ಗುರುಗಳ ಚಿತ್ರಕ್ಕೆ ಪವರ್ ತುಂಬಿದ ಕಿಚ್ಚ ಸುದೀಪ್

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಮೈಂಡ್ ನಿರ್ದೇಶಕ ಅಂತಾಲೇ​​ ಖ್ಯಾತಿ ಗಳಿಸಿಕೊಂಡಿರುವ ಕನ್ನಡದ ಹೆಸರಾಂತ ನಿರ್ದೇಶಕ ಸುನೀಲ್​ ಕುಮಾರ್ ದೇಸಾಯಿ, ಸದ್ಯ 'ಉದ್ಘರ್ಷ' ಸಿನಿಮಾ ಮೂಲಕ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಸುನೀಲ್ ಕುಮಾರ್ ದೇಸಾಯಿ ಯಾವುದೇ ಸಿನಿಮಾ ನಿರ್ದೇಶನ ಮಾಡೋಕೆ ಶುರು ಮಾಡಿದ್ರೂ, ಅಂತಹ ಸಮದಯದಲ್ಲಿ ಮತ್ತೊಂದು ದೊಡ್ಡ ಪ್ರಶ್ನೆ ಉದ್ಬವವಾಗುತ್ತೆ. ಕಿಚ್ಚ ಸುದೀಪ್ ಅವರ​ ಜೊತೆ ಯಾವಾಗ ಚಿತ್ರ ಮಾಡ್ತೀರಿ? ಎಂದು ಪ್ರಶ್ನಿಸುವ ಅಭಿಮಾನಿಗಳು ಹೆಚ್ಚಾಗ್ತಾರೆ. ಆದ್ರೆ, ಅದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ.

ಆದ್ರೀಗ, ಇವರಿಬ್ಬರು ಸೇರಿ ಸರ್ಪ್ರೈಸ್​ ನೀಡಿದ್ದಾರೆ. ಉದ್ಘರ್ಷ ಚಿತ್ರದ ಟ್ರೈಲರ್ ​ಗೆ ಅಭಿನಯ ಚಕ್ರವರ್ತಿ ಅವರಿಂದ ಹಿನ್ನಲೆ ಧ್ವನಿ ನೀಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರುವ ಈ ಚಿತ್ರದ ಟ್ರೈಲರ್​ ನೋಡಿ ಮೆಚ್ಚಿಕೊಂಡಿರುವ ಸುದೀಪ್, ಅತ್ಯಂತ ಖುಷಿಯಿಂದಲೇ ಕಂಠದಾನ ಮಾಡಿದ್ದಾರೆ.

kiccha sudeep lends his voice to udgharsha trailer

ಸೋಮವಾರ ಹೈದರಾಬಾದ್ ​ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ಮಾಪಕರಾದ ಆರ್. ದೇವರಾಜ್ ಸುದೀಪ್​ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹೈದರಾಬಾದ್ ​ನಲ್ಲಿಯೇ ಸುದೀಪ್ ಅವರಿಂದ ಟ್ರೈಲರ್​ಗೆ ಡಬ್ಬಿಂಗ್ ಮಾಡಿಸಿದ್ದಾರೆ.

ವಿಶೇಷ ಅಂದರೆ ನಾಲ್ಕೂ ಭಾಷೆಯಲ್ಲೂ ಸುದೀಪ್ ​​​ರದ್ದೇ ಧ್ವನಿ ಕೇಳಲಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ ಇದರ ಬೆನ್ನಲ್ಲೆ ಸುನೀಲ್​ ಕುಮಾರ್ ದೇಸಾಯಿ ಮತ್ತು ಸುದೀಪ್ ಜೋಡಿಯಲ್ಲಿ ಹೊಸ ಸಿನಿಮಾ ಬರುತ್ತಾ ಎಂಬ ಚರ್ಚೆಗೆ ಮತ್ತೆ ಹುಟ್ಟಿಕೊಂಡಿದೆ.

kiccha sudeep lends his voice to udgharsha trailer

ಮಿಸ್ಟರ್ ವರ್ಲ್ಡ್‍ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, 'ಕಬಾಲಿ' ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕಿಶೋರ್, ವಂಶಿಕೃಷ್ಣ, ಶ್ರವಣ್ ರಾಘವೇಂದ್ರ, ಶ್ರದ್ಧಾ ದಾಸ್, ಮತ್ತು ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಒಳಗೊಂಡಿದೆ.

kiccha sudeep lends his voice to udgharsha trailer

ಇನ್ನು ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ .R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

More from Filmibeat

English summary
Kannada actor kiccha sudeep lends his voice to sunil kumar desai directional udgharsha trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X