಎತ್ತಿ ಹಿಡಿದಿತ್ತು. ಆದರೂ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟವನ್ನು ಮರೆಯೋಕೆ ಸಾಧ್ಯವಿಲ್ಲ. ನಟ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿತ್ತು.

ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ವೈಜಾಗ್, ಹೈದರಾಬಾದ್ ಹಾಗೂ ಮಧುರೈ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದೆ. 3 ವೀಕೆಂಡ್‌ಗಳಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದೆ. ತಲಾ 10 ಓವರ್‌ಗಳ 4 ಇನ್ನಿಂಗ್‌ಗಳಾಗಿ ಪ್ರತಿ ಪಂದ್ಯ ನಡೆಯಲಿದೆ. ಜನವರಿ 16ರಂದು ಮೊದಲ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಪಂಜಾಬ್ ಡಿ ಶೇರ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯ ಆಡಲಿದೆ. ಮಧ್ಯಾಹ್ನ 2 ಗಂಟೆಗೆ ಮೊದಲ ಪಂದ್ಯ ಶುರುವಾಗಲಿದೆ.

ಅದೇ ದಿನ ಸಂಜೆ ನಡೆಯುವ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ತಂಡವನ್ನು ತೆಲುಗು ವಾರಿಯರ್ಸ್ ತಂಡ ಎದುರಿಸಲಿದೆ. ಮೊದಲ ವೀಕೆಂಡ್ 6 ಪಂದ್ಯಗಳು ವೈಜಾಗ್‌ನಲ್ಲಿ ನಡೆಯಲಿದೆ. 2ನೇ ವೀಕೆಂಡ್ ಅಂದರೆ ಜನವರಿ 23, 24, 25ರಂದು ಮಧುರೈಯಲ್ಲಿ 6 ಪಂದ್ಯಗಳನ್ನು ಆಡಲಿದ್ದಾರೆ. ಜನವರಿ 31ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಫೆಬ್ರವರಿ 1ರಂದು ಅಂತಿಮ ಹಣಾಹಣಿಗೆ ವೇದಿಕೆ ಸಿದ್ಧವಾಗಲಿದೆ. ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಹೈದರಾಬಾದ್ ಕ್ರೀಡಾಂಗಣ ಸಾಕ್ಷಿ ಆಗಲಿದೆ.

ಸುದೀಪ್ ನೇತೃತ್ವದ ಕನ್ನಡ ಚಿತ್ರರಂಗದ ತಂಡ 3 ಲೀಗ್ ಪಂದ್ಯಗಳನ್ನು ಆಡಲಿದೆ. ಸುದೀಪ್ ಜೊತೆಗೆ ಡಾರ್ಲಿಂಗ್ ಕೃಷ್ಣ, ರಾಜೀವ್, ಜೆಕೆ ಎದುರಾಳಿ ತಂಡಗಳಿಗೆ ಪೈಪೋಟಿ ಒಡ್ಡಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಚಂದನ್ ಬೌಲಿಂಗ್ ಬಲ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕಿದೆ.

2013 ಹಾಗೂ 2014ರಲ್ಲಿ ಅದ್ಭುತ ಪ್ರದರ್ಶನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿತ್ತು. ಬಳಿಕ ಅದು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಚೆನ್ನಾಗಿ ಆಡುವ ತಂಡ ಬಳಿಕ ಸೋತು ನಿರಾಸೆ ಮೂಡಿಸುತ್ತಿದೆ. ಆದರೆ ಈ ಬಾರಿ ಮತ್ತೆ ಗೆದ್ದು ಬೀಗುವ ಹಠಕ್ಕೆ ಬಿದ್ದಿದೆ.

More from Filmibeat

Read more about: ccl sudeep ccl 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X