»   » ಮುಹೂರ್ತಕ್ಕೂ ಮೊದಲೇ ಕಿಚ್ಚನ 'ಪೈಲ್ವಾನ್' ಚಿತ್ರದ ಕ್ರೇಜ್ ಶುರುವಾಯ್ತು!

ಮುಹೂರ್ತಕ್ಕೂ ಮೊದಲೇ ಕಿಚ್ಚನ 'ಪೈಲ್ವಾನ್' ಚಿತ್ರದ ಕ್ರೇಜ್ ಶುರುವಾಯ್ತು!

Posted By:
Subscribe to Filmibeat Kannada

ನಟ ಸುದೀಪ್ ಅವರ ಮುಂದಿನ ಸಿನಿಮಾಗಳ ಸಾಲಿನಲ್ಲಿ 'ಪೈಲ್ವಾನ್' ಚಿತ್ರ ಕೂಡ ಒಂದು. ಈ ಸಿನಿಮಾದ ಮುಹೂರ್ತ ಇನ್ನೂ ನೆರವೇರಿಲ್ಲ. ಅಷ್ಟರಲ್ಲಾಗಲೇ, ಸಿನಿಮಾದ ಕ್ರೇಜ್ ಶುರುವಾಗಿದೆ.

'ಪೈಲ್ವಾನ್' ಪೋಸ್ಟರ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ನೋಡಿ?

ಸುದೀಪ್ ಹುಟ್ಟುಹಬ್ಬಕ್ಕೆ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಆದರೆ ಇದೀಗ ಈ ಪೋಸ್ಟರ್ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಹೆಂಗಸರು ಕೂಡ ಕಿಚ್ಚನ ಲುಕ್ ನೋಡಿ ಫಿದಾ ಆಗಿ ಅವರು ಅದೇ ರೀತಿ ಪೋಸ್ ಕೊಟ್ಟಿದ್ದಾರೆ.

Kiccha Sudeep's 'Pailwan' movie craze.

ಸುದೀಪ್ ಅವರ ಅನೇಕ ಅಭಿಮಾನಿಗಳು ಬಾಕ್ಸರ್ ಗೆಟಪ್ ನಲ್ಲಿ ಸುದೀಪ್ ಅವರ ಶೈಲಿಯಲ್ಲಿ ನಿಂತು ಫೋಟೋ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುದೀಪ್ ಸಿನಿಮಾಗಾಗಿ ಅಭಿಮಾನಿಗಳು ಯಾವ ಮಟ್ಟಿಗೆ ಕಾಯುತ್ತಿರುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Kiccha Sudeep's 'Pailwan' movie craze.

'ಹೆಬ್ಬುಲಿ' ನಂತರ ಈ ಚಿತ್ರದಲ್ಲಿ ಮತ್ತೆ ಸುದೀಪ್ ಅವರಿಗೆ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸುದೀಪ್ 'ದಿ ವಿಲನ್' ಮತ್ತು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ಅವುಗಳ ನಂತರ 'ಪೈಲ್ವಾನ್' ಚಿತ್ರದ ಶೂಟಿಂಗ್ ಶುರುವಾಗಲಿದೆ.

English summary
Kiccha Sudeep's 'Pailwan' movie craze.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X