»   »  ಸುದೀಪ್ ಹುಟ್ಟುಹಬ್ಬಕ್ಕೆ ಬಂತು 3ನೇ ಉಡುಗೊರೆ

ಸುದೀಪ್ ಹುಟ್ಟುಹಬ್ಬಕ್ಕೆ ಬಂತು 3ನೇ ಉಡುಗೊರೆ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಎರಡು ದಿನ ಮಾತ್ರ ಬಾಕಿಯಿದೆ. ಈ ನಡುವೆ ಸುದೀಪ್ ಅಭಿನಯಿಸುತ್ತಿರುವ ಚಿತ್ರಗಳಿಂದ ಬರ್ತ್ ಡೇ ಉಡುಗೊರೆಗಳು ಕೊಡಲು ಸಿದ್ದತೆಗಳು ನಡೆಯುತ್ತಿದೆ.

ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದಿ ವಿಲನ್' ಚಿತ್ರತಂಡ ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ. ಅದರ ಜೊತೆಗೆ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ.

ಆದ್ರೆ, 'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಮುಂಚೆಯೇ ಗಿಫ್ಟ್ ಕೊಟ್ಟಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಮುಂದೆ ಓದಿ.....

ಸುದೀಪ್ ಹೊಸ ಪೋಸ್ಟರ್

ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ, 'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಕಿಚ್ಚನ ಹೊಸ ಪೋಸ್ಟರ್ ಗಳನ್ನ ಬಿಡುಗಡೆ ಮಾಡಿದೆ. ಅದು ಎರಡು ದಿನ ಮುಂಚೆಯೇ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದೆ.

ಕಣ್ಮನ ಸೆಳೆಯುತ್ತಿದೆ ಕಿಚ್ಚನ ಲುಕ್

'ರಾಜು ಕನ್ನಡ ಮೀಡಿಯಂ' ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್ ಗಳು ಒಂದಕ್ಕಿಂತ ಮತ್ತೊಂದು ಸ್ಟೈಲಿಶ್ ಆಗಿದ್ದು, ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ.

'ಆಗರ್ಭ ಶ್ರೀಮಂತ' ಸುದೀಪ್

ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರವನ್ನ ನಿರ್ವಹಿಸಿದ್ದು, ಆಗರ್ಭ ಶ್ರೀಮಂತನಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದ ಪೂರ್ತಿ ಸುದೀಪ್ ಅವರ ಪಾತ್ರ ಪ್ರಮುಖವಾಗಿದೆಯಂತೆ.

ಸ್ಟೈಲಿಶ್ ಸ್ಟಾರ್ ಗೆ ಫಿದಾ

ಈ ಹಿಂದೆ ಯಾವ ಚಿತ್ರದಲ್ಲೂ ಸುದೀಪ್ ಅವರನ್ನ ಈ ರೀತಿಯ ಲುಕ್ ನಲ್ಲಿ ನೋಡಿರಲಿಲ್ಲ. ಹೀಗಾಗಿ, ಈ ಗೆಟಪ್ ಸಾಮಾನ್ಯವಾಗಿ ಅಭಿಮಾನಿಗಳನ್ನ ಥ್ರಿಲ್ ಹೆಚ್ಚಿಸಿದೆ.

Sudeep Birthday : The Villain Movie Team Decide Special Gift To Him

ಅತಿ ಶೀಘ್ರದಲ್ಲಿ ಬಿಡುಗಡೆ

'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಹಾಗೂ ಅವಂತಿಕಾ ಶೆಟ್ಟಿ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಆದಷ್ಟೂ ಬೇಗ ತೆರೆ ಕಾಣಲಿದೆ. ಸುರೇಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ನರೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

English summary
Raju Kannada Medium Movie team released New posters of Kiccha Sudeep for Birthday special
Please Wait while comments are loading...