ಮೊದಲ ಸಿನಿಮಾಗೆ ಸುದೀಪ್ ಅಕ್ಕನ ಮಗನ ಭರ್ಜರಿ ತಯಾರಿ

Recommended Video

ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕಿಚ್ಚ ಸುದೀಪ್ ಅಕ್ಕನ ಮಗ | FILMIBEAT KANNADA

ಸ್ಯಾಂಡಲ್ ವುಡ್ ಗೆ ಅನೇಕ ಹೊಸ ಪ್ರತಿಭೆಗಳು ಎಂಟ್ರಿಗುತ್ತಾರೆ. ಸ್ಟಾರ್ ನಟರ ಮಕ್ಕಳು, ಅವರ ಸಂಬಂಧಿಕರು ಜೊತೆಗೆ ಚಿತ್ರಂಗದ ಗಂದಗಾಳಿ ಗೊತ್ತಿಲ್ಲದವರು ಸಹ ಬಣ್ಣದ ಲೋಕದ ಕನಸುಕಂಡು ದೊಡ್ಡ ಹೆಸರು ಮಾಡಬೇಕೆನ್ನುವ ಹುಮ್ಮಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಈಗಾಗಲೆ ಡಾ ರಾಜ್ ಕುಮಾರ್ ಕುಟುಂಬದಿಂದ ರಾಜ್ ಮೊಮಕ್ಕಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾಮಿಲಿಯಿಂದ ದರ್ಶನ್ ಸೋದರ ಸಂಬಂದಿ , ಉಪೇಂದ್ರ ಅಣ್ಣನ ಮಗ ಹಾಗೂ ರಾಜಕಾರಣಿ ಜಮೀರ್ ಅಹಮ್ಮದ್ ಪುತ್ರ ಸೇರಿದಂತೆ ಅನೇಕ ಯುವ ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಈಗ ಅದೇ ಸಾಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಕನ ಮಗ ಕೂಡ ಸೇರ್ಪಡೆಯಾಗಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಬಣ್ಣಹಚ್ಚುತ್ತಾರೆ ಎಂದು ಅನೇಕ ದಿನಗಳಿಂದ ಹೇಳಲಾಗುತ್ತಿತ್ತು. ಸಂಚಿತ್ ಈಗ ಮೊದಲ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

ಮುಂಬೈನಲ್ಲಿ ಸಂಚಿತ್ ಟ್ರೈನಿಂಗ್

ಮುಂಬೈನಲ್ಲಿ ಸಂಚಿತ್ ಟ್ರೈನಿಂಗ್

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಸದ್ಯ ಮೊದಲ ಚಿತ್ರದ ಭರ್ಜರಿ ತಯಾರಿಯಲ್ಲಿದ್ದಾರೆ. ಈಗಾಗಲೆ ಮುಂಬೈನಲ್ಲಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಚಿತ್ರಕ್ಕಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಸದ್ಯ ಫಿಟ್ ನೆಸ್ ಟ್ರೈನಿಂಗ್ ಮತ್ತು ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಸಂಚಿತ್ ಸಧ್ಯದಲ್ಲೇ ತಯಾರಿ ಮುಗಿಸಿ ಸ್ಯಾಂಡಲ್ ವುಡ್ ಗೆ ವಾಪಾಸ್ ಆಗಲಿದ್ದಾರೆ.

ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಂಚಿತ್

ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಂಚಿತ್

ಸಂಚಿತ್ ಗೆ ಸಿನಿಮಾರಂಗವೇನು ಹೊಸದೇನಲ್ಲ. ಸಂಚಿತ್ ಮಾವ ಕಿಚ್ಚ ಸುದೀಪ್ ದೊಡ್ಡ ನಟ ಜೊತೆಗೆ ನಿರ್ದೇಶಕ. ಮಾವನಿಂದ ನೋಡಿಕಲಿತಿದ್ದು ಸಾಕಷ್ಟು ಇರುತ್ತೆ. ಇದ್ರ ಜೊತೆಗೆ ಸಂಚಿತ್ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇದೆ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಸಂಚಿತ್ ಸಹ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಸಿನಿಮಾ ಮೇಕಿಂಗ್ ಮತ್ತು ಚಿತ್ರರಂಗದ ಬಗ್ಗೆ ಒಂದಿಷ್ಟು ಅನುಭವ ಇದ್ದೇ ಇರುತ್ತೆ.

ಮೊದಲ ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ ಸಂಚಿತ್

ಮೊದಲ ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ ಸಂಚಿತ್

ಸಂಚಿತ್ ಮೊದಲ ಚಿತ್ರಕ್ಕೆ ಅವರೆ ಕತೆ ಬರೆಯುತ್ತಿದ್ದಾರಂತೆ. ಈಗಾಗಲೆ ನಿರ್ದೇಶನದಲ್ಲಿ ಅನುಭವ ಇರುವ ಸಂಚಿತ್ ತನ್ನ ಮೊದಲ ಚಿತ್ರಕ್ಕೆ ಅವರೆ ಕತೆ ಬರೆಯುತ್ತಿದ್ದಾರೆ ಅಂದ್ರೆ ನಿರ್ದೇಶನ ಕೂಡ ಮಾಡುವ ಸಾದ್ಯತೆಯು ಇದೆ. ಸುದೀಪ್ ಅಕ್ಕನ ಮಗನ ಮೊದಲ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಜಯತೀರ್ಥ ಪ್ರಾಜೆಕ್ಟ್ ತಡವಾಗುವ ಸಾಧ್ಯತೆ ಇದೆಯಂತೆ.

ಜಯತೀರ್ಥ ಜೊತೆ ಮತ್ತೊಂದು ಸಿನಿಮಾ

ಜಯತೀರ್ಥ ಜೊತೆ ಮತ್ತೊಂದು ಸಿನಿಮಾ

ಸುದೀಪ್ ಅಣ್ಣನ ಮಗಗನ್ನು ನಿರ್ದೇಶಕ ಜಯತೀರ್ಥ ಲಾಂಚ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗಾಗಲೆ ಜಯತೀರ್ಥ ಜೊತೆ ಒಂದು ಸುತ್ತಿನ ಮಾತುಕತೆಕೂಡ ಆಗಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಸಂಚಿತ್ ಮೊದಲ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳುತ್ತಾರೆ ಎಂದು ಇನ್ನು ಫೈನಲ್ ಆಗಿಲ್ಲವಂತೆ. ಯಾಕೆಂದ್ರೆ ಜಯತೀರ್ಥ ಜೊತೆಗಿನ ಪ್ರಾಜೆಕ್ಟ್ ವಿಳಂಬವಾಗುವ ಸಾಧ್ಯತೆ ಇರುವ ಕಾರಣ ಚೊಚ್ಚಲ ಚಿತ್ರವನ್ನು ಸಂಚಿತ್ ಪ್ರಾರಂಭಿಸುತ್ತಾರಂತೆ.

ಜಮೀರ್ ಪುತ್ರನಿಗೆ ಜಯತೀರ್ಥ ನಿರ್ದೇಶನ

ಜಮೀರ್ ಪುತ್ರನಿಗೆ ಜಯತೀರ್ಥ ನಿರ್ದೇಶನ

ರಾಜಕಾರಣಿ ಜಮೀರ್ ಅಹಮ್ಮದ್ ಪುತ್ರ ಜೈದ್ ಖಾನ್ ಚೊಚ್ಚಲ ಸಿನಿಮಾಗೆ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದ್ದು ಚಿತ್ರಕ್ಕಾಗಿ ಜಯತೀರ್ಥ ಮತ್ತು ತಂಡ ಕಾಶಿ ಕಡೆ ಪಯಣ ಬೆಳೆಸಿದೆ. ಈ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ಸಂಚಿತ್ ಸಿನಿಮಾ ತಡವಾಗುವ ಸಾಧ್ಯತೆ ಇದ್ದರು ಇರಬಹುದು. ಬೆಲ್ ಬಾಟಂ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಜಯತೀರ್ಥ ಸ್ಯಾಂಡಲ್ ವುಡ್ ನ ಬ್ಯುಸಿಯಸ್ಟ್ ನಿರ್ದೇಶಕರಾಗಿದ್ದಾರೆ. 'ಬೆಲ್ ಬಾಟಂ' ಸಿನಿಮಾ ಸದ್ಯ ಸೆಂಚುರಿಯತ್ತ ಮುನ್ನುಗ್ಗುತ್ತಿದೆ.

More from Filmibeat

English summary
Kannada actor Kiccha Sudeep nephew Sanchith Sanjeev trains in Mumbai to prepare for his first film. He is training in Mixed Martial Arts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X