ಗಣೇಶ್ '99' ಸಿನಿಮಾಗು ಸುದೀಪ್ 'ಮೈ ಆಟೋಗ್ರಾಫ್'ಗೂ ಸಂಬಂಧ?

ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಚಿತ್ರ ಸಖತ್ ಸದ್ದು ಮಾಡುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಮೋಡಿ ಮಾಡಿರುವ '99' ಚಿತ್ರದ ಟ್ರೈಲರ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಇಂದು ಸಂಜೆ ಬಹು ನಿರೀಕ್ಷೆಯ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.

'99' ರೋಮ್ಯಾಂಟಿಕ್ ಸಿನಿಮಾವಾಗಿದ್ದು ಗಣೇಶ್ ಗೆ ನಾಯಕಿಯಾಗಿ 'ಜಾಕಿ' ಚಿತ್ರದ ಖ್ಯಾತಿಯ ಭಾವನ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ '99' ತಮಿಳಿನ ಸೂಪರ್ ಹಿಟ್ '96' ಸಿನಿಮಾದ ರೀಮೇಕ್. ವಿಜಯ್ ಸೇತುಪತಿ ಮತ್ತು ತ್ರಿಷಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಕಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

ಆದ್ರೀಗ ಗೋಲ್ಡನ್ ಸ್ಟಾರ್ ಅಭಿನಯದ ಕನ್ನಡದ '99' ಸಿನಿಮಾ ಕಿಚ್ಚ ಸುದೀಪ್ ಅಭಿನಯದ 'ಮೈ ಆಟೋಗ್ರಾಫ್'ಗೆ ಸಂಬಂಧ ಇದೆ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಮಾತನಾಡಿದ್ದಾರೆ. ಹಾಗಾದ್ರೆ 99 ಸಿನಿಮಾಗು ಮತ್ತು ಮೈ ಆಟೋಗ್ರಾಫ್ ಗೂ ಇರುವ ಸಂಬಂಧವೇನು? ಚಿತ್ರದ ಬಗ್ಗೆ ಸುದೀಪ್ ಹೇಳಿದ್ದೇನು? ಮುಂದೆ ಓದಿ..

99 ಟ್ರೈಲರ್ ನೋಡಿ ಮೆಚ್ಚಿಕೊಂಡ ಸುದೀಪ್

99 ಟ್ರೈಲರ್ ನೋಡಿ ಮೆಚ್ಚಿಕೊಂಡ ಸುದೀಪ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾದ ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಫಿದಾ ಆಗಿದ್ದಾರೆ. ರಿಲೀಸ್ ಗೂ ಮೊದಲೇ ಚಿತ್ರದ ಟ್ರೈಲರ್ ನೋಡಿ ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ. ಗಣೇಶ್ ಅಭಿನಯ, ಭಾವನ ಪಾತ್ರ ಹಾಗೂ ಇಡೀ ಚಿತ್ರತಂಡದ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ನಿರ್ದೇಶಕ ಪ್ರೀತಂ ಗುಬ್ಬಿ ಕೆಲಸಕ್ಕೆ ಕಿಚ್ಚ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. "ಫ್ರೇಮ್ ಇಟ್ಟ ಮಾತ್ರಕ್ಕೆ ನಿರ್ದೇಶಕ ಎನಿಸಿಕೊಳ್ಳುವುದಿಲ್ಲ, ಭಾವನಾತ್ಮಕವಾಗಿ ಚಿತ್ರವನ್ನು ಕಟ್ಟಿಕೊಡುವುದು ಮುಖ್ಯ, ಆ ಕೆಲಸವನ್ನು ಪ್ರೀತಂ ಮಾಡಿದ್ದಾರೆ" ಎಂದು ಕಿಚ್ಚ ಹೇಳಿದ್ದಾರೆ.

ಮೈ ಆಟೋಗ್ರಾಫ್ ನೆನಪಿಸಿದ 99 ಸಿನಿಮಾ

ಮೈ ಆಟೋಗ್ರಾಫ್ ನೆನಪಿಸಿದ 99 ಸಿನಿಮಾ

'99' ಚಿತ್ರದ ವಿಶೇಷ ಅಂದ್ರೆ ಈ ಸಿನಿಮಾ ಕನ್ನಡದ ಸೂಪರ್ ಹಿಟ್ 'ಮೈ ಆಟೋಗ್ರಾಫ್' ಸಿನಿಮಾವನ್ನು ನೆನಪಿಸುತ್ತಿದೆಯಂತೆ. '99' ಚಿತ್ರದ ಟ್ರೈಲರ್ ನೋಡಿದ ಕಿಚ್ಚ ಸುದೀಪ್ ತಾವೆ ನಿರ್ದೇಶಿಸಿ ಅಭಿನಯಿಸಿರುವ 'ಮೈ ಆಟೋಗ್ರಾಫ್' ನೆನಪನ್ನು ಹಂಚಿಕೊಂಡಿದ್ದಾರೆ. ಶಾಲಾ ದಿನಗಳ ಲವ್ ಸ್ಟೋರಿ, ಫ್ಲ್ಯಾಶ್ ಬ್ಯಾಕ್ ಕತೆ, ಫೀಲಿಂಗ್ಸ್ ಎಲ್ಲವು 'ಮೈ ಆಟೋಗ್ರಾಫ್' ಚಿತ್ರವನ್ನು ಹೋಲುತ್ತಿದೆಯಂತೆ. ಹಾಗಾಗಿಯೇ ಕಿಚ್ಚ ಈ ಸಿನಿಮಾದ ಟ್ರೈಲರ್ ನೋಡಿದ ತಕ್ಷಣ ಆಟೋಗ್ರಾಫ್ ಕಾಲಕ್ಕೆ ಹೊರಟು ಹೋಗಿದ್ರು.

ಪ್ರೀತಂ ಗುಬ್ಬಿ ನಿರ್ದೇಶನ

ಪ್ರೀತಂ ಗುಬ್ಬಿ ನಿರ್ದೇಶನ

'99' ನಿರ್ದೇಶಕ ಪ್ರೀತಂ ಗುಬ್ಬಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಜಾನಿ ಜಾನಿ ಯೆಸ್ ಪಾಪ ಚಿತ್ರದ ನಂತರ ಪ್ರೀತಂ ನಿರ್ದೇಶನದ ಸಿನಿಮಾ. ವಿಶೇಷ ಅಂದ್ರೆ ಗಣೇಶ್ ಮತ್ತು ಪ್ರೀತಂ ಕಾಂಬಿನೇಶನ್ ನ ಮೂರನೇ ಸಿನಿಮಾ ಇದಾಗಿದೆ. ಈಗಾಗಲೆ ಕಿಚ್ಚ ಸುದೀಪ್ ಕಡೆಯಿಂದ ಮೆಚ್ಚುಗೆಯ ಮಾತುಗಳು ಸಿಕ್ಕಾಗಿದೆ. ಇನ್ನು ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರಲಿದೆ ಕಾದು ನೋಡಬೇಕು.

ಅರ್ಜುನ್ ಜನ್ಯ ಸಂಗೀತಾ

ಅರ್ಜುನ್ ಜನ್ಯ ಸಂಗೀತಾ

ಸ್ಯಾಂಡಲ್ ವುಡ್ ನ ಯಶಸ್ವಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾರಥ್ಯದಲ್ಲಿ '99' ಚಿತ್ರದ ಹಾಡುಗಳು ಮೂಡಿಬಂದಿವೆ. ಚಿತ್ರದ ಮೂರು ಹಾಡುಗಳು ಸಹ ಮೆಲೋಡಿ ಟ್ರ್ಯಾಕ್ ಗಳಾಗಿವೆ. ಪ್ರತಿಯೊಂದು ಹಾಡುಗಳು ಗಾನಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕಿಚ್ಚ ಸುದೀಪ್ ಸಹ ಚಿತ್ರದ ಹಾಡುಗಳನ್ನು ಹಾಡಿ ಹೊಗಳಿ ಅರ್ಜುನ್ ಜನ್ಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kannada actor Kiccha Sudeep likes '99' Kannada movie trailer. Sudeep watched a 99 movie trailer and he recalled his 'My autograph' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X