Mark X Airtel: ಏರ್‌ಟೆಲ್ ಟೆಲಿಕಾಂ ಜೊತೆ ಕೈಜೋಡಿಸಿದ 'ಮಾರ್ಕ್' ಕಿಚ್ಚ; ಏನಿದು ಒಪ್ಪಂದ?

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದೆ. ಇದೇ ಮೊದಲ ಬಾರಿಗೆ ಏರ್‌ಟೆಲ್ ಜೊತೆ 'ಮಾರ್ಕ್' ಹೊಸ ಒಪ್ಪಂದ ಮಾಡಿಕೊಂಡಿದೆ.

ಸಿನಿಮಾ ಪ್ರಚಾರಕ್ಕೆ ನಾನಾ ಮಾರ್ಗಗಳಿವೆ. ಡಿಜಿಟಲ್ ಯುಗದಲ್ಲಿ ಅದು ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ. ನಾನಾ ರೀತಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಬಳಿಗೆ ತೆಗೆದುಕೊಂಡು ಹೋಗುವ ಅವರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಪ್ರಯತ್ನ ನಡೆಯುತ್ತದೆ. 'ಮಾರ್ಕ್' ಚಿತ್ರದ ಕ್ರೇಜ್ ನೋಡಿ ಏರ್‌ಟೆಲ್ ಟೆಲಿಕಾಂ ಹೊಸ ಒಪ್ಪಂದ ಮಾಡಿಕೊಂಡಿದೆ. ಏರ್‌ಟೆಲ್ ಸಿಇಒ ಮತ್ತು ಟೀಮ್ ನಮ್ಮ ನಟ ಸುದೀಪ್ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿ ಐತಿಹಾಸಿಕ ಸಹಯೋಗದ ಬಗ್ಗೆ ಘೋಷಿಸಿದ್ದಾರೆ.

Kiccha Sudeep s Mark Seals Historic Airtel Deal Ahead of Christmas Release

ಈ ಒಪ್ಪಂದದ ಪ್ರಕಾರ ಕರ್ನಾಟಕದ 60,000 ಅಂಗಡಿಗಳಲ್ಲಿ 10 ಲಕ್ಷ ವಿಶೇಷ 'ಮಾರ್ಕ್' ಚಿತ್ರದ ಪೋಸ್ಟರ್ ಇರುವ ಸಿಮ್ ಪ್ಯಾಕ್‌ಗಳು ಮಾರಾಟವಾಗಲಿದೆ. ಸ್ಪೆಷಲ್ 9 ನಂಬರ್ ಸೀರಿಸ್‌ ಸಿಮ್‌ಗಳು, ರಿಯಾಯಿತಿ ಪ್ಯಾಕ್‌ಗಳು, 100 ಅದೃಷ್ಟಶಾಲಿ ವಿಜೇತರು ಮತ್ತು ಇನ್ನೂ ಸಾಕಷ್ಟು ಸಂಗತಿಗಳಿವೆ. ಈ ಹಿಂದೆ ದಕ್ಷಿಣದ ಕೆಲ ಸಿನಿಮಾಗಳ ಜೊತೆ ಏರ್‌ಟೆಲ್ ಇದೇ ರೀತಿ ಒಪ್ಪಂದ ಮಾಡಿಕೊಂಡಿತ್ತು. ಕನ್ನಡದಲ್ಲಿ ಇದೇ ಮೊದಲು.

'ಮ್ಯಾಕ್ಸ್' ಚಿತ್ರದ ಕಾಂಬಿನೇಷನ್‌ನಲ್ಲಿ 'ಮಾರ್ಕ್' ಸಿನಿಮಾ ಬರ್ತಿದೆ. ಡಿಸೆಂಬರ್ 25ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಮತ್ತೊಮ್ಮೆ ಮಾಹಿತಿ ನೀಡಿದೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಜೊತೆ ಸೇರಿ ಸುದೀಪ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್, ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ.

ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲೇ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಸಖತ್ ಕಿಕ್ ಕೊಟ್ಟಿತ್ತು. ಅದೇ ರೀತಿ ಮತ್ತೊಮ್ಮೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಲು 'ಮಾರ್ಕ್' ಚಿತ್ರತಂಡ ಮುಂದಾಗಿದ್ದಾರೆ. 107 ದಿನಗಳ ಕಾಲ ಸುದೀಪ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇತ್ತೀಚೆಗೆ ಕುಂಬಳಕಾಯಿ ಹೊಡೆದು ಚಿತ್ರತಂಡ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಆರಂಭಿಸಿತ್ತು.

ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳ ರೀತಿ ನಾಯಕ, ನಾಯಕಿ ಎನ್ನುವ ಕಾನ್ಸೆಪ್ಟ್ ಇಲ್ಲದೇ ಒಂದು ಪೊಲೀಸ್ ಆಪರೇಷನ್ ಸುತ್ತಾ 'ಮಾರ್ಕ್' ಚಿತ್ರದ ಕಥೆ ಸಾಗಲಿದೆ. ವಿಜಯ್ ಕಾರ್ತಿಕೇಯನ್ ಕೆಲಸದ ಬಗ್ಗೆ ಸುದೀಪ್ ಬಹಳ ಖುಷಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿಯುವ ಮುನ್ನ ಕಾರ್ ಅನ್ನು ನಿರ್ದೇಶಕರಿಗೆ ಗಿಫ್ಟ್ ಆಗಿ ಕೊಟ್ಟಿದ್ದರು. ಇನ್ನು ಚಿತ್ರದಲ್ಲಿ ಅರ್ಜುನ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.

ಪಾತ್ರಕ್ಕಾಗಿ ಗುಂಗುರು ಕೂದಲಿನಲ್ಲಿ ಸ್ಪೆಷಲ್ ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚಿದ್ದಾರೆ. ಚಿತ್ರೀಕರಣ ಮುಗಿದರೂ ಅದೇ ಹೇರ್‌ಸ್ಟೈಲ್ ಮುಂದುವರೆಸುತ್ತಿದ್ದಾರೆ. 'ಮ್ಯಾಕ್ಸ್' ಬಳಿಕ 'ಬಿಲ್ಲ ರಂಗ ಬಾಷ' ಚಿತ್ರವನ್ನು ಸುದೀಪ್ ಆರಂಭಿಸಿದ್ದರು. ಒಂದು ಶೆಡ್ಯೂಲ್ ಬಳಿಕ 'ಮಾರ್ಕ್' ಚಿತ್ರ ಶುರುವಾಗಿತ್ತು. ಜುಲೈನಲ್ಲಿ ಶುರುವಾಗಿದ್ದ ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿತ್ತು. ಬಿಗ್‌ಬಾಸ್ ನಿರೂಪಣೆ ನಡು ನಡುವೆ ಈ ಚಿತ್ರದ ಚಿತ್ರೀಕರಣವನ್ನು ಸುದೀಪ್ ಮುಗಿಸಿದ್ದಾರೆ.

More from Filmibeat

Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X