For Quick Alerts
  ALLOW NOTIFICATIONS  
  For Daily Alerts

  'ಸಿಸಿಎಲ್' ಟೂರ್ನಿಗೆ ಕಿಚ್ಚ ಸುದೀಪ್ ಭರ್ಜರಿ ತಯಾರಿ.!

  By Bharath Kumar
  |
  ಸಿಸಿಎಲ್' ಟೂರ್ನಿಗೆ ಕಿಚ್ಚ ಸುದೀಪ್ ಭರ್ಜರಿ ತಯಾರಿ | FIlmibeat Kannada

  ಸತತ ಸಿನಿಮಾಗಳಲ್ಲಿ ಬಿಜಿ ಇರುವ ಕಿಚ್ಚ ಸುದೀಪ್ ಈಗ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾರೆ. ಒಂದ್ಕಡೆ ಸಿನಿಮಾ ಶೂಟಿಂಗ್, ಮತ್ತೊಂದೆಡೆ ಬಿಗ್ ಬಾಸ್ ನಿರೂಪಣೆಯಲ್ಲಿ ತೊಡಗಿಕೊಂಡಿರುವ ಅಭಿನಯ ಚಕ್ರವರ್ತಿ ಈಗ ಕ್ರಿಕೆಟ್ ಆಡಲು ತಯಾರಾಗುತ್ತಿದ್ದಾರೆ.

  ಸದ್ಯದಲ್ಲೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಟೂರ್ನಮೆಂಟ್ ನಡೆಯಲಿದ್ದು, ಈ ಟೂರ್ನಿಯಲ್ಲಿ ಸುದೀಪ್ ನೇತೃತ್ವದ 'ಕರ್ನಾಟಕ ಬುಲ್ಡೋಜರ್ಸ್' ತಂಡ ಆಡಲಿದೆ. ಹೀಗಾಗಿ, ಸುದೀಪ್ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.

  ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

  ಪ್ರಾಕ್ಟೀಸ್ ವೇಳೆ ಕರ್ನಾಟಕ ರಣಜಿ ತಂಡದ ಆಟಗಾರ ವಿ.ಕರಿಯಪ್ಪ ಅವರು ಬೌಲಿಂಗ್ ಮಾಡಿ 'ಕರ್ನಾಟಕ ಬುಲ್ಡೋಜರ್ಸ್' ಆಟಗಾರರಿಗೆ ಸಹಕಾರಿಯಾಗಿದ್ದರು. ಇದಕ್ಕೆ ನಾಯಕ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

  ಕಿಚ್ಚ ಸುದೀಪ್, ನಟ ಪ್ರದೀಪ್, ರಾಹುಲ್, ಸೇರಿದಂತೆ ಇನ್ನು ಹಲವು ಯುವ ನಟರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಿಸಿಎಲ್ ಪಂದ್ಯಾವಳಿಗಳು ಯಾವಾಗ ಆರಂಭವಾಗುತ್ತಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಅದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಿದ್ದತೆಗಳು ನಡೆಯುತ್ತಿದೆ. ಈ ಟೂರ್ನಿಯಲ್ಲಿ ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೋಜ್ ಪುರಿ, ಮರಾಠಿ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಸುಮಾರು 8 ತಂಡಗಳು ಭಾಗಿಯಾಗಲಿವೆ ಎನ್ನಲಾಗಿದೆ.

  English summary
  Karnataka Bulldozers captain Kiccha Sudeep is Practicing for the CCL Tournament.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X