'ಕೆ.ಜಿ.ಎಫ್' ಟ್ರೈಲರ್ ಕಂಡು ಕ್ಲೀನ್ ಬೌಲ್ಡ್ ಆದ ತಾರೆಯರು.!

Recommended Video

KGF Kannada Movie : ಯಶ್ ಕೆಜಿಎಫ್ ಟ್ರೈಲರ್ ಕಂಡ ತಾರೆಯರು ಕ್ಲೀನ್ ಬೋಲ್ಡ್ | FILMIBEAT KANNADA

ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ಟ್ರೈಲರ್ ಬಿಡುಗಡೆಗೊಂಡಿದೆ. ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.

ನಿರೀಕ್ಷಿಸಿದ ಹಾಗೆ 'ಕೆ.ಜಿ.ಎಫ್' ಟ್ರೈಲರ್ ಎಲ್ಲೆಡೆ ಧೂಳೆಬ್ಬಿಸಿದೆ. 'ಕೆ.ಜಿ.ಎಫ್' ಟ್ರೈಲರ್ ನೋಡಿ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಕೋಲಾರ ಚಿನ್ನದ ಗಣಿಯ ರಕ್ತ ಚರಿತ್ರೆ ಸಾರುವ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ಗೆ ರಾಮ್ ಗೋಪಾಲ್ ವರ್ಮಾ, ಕಿಚ್ಚ ಸುದೀಪ್, ನಟ ರಾನಾ ದಗ್ಗೂಬಾಟಿ ಸೇರಿದಂತೆ ಹಲವು ತಾರೆಯರು ಫಿದಾ ಆಗಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಸೋಷಿಯಲ್ ಮೀಡಿಯಾದಲ್ಲಿ 'ಕೆ.ಜಿ.ಎಫ್' ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ಟ್ರೈಲರ್ ಕಣ್ತುಂಬಿಕೊಂಡ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಎಲ್ಲಾ ಟ್ವೀಟ್ ಗಳು ಇಲ್ಲಿವೆ ನೋಡಿರಿ...

ಕೆ.ಜಿ.ಎಫ್ ಬಗ್ಗೆ ಸುದೀಪ್ ಮಾತು

''ಜ್ವಾಲಾಮುಖಿ ಇನ್ನೇನು ಸ್ಫೋಟಗೊಳ್ಳುವ ಹಾಗಿದೆ. 'ಕೆ.ಜಿ.ಎಫ್' ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ನಿರ್ದೇಶಕ ಪ್ರಶಾಂತ್ ನೀಲ್ ಗೆ ಹ್ಯಾಟ್ಸ್ ಆಫ್. ಯಶ್ ಲುಕ್ ಚೆನ್ನಾಗಿದೆ. ಹೊಂಬಾಳೆ ಫಿಲ್ಮ್ಸ್ ಪ್ಯಾಶನ್ ಗೆ ನನ್ನ ಅಭಿನಂದನೆಗಳು'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಹೆಮ್ಮೆ ಪಟ್ಟ ಜಗ್ಗೇಶ್

''ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ನವಿಲುಗರಿ. ಎದೆ ಉಬ್ಬಿತು ಕನ್ನಡಕ್ಕೆ ಮಾಡಿದ ಕರ್ತವ್ಯ ಕಂಡು. ಭಾರತದ ದಶ ದಿಕ್ಕು ತಲುಪಲಿ ಕನ್ನಡಿಗರ ಕಾಯಕ. ಕನ್ನಡ ತಾಯಿ ಚಾಮುಂಡಿ ಹಾಗೂ ಕನ್ನಡಿಗರ ಆಶೀರ್ವಾದ ನಿಮಗಿರಲಿ'' ಎಂದು ಕೆ.ಜಿ.ಎಫ್ ತಂಡಕ್ಕೆ ಜಗ್ಗೇಶ್ ಶುಭ ಹಾರೈಸಿದ್ದಾರೆ.

ಶುಭ ಕೋರಿದ ರಾನಾ ದಗ್ಗೂಬಾಟಿ

''ಕೆ.ಜಿ.ಎಫ್' ಚಿತ್ರತಂಡಕ್ಕೆ ನನ್ನ ಶುಭಾಶಯಗಳು'' ಎಂದು ರಾನಾ ದಗ್ಗೂಬಾಟಿ ಟ್ವೀಟ್ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಟ್ವೀಟ್ ನೋಡಿ...

''ರೋಮಾಂಚನಗೊಳಿಸುವ 'ಕೆ.ಜಿ.ಎಫ್' ಟ್ರೈಲರ್ ನ ನೀವು ನೋಡಲೇಬೇಕು. ಉತ್ತರ ಭಾರತ ಚಿತ್ರಗಳಿಗಿಂತ ದಕ್ಷಿಣ ಭಾರತದ ಚಿತ್ರಗಳು ಬೆಳೆಯುತ್ತಿವೆ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸಂತಸಗೊಂಡ ಶ್ರೀಮುರಳಿ

''ಒಂದೊಳ್ಳೆ ಅನುಭವ ಬೇಕು ಅಂದ್ರೆ ನೀವು 'ಕೆ.ಜಿ.ಎಫ್' ಟ್ರೈಲರ್ ನ ನೋಡಲೇಬೇಕು. ಕನ್ನಡ ಚಿತ್ರರಂಗಕ್ಕೆ ಇದು ಹೆಮ್ಮೆಯ ಕ್ಷಣ. ಈ ಚಿತ್ರವನ್ನ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ'' - ಶ್ರೀಮುರಳಿ, ನಟ

ಹ್ಯಾಟ್ಸ್ ಆಫ್ ಎಂದ ಶಶಾಂಕ್

''ಕನ್ನಡ ಚಿತ್ರವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಅಂದರೆ ಇದೇ. ಯಶ್, ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ನೀಲ್ ಮತ್ತು ಕೆ.ಜಿ.ಎಫ್ ಇಡೀ ತಂಡಕ್ಕೆ ನಾನು ಹ್ಯಾಟ್ಸ್ ಆಫ್'' - ನಿರ್ದೇಶಕ ಶಶಾಂಕ್

ಡ್ಯಾನಿಶ್ ಸೇಠ್ ಟ್ವೀಟ್ ನೋಡಿ

''ವಾವ್! ವಾವ್! ವಾವ್! ಕೆ.ಜಿ.ಎಫ್ ಟ್ರೈಲರ್ ಬೊಂಬಾಟ್ ಆಗಿದೆ. ಇದು ಭಾರತದಲ್ಲೇ ನಾನು ನೋಡಿರುವ ಅತ್ಯುತ್ತಮ ಟ್ರೈಲರ್. ಯಶ್ ಲುಕ್ ಸಖತ್ತಾಗಿದೆ'' ಎಂದು ನಟ ಡ್ಯಾನಿಶ್ ಸೇಠ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Kiccha Sudeep, RGV, Rana Daggubati, Jaggesh have taken their Twitter accounts to appreciate Yash starrer KGF Trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X