»   » ಸಾವಿನ ಸನಿಹದಲ್ಲಿರುವ ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ಸುದೀಪ್

ಸಾವಿನ ಸನಿಹದಲ್ಲಿರುವ ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ಸುದೀಪ್

Posted By:
Subscribe to Filmibeat Kannada

ಸುದೀಪ್ ತೆರೆ ಮೇಲೆ ಮಾತ್ರ ಹೀರೋ ಅಲ್ಲ ತೆರೆ ಹಿಂದಿಯೂ ಅವರು ಹೀರೋ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಭಿಮಾನಿಯ ಕೊನೆಯ ಆಸೆಯನ್ನ ಕಿಚ್ಚ ಸುದೀಪ್ಈಡೇರಿಸಿದ್ದಾರೆ.

ವಿನುತಾ ಎಂಬ ಸುದೀಪ್ ಅವರ ಅಭಿಮಾನಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿದ್ದು, ವೈದ್ಯರು ಅವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿಸಿದ್ದರು. ಸಾವಿನ ಸನಿಹದಲ್ಲಿರುವ ವಿನುತಾ, ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಜೊತೆಗೆ ಒಮ್ಮೆ ತಮ್ಮ ಮೆಚ್ಚಿನ ನಟನನ್ನು ನೋಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು.

Kiccha Sudeep met his fan Vinutha

ವಿನುತಾ ಅವರ ಈ ವಿಷಯವನ್ನು ಕಿಚ್ಚ ಸುದೀಪ್ ಸೇನಾ ಸಮಿತಿಯೂ (KSSS) ನಟ ಸುದೀಪ್ ಅವರಿಗೆ ಹೇಳಿದರು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಅವರನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಯ ಜೊತೆ ಸಮಯ ಕಳೆದು ಅವರ ಜೊತೆ ಮಾತನಾಡಿದ್ದಾರೆ.

English summary
Vinutha, a cancer patient's last wish was to meet Sudeep has been fulfilled.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada