»   » 'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

Posted By:
Subscribe to Filmibeat Kannada
Sudeep `Pailwan' Movie First Look Poster Released | Filmbeat Kannada

ನಟ ಕಿಚ್ಚ ಸುದೀಪ್ 'ಪೈಲ್ವಾನ್' ಹೆಸರಿನಲ್ಲಿ ಸಿನಿಮಾ ಮಾಡುತ್ತಾರೆ ಅಂತ ಇತ್ತೀಚಿಗಷ್ಟೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಈಗ 'ಪೈಲ್ವಾನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಹಿಂದೆ ಎಂದು ಕಾಣಿಸಿಕೊಳ್ಳದ ಬಾಕ್ಸರ್ ಲುಕ್ ನಲ್ಲಿ ಕಿಚ್ಚ ಮಿಂಚಿದ್ದಾರೆ.

'ಪೈಲ್ವಾನ್' ಚಿತ್ರದ ಫಸ್ಟ್ ಲುಕ್ ಸಖತ್ ಖದರ್ ಆಗಿದೆ. ಈ ಲುಕ್ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು 'ಪೈಲ್ವಾನ್' ಅಬ್ಬರ ಜೋರಾಗಿದೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ನಿರ್ದೇಶಕ ಕೃಷ್ಣ 'ಪೈಲ್ವಾನ್' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

'ಪೈಲ್ವಾನ್' ಪೋಸ್ಟರ್

ನಟ ಕಿಚ್ಚ ಸುದೀಪ್ ಹುಟ್ಟುಹಬ್ಬ ನಾಳೆ (ಸಪ್ಟೆಂಬರ್ 2) ಕ್ಕೆ ಇದ್ದು, ಅವರ ಬರ್ತ್ ಡೇ ವಿಶೇಷವಾಗಿ 'ಪೈಲ್ವಾನ್' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.

ಬಾಕ್ಸರ್ ಕಿಚ್ಚ

'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಬಾಕ್ಸರ್ ಪಾತ್ರವನ್ನು ಮಾಡಲಿದ್ದು, ಇದೇ ಮೊದಲ ಬಾರಿಗೆ ಅವರು ಕ್ರೀಡೆಗೆ ಸಂಭಂದಿಸಿದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಈಗಾಗಲೇ ಬಾಕ್ಸಿಂಗ್ ತರಬೇತಿ ಕೂಡ ಸುದೀಪ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.

'ವಿಲನ್' ನಂತರ 'ಪೈಲ್ವಾನ್' ಆದ ಕಿಚ್ಚ ಸುದೀಪ್

ಕೃಷ್ಣ ನಿರ್ದೇಶನ

ಈ ಹಿಂದೆ 'ಹೆಬ್ಬುಲಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ಕೃಷ್ಣ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಜೊತೆಗೆ ಈ ಚಿತ್ರದ ಮೂಲಕ ಕೃಷ್ಣ ತಮ್ಮ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿದ್ದು, ಕೃಷ್ಣ ಅವರ ಪತ್ನಿ ಸ್ವಪ್ನ ಈ ಚಿತ್ರದ ನಿರ್ಮಾಪಕರು.

ಅರ್ಜುನ್ ಜನ್ಯ

'ಹೆಬ್ಬುಲಿ' ಸಿನಿಮಾಗೆ ಸಂಗೀತ ನೀಡಿದ್ದ ಅರ್ಜುನ್ ಜನ್ಯ ಈ ಚಿತ್ರದಲ್ಲಿಯೂ ತಮ್ಮ ಸಂಗೀತ ಯಾತ್ರೆ ಮುಂದುವರೆಸಲಿದ್ದಾರೆ.

ಅಕ್ಟೋಬರ್ ನಲ್ಲಿ ಶೂಟಿಂಗ್

ಸದ್ಯ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಶುರು ಆಗಲಿದೆಯಂತೆ.

ಸುದೀಪ್ ಹುಟ್ಟುಹಬ್ಬಕ್ಕೆ ಬಂತು 3ನೇ ಉಡುಗೊರೆ

ಹುಟ್ಟುಹಬ್ಬ ವಿಶೇಷಗಳು

'ಪೈಲ್ವಾನ್' ಚಿತ್ರದೊಂದಿಗೆ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ಮತ್ತು 'ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್ ಸಹ ಬಿಡುಗಡೆಯಾಗಲಿದೆ.

ಸೆಪ್ಟಂಬರ್ 2ಕ್ಕೆ ಸರ್ಪ್ರೈಸ್, ಸುದೀಪ್ ವೃತ್ತಿ ಜೀವನದಲ್ಲಿ ಇದು ಮೊದಲು.!

ಸಖತ್ ಬ್ಯುಸಿ

ಸದ್ಯ ಸುದೀಪ್ ಸಖತ್ ಬ್ಯುಸಿ ಇದ್ದು, 'ಪೈಲ್ವಾನ್', 'ದಿ ವಿಲನ್', 'ಕೋಟಿಗೊಬ್ಬ 3', ತೆಲುಗು ಸಿನಿಮಾ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಲಿದ್ದಾರೆ.

English summary
Kiccha Sudeep's 'Pailwan' movie first look poster released. the movie is directed by krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada