ಪುಟ್ಟ ಕಂದನ ಆಸೆ ಪೂರೈಸಿದ ಮಾಣಿಕ್ಯ ಸುದೀಪ್
Recommended Video

ನಟ ಸುದೀಪ್ ತಮ್ಮ ಪ್ರತಿಭೆಯ ಮೂಲಕ ಎಲ್ಲರ ಮೆಚ್ಚಿನ ನಟನಾಗಿದ್ದಾರೆ. ಆದರೆ ಅದಕ್ಕು ಹೆಚ್ಚಾಗಿ ಸುದೀಪ್ ಅವರ ಕೆಲವು ಗುಣಗಳು ಅಭಿಮಾನಿಗಳ ಮನಸಿನಲ್ಲಿ ಸಾದಾ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ. ಅಂದಹಾಗೆ, ಸುದೀಪ್ ಈಗ ಎಲ್ಲರೂ ಮೆಚ್ಚುವಂತಹ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ.
ಅಭಿಷೇಕ್ ಎಂಬ ಪುಟ್ಟ ಹುಡುಗ ಸುದೀಪ್ ಅವರ ದೊಡ್ಡ ಅಭಿಮಾನಿ. ಸುದೀಪ್ ಸಿನಿಮಾಗಳು ಅಂದರೆ ಈ ಹುಡುಗನಿಗೆ ತುಂಬ ಇಷ್ಟ. ತೆರೆ ಮೇಲೆ ಸುದೀಪ್ ನೋಡುತ್ತಿದ್ದ ಈ ಕಂದನಿಗೆ ಒಮ್ಮೆ ನೇರವಾಗಿ ಸುದೀಪ್ ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಇತ್ತು. ಮತ್ತೊಂದು ನೋವಿನ ಸಂಗತಿ ಅಂದರೆ ಆ ಹುಡುಗ Duchenne Muscular Dystrophy ಎಂಬ ಕಾಯಿಲೆಯಿಂದ ಬಳಲುತ್ತಿದ್ದ.
ಈ ಪುಟ್ಟ ಅಭಿಮಾನಿಯ ಬಗ್ಗೆ ತಿಳಿದ ಸುದೀಪ್ ಆ ಕಂದನನ್ನು ನಿನ್ನೆ ಭೇಟಿ ಮಾಡಿದ್ದಾರೆ. ತಮ್ಮ ಆಪ್ತರನ್ನು ಕಳುಹಿಸಿ ಅಭಿಷೇಕ್ ಹಾಗೂ ಅವರ ಕುಟುಂಬದವರನ್ನು ತಮ್ಮ ಮನೆಗೆ ಕರೆಸಿಕೊಂಡು ಕೆಲ ಕಾಲ ಅವರ ಜೊತೆಗೆ ಕಳೆದಿದ್ದಾರೆ. ಪುಟ್ಟ ಅಭಿಮಾನಿಯನ್ನು ಎತ್ತಿಕೊಂಡು ಆತನ ಆಸೆಯನ್ನು ಈಡೇರಿಸಿದ್ದಾರೆ. ಸುದೀಪ್ ಭೇಟಿ ಮಾಡಿರುವುದು ಅಭಿಷೇಕ್ ಮುಖದಲ್ಲಿಯೂ ನಗು ಮೂಡಿಸಿದೆ.

ಸುದೀಪ್ ಅವರ ಈ ಒಳ್ಳೆಯ ಕೆಲಸವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕಿಚ್ಚನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಭೇಟಿಯಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











