For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಫ್ಯಾನ್ಸ್ ದಾಖಲೆ ಮುರಿದ ಸುದೀಪ್ ಫ್ಯಾನ್ಸ್: ಇಷ್ಟೇನಾ ಎಂದ ದರ್ಶನ್ ಫ್ಯಾನ್ಸ್ ?

  |

  ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಶುರುವಾಗಿದೆ. ಟ್ವಿಟ್ಟರ್ ಟ್ರೆಂಡ್ ಕ್ರಿಯೇಟ್ ಮಾಡಿ ಸದ್ದು ಮಾಡುತ್ತಿದ್ದಾರೆ. ಅಭಿನಯ ಚಕ್ರವರ್ತಿ ಬಾದ್‌ಶಾ ಸುದೀಪ್ ಫ್ಯಾನ್ಸ್ ಟ್ವಿಟ್ಟರ್‌ನಲ್ಲಿ ಹೊಸ ದಾಖಲೆ ಬರೆದು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿದ್ದ ಆ ದಾಖಲೆ ಈಗ ಸುದೀಪ್ ಫ್ಯಾನ್ಸ್ ಪಾಲಾಗಿದೆ.

  ಇತ್ತೀಚಿನ ವರ್ಷಗಳಲ್ಲಿ ಸೂಪರ್​ ಸ್ಟಾರ್‌ಗಳ ಫ್ಯಾನ್ಸ್ ಟ್ವಿಟ್ಟರ್​ ಟ್ರೆಂಡ್​ ಸರ್ವೇ ಸಾಧಾರಣ ಅನ್ನುವಂತಾಗಿದೆ. ಒಂದು ಹ್ಯಾಶ್‌ಟ್ಯಾಗ್ ಕ್ರಿಯೇಟ್​ ಮಾಡಿ, ಅದನ್ನು ಸಾಧ್ಯವಾದಷ್ಟು ರೀಟ್ವಿಟ್ ಮಾಡಿ 24 ಗಂಟೆಗಳ ಕಾಲ ಟ್ರೆಂಡ್‌ನಲ್ಲಿ ಇರುವಂತೆ ನೋಡಿಕೊಳ್ಳೋದು. ಆ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ನೆಚ್ಚಿನ ನಟನ ಹೆಸರು ರಾರಾಜಿಸುವಂತೆ ಮಾಡುತ್ತಾರೆ. ಇದೇ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಮಾಡಿದ್ದ ದಾಖಲೆಯನ್ನು ನಿನ್ನೆ(ಆಗಸ್ಟ್ 28) ಸುದೀಪ್ ಫ್ಯಾನ್ಸ್ ಮುರಿದಿದ್ದಾರೆ. ಕಿಂಗ್‌ ಕಿಚ್ಚ ಬರ್ತ್‌ಡೇ ಸಿಡಿಪಿ 44 ಲಕ್ಷ ಟ್ವೀಟ್ ಆಗಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಅತಿದೊಡ್ಡ ಬರ್ತ್‌ಡೇ ಸಿಡಿಪಿ ಟ್ರೆಂಡ್ ಆಗಿದೆ.

  ಅಭಿಮಾನಿಗಳ ಅಭಿಮಾನಿ ಕಿಚ್ಚ: ಶಿವಣ್ಣ ರಿಲೀಸ್ ಮಾಡಿದ ಬರ್ತ್‌ಡೇ ಕಾಮನ್ ಡಿಪಿ ವೈರಲ್ಅಭಿಮಾನಿಗಳ ಅಭಿಮಾನಿ ಕಿಚ್ಚ: ಶಿವಣ್ಣ ರಿಲೀಸ್ ಮಾಡಿದ ಬರ್ತ್‌ಡೇ ಕಾಮನ್ ಡಿಪಿ ವೈರಲ್

  24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಟ್ವೀಟ್​ ಆದ ಟ್ಯಾಗ್​​​​​​ ಯಾವುದು ಅನ್ನುವುದು ಫ್ಯಾನ್ಸ್‌ಗೆ ಪ್ರತಿಷ್ಠೆ ಅನ್ನಿಸಿಕೊಳ್ಳುತ್ತದೆ. ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷದವರೆಗೂ ಈ ದಾಖಲೆ ಸುದೀಪಿಯನ್ಸ್ ಹೆಸರಿನಲ್ಲಿತ್ತು. ಕಳೆದ ವರ್ಷ ಸುದೀಪ್ ಬರ್ತ್‌ಡೇ ಸಂಭ್ರಮದಲ್ಲಿ 'ಕಿಂಗ್​ ಕಿಚ್ಚ ಬರ್ತ್‌ಡೇ ಸಿಡಿಪಿ' ಟ್ಯಾಗ್‌ನ 30 ಲಕ್ಷಕ್ಕೂ ಹೆಚ್ಚು ಟ್ವೀಟ್​ ಮಾಡಿದ್ದರು. ಅದಕ್ಕಿಂತ ಮೊದಲು ಈ​ ದಾಖಲೆ ಡಿ ಹಾರ್ಟ್ಸ್ ಹೆಸರಿನಲ್ಲಿತ್ತು. ಕಳೆದ ವರ್ಷ ದರ್ಶನ್​ ಬರ್ತ್‌ಡೇ ಸಂಭ್ರಮದಲ್ಲಿ 'ಡಿ ಬಾಸ್​ ಬರ್ತ್‌ಡೇ ಸಿಡಿಪಿ' ಹ್ಯಾಶ್‌ಟ್ಯಾಗ್​​ 26 ಲಕ್ಷಕ್ಕೂ ಅಧಿಕ ಬಾರಿ ರೀಟ್ವೀಟ್​ ಆಗಿತ್ತು. ಈ ವರ್ಷ ಯಶ್​ ಹುಟ್ಟುಹಬ್ಬದ ದಿನ ಅವರ ಫ್ಯಾನ್ಸ್ ಎಲ್ಲಾ ದಾಖಲೆ ಮುರಿಯಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

  42 ಲಕ್ಷ ಟ್ವೀಟ್ ಮಾಡಿದ ದರ್ಶನ್ ಫ್ಯಾನ್ಸ್ ದಾಖಲೆ

  42 ಲಕ್ಷ ಟ್ವೀಟ್ ಮಾಡಿದ ದರ್ಶನ್ ಫ್ಯಾನ್ಸ್ ದಾಖಲೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ ಫಾಲೋಯಿಂಗ್ ಬಗ್ಗೆ ಹೊಸದಾಗಿ ಹೇಳುವುದು ಬೇಡ. ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ 'ಡಿ ಬಾಸ್​ ಬರ್ತ್‌ಡೇ ಸಿಡಿಪಿ' ಟ್ಯಾಗ್‌ನ 42 ಲಕ್ಷ ಬಾರಿ ರೀಟ್ವಿಟ್ ಮಾಡಿ ಹೊಸ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭ ಅಲ್ಲ ಅಂತಲೂ ಅಂದುಕೊಂಡಿದ್ದರು. ಆದರೆ ಸುದೀಪ್ ಫ್ಯಾನ್ಸ್ ಇದೀಗ 44 ಲಕ್ಷ ಟ್ವೀಟ್ ಮಾಡಿ ಕಾಲರ್ ಎಗರಿಸಿದ್ದಾರೆ. ಇದನ್ನು ನೋಡಿ ದರ್ಶನ್‌ ಫ್ಯಾನ್ಸ್ ಇಷ್ಟೇನಾ ? ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ವೀಟ್ ವಾರ್ ನಡೀತಿದೆ.

  ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿ: ಪತ್ನಿ ಜೊತೆ ಮಿಂಚಿದ ಚಾಲೆಂಜಿಂಗ್ ಸ್ಟಾರ್ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿ: ಪತ್ನಿ ಜೊತೆ ಮಿಂಚಿದ ಚಾಲೆಂಜಿಂಗ್ ಸ್ಟಾರ್

  ಮುಂದಿನ ವರ್ಷ ದಾಖಲೆ ಮುರಿಯುತ್ತೇವೆ!

  ಮುಂದಿನ ವರ್ಷ ದಾಖಲೆ ಮುರಿಯುತ್ತೇವೆ!

  ದರ್ಶನ್‌ ಫ್ಯಾನ್ಸ್ ಮಾಡಿದ್ದ 42 ಲಕ್ಷ ಟ್ವೀಟ್‌ನ ಮೀರಿಸಿ, ಸುದೀಪ್ ಫ್ಯಾನ್ಸ್ 44 ಲಕ್ಷ ಟ್ವೀಟ್ ಮಾಡಿದ್ದಾರೆ. ನಾವು ನಿಮಗೆ 12 ಲಕ್ಷ ಹೆಚ್ಚು ಟಾರ್ಗೆಟ್ ಕೊಟ್ಟಿದ್ದೆವು. ನೀವು 2 ಲಕ್ಷ ಹೆಚ್ಚು ಟ್ವೀಟ್ ಮಾಡಿದ್ದೀರಾ ಅಷ್ಟೆ. ಮುಂದಿನ ವರ್ಷ ಈ ದಾಖಲೆಯನ್ನು ನಾವು ಮುರಿಯುತ್ತೇವೆ ಎಂದು ದರ್ಶನ್ ಫ್ಯಾನ್ಸ್ ಹೇಳುತ್ತಿದ್ದಾರೆ. ಸುದೀಪ್ ಫ್ಯಾನ್ಸ್ ನಮ್ಮ ದಾಖಲೆ ಮುರಿದಿರುವುದು ಹೌದು. ಆದರೆ ಅಂತರ ಭಾರೀ ಕಮ್ಮಿ ಇದೆ. ಇದನ್ನು ನಾವು ಅನಾಯಾಸವಾಗಿ ದಾಟಿ ತೋರಿಸುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಫ್ಯಾನ್ಸ್‌ ಸದ್ಯಕ್ಕೆ ನಾವೇ ನಂಬರ್ ವನ್ ಎಂದು ಸಂಭ್ರಮಿಸುತ್ತಿದ್ದಾರೆ.

  ಸುದೀಪ್ ಬರ್ತ್‌ಡೇ ಸಿಡಿಪಿ ವೈರಲ್

  ಸುದೀಪ್ ಬರ್ತ್‌ಡೇ ಸಿಡಿಪಿ ವೈರಲ್

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಈ ಬಾರಿ ಸುದೀಪ್ ಫ್ಯಾನ್ಸ್ ಮಾಡಿದ್ದ ಬರ್ತ್‌ಡೇ ಕಾಮನ್ ಡಿಪಿ ಶೇರ್ ಮಾಡಿದ್ದರು. ಚಕ್ಕಂಬಕ್ಕಳ ಹಾಕಿ ಕುಳಿತ ಕಿಚ್ಚನನ್ನು ಫ್ಯಾನ್ಸ್ ಪ್ರೀತಿಯಿಂದ ಮುತ್ತಿಕೊಂಡಿದ್ದಾರೆ. ನೆಚ್ಚಿನ ನಟನನ್ನು ನೋಡಲು ಮೇಲೆ ಏರಿ ಬಂದ ಅಭಿಮಾನಿಗಳನ್ನು ಸುದೀಪ್ ತಮ್ಮ ಕೈಯಲ್ಲಿ ಹಿಡಿದು ಪ್ರೀತಿಯಿಂದ ನೋಡುತ್ತಿರುವಂತೆ ಕಾಮನ್ ಡಿಪಿ ಡಿಸೈನ್ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನಿ ಕಿಚ್ಚ ಎಂದು ಸಾರಿ ಹೇಳುವ ಆ ಡಿಸಿಪಿ ಫ್ಯಾನ್ಸ್ ಸೊಷಿಯಲ್ ಮೀಡಿಯಾ ಸ್ಟೇಟಸ್, ಡಿಪಿ ಫೋಟೊ ಆಗಿ ರಾರಾಜಿಸುತ್ತಿದೆ. ದಾಖಲೆಯ ಮಟ್ಟದಲ್ಲಿ ಲೈಕ್, ಶೇರ್, ಕಾಮೆಂಟ್ ಗಿಟ್ಟಿಸಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಬರ್ತ್‌ಡೇ ಸಂಭ್ರಮ ಜೋರಾಗಿದೆ.

  ಸುದೀಪ್ ಹುಟ್ಟುಹಬ್ಬ ಆಚರಣೆ ಅನುಮಾನ!

  ಸುದೀಪ್ ಹುಟ್ಟುಹಬ್ಬ ಆಚರಣೆ ಅನುಮಾನ!

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಅಬ್ಬರಿಸುತ್ತಿದ್ದಾರೆ. ನಟನಾಗಿ, ಗಾಯಕನಾಗಿ, ನಿರ್ದೇಶಕನಾಗಿ, ಕಿರುತೆರೆಯ ನಿರೂಪಕನಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿಮಾಗಳಲ್ಲೂ ಕಿಚ್ಚ ಜಾದೂ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಟ ಸುದೀಪ್ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಅಪ್ಪು ಅಗಲಿಕೆಯ ನೋವಿನಲ್ಲಿ ಈ ವರ್ಷವೂ ಅವರು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವುದಿಲ್ಲ ಎನ್ನಲಾಗುತ್ತಿದೆ. ಆದರೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ವಿಕ್ರಾಂತ್ ರೋಣ' ಸಿನಿಮಾ ಓಟಿಟಿಗೆ ಬರುತ್ತಿದೆ. ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.

  Recommended Video

  Chiyaan Vikram in Bangalore | ಅಭಿಮಾನಿಗಳನ್ನು ನೋಡಿ ಫಿದಾ ಆದ್ರು ವಿಕ್ರಮ್ | Cobra
  English summary
  Kiccha Sudeep's Fans Breaks Record of Darshan's Fans. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X