»   » 'ನಾನು ಅವನಲ್ಲ, ಅವಳು' ನೋಡಿ, ಆನಂದಿಸಿ : ಕಿಚ್ಚ

'ನಾನು ಅವನಲ್ಲ, ಅವಳು' ನೋಡಿ, ಆನಂದಿಸಿ : ಕಿಚ್ಚ

Posted By:
Subscribe to Filmibeat Kannada

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ವಿಭಿನ್ನ ಚಿತ್ರ 'ನಾನು ಅವನಲ್ಲ ಅವಳು' 62ನೇ ಸಾಲಿನ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿಕೊಂಡ ಖ್ಯಾತ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇನ್ನೇನು ಸದ್ಯದಲ್ಲೇ ನಿಮ್ಮೆದುರು ಬರಲಿದೆ.

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿಶೇಷ ಪ್ರದರ್ಶನದ ಮೂಲಕ 'ನಾನು ಅವನಲ್ಲ ಅವಳು' ಚಿತ್ರವನ್ನು ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಹಳ ಮೆಚ್ಚಿಕೊಂಡಿದ್ದರು. [ಈ ತಿಂಗಳಾಂತ್ಯಕ್ಕೆ 'ನಾನು ಅವನಲ್ಲ, ಅವಳು' ನಿಮ್ಮ ಮುಂದೆ]

Kiccha Sudeep praises Kannada Movie 'Naanu Avanalla Avalu'

ಇದೀಗ ನಮ್ಮ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಸರದಿ. ಅಂದಹಾಗೆ ಸಂಚಾರಿ ವಿಜಯ್ ಅಭಿನಯದ 'ನಾನು ಅವನಲ್ಲ ಅವಳು' ಚಿತ್ರದ ಸಣ್ಣ ಝಲಕ್ ವೀಕ್ಷಿಸಿದ ಕಿಚ್ಚ ಸುದೀಪ್ ಅವರು ಚಿತ್ರದ ಬಗ್ಗೆ ಅದ್ಭುತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಒಂದು ಸಿನಿಮಾ ಅಂತ ಬಂದಾಗ ನಾವೆಲ್ಲರೂ ಒಂದು ಸಿನಿಮಾ ಮಾಡ್ತೀವಿ. ಕೆಲವರು ಸಿನ್ಮಾ ಮಾಡ್ತಾರೆ ಅದರಲ್ಲಿ, ಹೇಳೋ ರೀತಿಯಲ್ಲಿ ಹಾಗೂ ಮಾಡೋ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. 'I have been a great follower good films through my career" ನಾನೊಬ್ಬ ಕಲಾವಿದನಾಗಿ ನಾನು ನನ್ನ ಜೀವನದಲ್ಲಿ ಎಷ್ಟು ಒಳ್ಳೊಳ್ಳೆ ಸಿನಿಮಾ ಮಾಡಿದ್ದೀನಿ ಅನ್ನೋದು ನನಗಷ್ಟು ನೆನಪಿಲ್ಲ, ಆದರೆ ಒಳ್ಳೊಳ್ಳೆ ಸಿನಿಮಾ ನೋಡಿದ್ದೀನಿ. ಅದರಲ್ಲಿ ಈ ಸಿನಿಮಾನೂ ಒಂದು ಆಗುತ್ತೆ ಅಂತ ನಾನು ಹೇಳೋಕೆ ಇಷ್ಟ ಪಡ್ತೀನಿ.[ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು']

ಇವರು ಈ ಸಿನಿಮಾ ಮಾಡಿರುವುದು ನೋಡಿದಾಗ ತಿಳಿಯುವುದೇನೆಂದರೆ ಖಂಡಿತವಾಗಲೂ ಇವರು ದುಡ್ಡಿಗಾಗಿ ಅಥವಾ ಒಂದು ಬ್ಯುಸಿನೆಸ್ ನ ತಲೆಯಲ್ಲಿ ನೆನೆದು ಮಾಡಲಿಲ್ಲ ಅನ್ನೋದು ತಿಳಿಯುತ್ತದೆ.

Naanu Avanalla Avalu - Kannada Movie

Kiccha Sudeep Comments about Naanu Avanalla Avalu Kannada Movie

Posted by Nagendra K Ujjani on Saturday, September 5, 2015

ನಾನು ಇನ್ನೂ ಈ ಸಿನಿಮಾವನ್ನು ನೋಡಿಲ್ಲ ಆದರೆ ಇವರು ತೋರಿಸಿದ ಒಂದು ಝಲಕ್ ನೋಡಿದ್ರೆ ಖುಷಿಯಾಗುತ್ತೆ. ಅದ್ಭುತವಾಗಿ ಮಾಡಿದ್ದಾರೆ. ನಿರ್ದೇಶಕರಾದ ಲಿಂಗದೇವ ಅವರಿಗೂ ಕಂಗ್ರಾಜ್ಯುಲೇಷನ್ ಹೇಳ್ತಾ ಆಲ್ ದ ಬೆಸ್ಟ್ ಹೇಳ್ತೀನಿ.[ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ, ಅವಳು' ಚಿತ್ರ ಕುರಿತು]

ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ, ನೀವು ಈ ಚಿತ್ರವನ್ನು ನೋಡಿ ಅನ್ನೋದಕ್ಕಿಂತ ಈ ಚಿತ್ರವನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇನೆ. ಈ ಸಿನಿಮಾ ರಿಲೀಸ್ ಆದ ಮೇಲೆ ಈ ಚಿತ್ರದ ಯಶಸ್ಸಿನ ಮೇಲೆ ಇವರ ವ್ಯಕ್ತಿತ್ವಗಳು, ಕಲೆಯ ಮೇಲೆ ಪರಿಣಾಮ ಬೀರುತ್ತೆ ಅನ್ನೋದನ್ನ ನಾನು ನಂಬಲ್ಲ, ನನಗೆ ಅನಿಸೋ ಮಟ್ಟಿಗೆ ಇವರು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಂಪೂರ್ಣ ಅಭಿಪ್ರಾಯ ತಿಳಿಯಲು ಈ ವಿಡಿಯೋ ನೋಡಿ....

English summary
Kiccha Sudeep praises about Kannada Movie 'Naanu Avanalla Avalu'. Abhinaya Chakravarthi appreciated the National Award winning movie. 'Naanu Avanalla Avalu' Sanchari Vijay playing the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada