'ಮೈ ಆಟೋಗ್ರಾಫ್' ಸಿನಿಮಾಗಾಗಿ ಮನೆ ಪತ್ರ ಅಡ ಇಟ್ಟಿದ್ದರಂತೆ ಕಿಚ್ಚ ಸುದೀಪ್

By ಫಿಲ್ಮ್ ಡೆಸ್ಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳು ಪೂರೈಸಿದೆ. ಕಲಾಬದುಕಿನ 25ನೇ ವರ್ಷದ ಸಂಭ್ರಮವನ್ನು ಕಿಚ್ಚ ಸುದೀಪ್ ದುಬೈನಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಖುಷಿಯಲ್ಲಿ ಸುದೀಪ್ ಅಭಿನಯದ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರನ್ನು ದುಬೈನ ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ.

Recommended Video

ಸುದೀಪ್ ಮನೆ ಅಡವಿಟ್ಟು ಮಾಡಿದ ಸಿನಿಮಾ ಇದು | Filmibeat Kannada

ಜನವರಿ 31ಕ್ಕೆ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೀಸರ್ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಕಿಚ್ಚ ದುಬೈನಿಂದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕಿಚ್ಚ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 25 ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಸುದೀಪ್ ಮೈ ಆಟೋಗ್ರಾಫ್ ಸಿನಿಮಾಗಾಗಿ ಮನೆ ಪತ್ರ ಅಡ ಇಟ್ಟ ಬಗ್ಗೆ ರಿವೀಲ್ ಮಾಡಿದ್ದಾರೆ.

ಮೈ ಆಟೋಗ್ರಾಫ್ ಸುದೀಪ್ ಗೆ ಮರುಹುಟ್ಟು ನೀಡಿದ ಸಿನಿಮಾ

ಮೈ ಆಟೋಗ್ರಾಫ್ ಸುದೀಪ್ ಗೆ ಮರುಹುಟ್ಟು ನೀಡಿದ ಸಿನಿಮಾ

ಮೈ ಆಟೋಗ್ರಾಫ್ ಸಿನಿಮಾ ಪ್ರಾರಂಭಮಾಡುವ ಮೊದಲು ಸುದೀಪ್ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದರು. ಚಿತ್ರರಂಗದಲ್ಲಿ ಸುದೀಪ್ ಅವರ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಈ ಸಮಯದಲ್ಲಿ ಸುದೀಪ್ ಧೈರ್ಯ ಮಾಡಿ, ತನ್ನದೆ ನಿರ್ಮಾಣದಲ್ಲಿ, ತನ್ನದೇ ನಿರ್ದೇಶನದಲ್ಲಿ ಮಾಡಿದ ಸಿನಿಮಾ ಮೈ ಆಟೋಗ್ರಾಫ್. ಆ ಸಮಯದಲ್ಲಿ ಸುದೀಪ್ ಎದುರಿಸಿದ ಕಷ್ಟಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಹಠದ ಮೇಲೆ ಮೈ ಆಟೋಗ್ರಾಫ್ ಸಿನಿಮಾ ಮಾಡಿದೆ

ಹಠದ ಮೇಲೆ ಮೈ ಆಟೋಗ್ರಾಫ್ ಸಿನಿಮಾ ಮಾಡಿದೆ

'ಮೈ ಆಟೋಗ್ರಾಫ್ ಸಿನಿಮಾ ಹಿಂದಿನ ಚಿತ್ರಗಳು ಫ್ಲ್ಯಾಪ್ ಆಗಿದ್ದವು. ತುಂಬಾ ಕಷ್ಟವಾಗಿತ್ತು. ಫ್ಲ್ಯಾಪ್ ಆಗೋದೆ ಆದರೆ, ಅದನ್ನ ನಾನೆ ಕೊಡ್ತಿನಿ, ನನ್ನ ದುಡ್ಡು ಅಂತ ನಿರ್ಧರಿಸಿ ಹಠದ ಮೇಲೆ ಮೈ ಆಟೋಗ್ರಾಫ್ ಸಿನಿಮಾ ಮಾಡಿದೆ. ಗೊತ್ತು ಗೊತ್ತಿಲ್ಲದೆನೋ ಒಂದಿಷ್ಟು ಹೊಸ ಆಲೋಚನೆ ಬರ್ತಿತ್ತು. ಅಲ್ಲಿಂದ ತುಂಬಾ ಕಾನ್ಫಿಡೆಂಟ್ ಬಂತು.'

ಸಿನಿಮಾ ಸೂಪರ್ ಹಿಟ್ ಆಯಿತು

ಸಿನಿಮಾ ಸೂಪರ್ ಹಿಟ್ ಆಯಿತು

'ಆ ಸಮಯದಲ್ಲಿ ನನ್ನ ಸಿನಿಮಾಗಳು ಅಷ್ಟು ಚೆನ್ನಾಗಿ ಹೋಗುತ್ತಿರಲ್ಲ. ಏನಾದರೂ ಅಪ್ಪಿತಪ್ಪಿ ಆಟೋಗ್ರಾಫ್ ಓಡಿಲ್ಲ ಎಂದಿದ್ದರೆ ಮುಂದಿನ ಸಿನಿಮಾದ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ. ಅದೃಷ್ಟಕ್ಕೆ ಸಿನಿಮಾ ಚೆನ್ನಾಗಿ ಓಡಿತು.'

ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ

ಚಿತ್ರಕ್ಕಾಗಿ ಮನೆ ಪತ್ರ ಅಡ ಇಟ್ಟಿದ್ದ ಸುದೀಪ್

ಚಿತ್ರಕ್ಕಾಗಿ ಮನೆ ಪತ್ರ ಅಡ ಇಟ್ಟಿದ್ದ ಸುದೀಪ್

'ಮೈ ಆಟೋಗ್ರಫ್ ರಿಲೀಸ್ ಆದ ದಿನ ನಾನು ಪ್ರಿಯಾಗೆ ಹೇಳಿದ್ದೆ, ಈ ಸಿನಿಮಾ ಓಡಿಲ್ಲ ಎಂದರೆ ಮನೆ ಬಿಟ್ಟು ಹೋಗಲು ರೆಡಿ ಇರು ಎಂದು. ಯಾಕೆಂದರೆ ನಾನು ಮನೆ ಪತ್ರವನ್ನು ಅಡ ಇಟ್ಟಿದ್ದೆ. ಅವತ್ತಿಗೆ ತುಂಬ ಸಾಲ ಬೇರೆ ಮಾಡಿದ್ದೆ. ಅಪ್ಪಿತಪ್ಪಿ ಓಡಿರಲ್ಲ ಎಂದರೆ ತುಂಬಾ ಕಷ್ಟವಿತ್ತು. ಪ್ರಿಯಾಗೆ ಹೇಳಿದಾಗ ಸೂಟ್ ಕೇಸ್ ಪ್ಯಾಕ್ ಮಾಡಲ್ಲ, ಮನೆ ಬಿಟ್ಟುಹೋಗಬೇಕಾಗಿಲ್ಲ ಉತ್ತಮ ಕೆಲಸ ಮಾಡಿದ್ದೀರಿ ಎಂದು ಹೇಳಿದ್ದರು'

ಫಸ್ಟ್ ಶೋ ರಿಪೋರ್ಟ್ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದ ಸುದೀಪ್

ಫಸ್ಟ್ ಶೋ ರಿಪೋರ್ಟ್ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದ ಸುದೀಪ್

'ಫಸ್ಟ್ ಶೋ ರಿಪೋರ್ಟ್ ಬಂದ ಬಳಿಕ ನಾನು ಮಗು ತರ ಅತ್ತಿದ್ದೆ. ನನಗೆ ಇನ್ನು ನೆನಪಿದೆ ನಾನು ಅಡ ಇಟ್ಟ ಆ ಮನೆ ನಂದಾಗಿರಲಿಲ್ಲ. ತಂದೆಯ ಮನೆ, ಅದನ್ನು ಬರೆದು ಕೊಟ್ಟಿದೆ.' ಎಂದು ಮೈ ಆಟೋಗ್ರಾಫ್ ಸಮಯದ ಅನುಭವನನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Kiccha Sudeep remembers his My Autograph movie in Virtual Press Meet with karnataka's Media from Dubai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X